ಹಾಟ್​ ಅವತಾರದಲ್ಲಿ ಸೌಂದರ್ಯ ನಿಧಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಹಾಟ್​ ಅವತಾರದಲ್ಲಿ ಸೌಂದರ್ಯ ನಿಧಿ

ದಕ್ಷಿಣ ಭಾರತದ ಖ್ಯಾತ ನಟಿ ನಿಧಿ ಅಗರ್ವಾಲ್ ಅವರು ಇತ್ತೀಚಗೆ ಫಿಲ್ಮ್‌ಫೇರ್ ಮ್ಯಾಗಜೀನ್​ ಶೂಟ್​ನಲ್ಲಿ ಭಾಗವಹಿಸಿದ್ದು, ಮುಖಪುಟಕ್ಕೆ ನೀಡಿರುವ ಬೋಲ್ಡ್ ಫೋಟೋಗಳು ವೈರಲ್​ ಆಗಿವೆ.

ಬೆಂಗಳೂರು ನಂಟು

ನಿಧಿ ಅಗರ್ವಾಲ್ ಹುಟ್ಟಿದ್ದು ಹೈದರಾಬಾದ್‌ನಲ್ಲಾದರೂ, ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಇಲ್ಲಿನ ವಿದ್ಯಾಶಿಲ್ಪ ಅಕಾಡೆಮಿಯಲ್ಲಿ ಶಾಲಾ ಶಿಕ್ಷಣ ಮುಗಿಸಿದರು. ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವಿ ಪಡೆದಿದ್ದಾರೆ.

ಸಿನಿ ಜರ್ನಿ

ಮಾಡೆಲಿಂಗ್ ಹಿನ್ನೆಲೆಯುಳ್ಳ ಇವರು ಭರತನಾಟ್ಯ ಮತ್ತು ಬ್ಯಾಲೆ ನೃತ್ಯದಲ್ಲಿ ಪರಿಣಿತರು. 2017ರಲ್ಲಿ 'ಮುನ್ನಾ ಮೈಕಲ್' ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಿಧಿ, ಆ ಬಳಿಕ ದಕ್ಷಿಣ ಭಾರತದತ್ತ ಮುಖ ಮಾಡಿದರು.

ಪ್ರಭಾಸ್​ಗೆ ನಾಯಕಿ

ತೆಲುಗಿನಲ್ಲಿ ರಾಮ್ ಪೋತಿನೇನಿ ಜತೆಗಿನ ಸೂಪರ್ ಹಿಟ್ 'ಇಸ್ಮಾರ್ಟ್ ಶಂಕರ್' ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು. ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಚಿತ್ರದಲ್ಲಿ ನಾಯಕಿಯಾಗಿಯೂ ಗಮನ ಸೆಳೆದಿದ್ದಾರೆ.

ಮೊದಲ ಬೋಲ್ಡ್​ ಲುಕ್​

ಫಿಲ್ಮ್‌ಫೇರ್ ಇತ್ತೀಚಿನ ಶೂಟ್‌ನಲ್ಲಿ ನಿಧಿ ಲುಕ್ ಅತ್ಯಂತ ಆಕರ್ಷಕವಾಗಿದೆ. ಕಪ್ಪು ಬಣ್ಣದ ಟೈ ಮತ್ತು ಫೆದರ್ ಟ್ರಿಮ್ ಹೆಮ್ ಇರುವ ಶೀರ್ ಪಿಂಕ್ ಆರ್ಗನ್ಜಾ ಟಾಪ್ ಧರಿಸಿ ಗೋಡೆಗೆ ಕಾಲು ಒರಗಿಸಿ ನಿಂತಿದ್ದ ಅವರ ಪೋಸ್ ಮಾದಕವಾಗಿದೆ.

ಎರಡನೇ ಬೋಲ್ಡ್ ಲುಕ್

ನಿಧಿ ಅವರ ಎರಡನೇ ಲುಕ್ ಮೈಂಡ್ ಬ್ಲೋಯಿಂಗ್ ಆಗಿದೆ. ಕಪ್ಪು ಬಣ್ಣದ ಕ್ರಾಪ್ ಬ್ರಾ ಟಾಪ್, ಬೂದು ಬಣ್ಣದ ಡ್ರಾಸ್ಟ್ರಿಂಗ್ ಮಿನಿ ಸ್ಕರ್ಟ್ ಧರಿಸಿ ನೆಲದ ಮೇಲೆ ಕುಳಿತು ಗಲ್ಲಕ್ಕೆ ಕೈಕೊಟ್ಟಿದ್ದ ಅವರ ಪೋಸ್ ತುಂಬಾ ಬೋಲ್ಡ್​ ಆಗಿದೆ.

ಮೂರನೇ ಬೋಲ್ಡ್ ಲುಕ್

ಮೂರನೇ ಲುಕ್ ಸಂಪೂರ್ಣವಾಗಿ 'ಬಾಸ್ ಲೇಡಿ' ಶೈಲಿಯಲ್ಲಿದೆ. ಡೀಪ್-ಕಟ್ ಇರುವ ಬಿಳಿ ಬ್ರಾಲೆಟ್‌ನ ಮೇಲೆ ಬಿಳಿ ಬ್ಲೇಜರ್ ಧರಿಸಿ, ಅದಕ್ಕೆ ಮ್ಯಾಚಿಂಗ್ ಆಗುವ ಬಿಳಿ ಮಿನಿ ಸ್ಕರ್ಟ್ ಧರಿಸಿ ನಿಧಿ ಮಿಂಚಿದ್ದಾರೆ.

ಫ್ಯಾನ್ಸ್​ ಫಿದಾ

ಫಿಲ್ಮ್​ಫೇರ್​ಗೆ ನೀಡಿರುವ ಬೋಲ್ಡ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನಿಧಿಯ ಮೈಮಾಟವನ್ನು ಕಂಡು ಫ್ಯಾನ್ಸ್​ ಹಾಗೂ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.