ಉಚಿತವಾಗಿ ಸಿಕ್ಕರೂ ಈ ಮೀನುಗಳನ್ನು ತಿನ್ನಲೇಬೇಡಿ!

ಭಾನುಪ್ರಿಯ ಡಿ.ಕೆ

ಉಚಿತವಾಗಿ ಸಿಕ್ಕರೂ ಈ ಮೀನುಗಳನ್ನು ತಿನ್ನಲೇಬೇಡಿ!

ಮೀನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದರಲ್ಲಿ ಒಮೆಗಾ-೩ ಕೊಬ್ಬಿನಾಮ್ಲಗಳು ಮತ್ತು ಪ್ರೊಟೀನ್ ಸಮೃದ್ಧವಾಗಿರುತ್ತದೆ ನಿಜ. ಆದರೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವ ಕೆಲವು ಜಾತಿಯ ಮೀನುಗಳು ಅಮೃತವಾಗುವ ಬದಲು ಜೀವರಕ್ಷಕರಿಗೇ ಕುತ್ತು ತರುತ್ತಿವೆ.

ಆಫ್ರಿಕನ್ ಚಾಟಿಫಿಶ್

ಭಾರತದಲ್ಲಿ ಈ ಮೀನಿನ ಸಾಕಣೆಯನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಇದು ಗಲೀಜು ನೀರು, ಚರಂಡಿ ಹಾಗೂ ಕಲುಷಿತ ಕೆರೆಗಳಲ್ಲಿ ಯಾವುದೇ ಆಮ್ಲಜನಕವಿಲ್ಲದಿದ್ದರೂ ಬದುಕಬಲ್ಲದು. ಇದು ಮಾಂಸಾಹಾರಿಯಾಗಿದ್ದು, ಕೊಳೆತ ಮಾಂಸ ಮತ್ತು ತ್ಯಾಜ್ಯಗಳನ್ನು ತಿಂದು ಬೆಳೆಯುತ್ತದೆ. ಇದನ್ನು ತಿಂದರೆ ಕ್ಯಾನ್ಸರ್, ಹೊಟ್ಟೆಯ ಕಾಯಿಲೆಗಳು ಮತ್ತು ಚರ್ಮದ ಅಲರ್ಜಿ ಬರುವ ಸಾಧ್ಯತೆ ತೀರಾ ಹೆಚ್ಚು.

ಟಿಲಾಪಿಯಾ ಮೀನು

ನೈಸರ್ಗಿಕವಾಗಿ ಸಿಗುವ ಟಿಲಾಪಿಯಾ ಒಳ್ಳೆಯದೇ ಆದರೂ, ಇತ್ತೀಚೆಗೆ ಕೃತಕ ಕೆರೆಗಳಲ್ಲಿ ಆಂಟಿಬಯೋಟಿಕ್ಸ್ ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬಳಸಿ ಇವುಗಳನ್ನು ಅತಿ ವೇಗವಾಗಿ ಬೆಳೆಸಲಾಗುತ್ತದೆ. ಇವುಗಳಿಗೆ ಹಾಕುವ ಆಹಾರವೂ ಗುಣಮಟ್ಟದ್ದಾಗಿರುವುದಿಲ್ಲ. ಇದನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಅಸ್ತಮಾ ಸಮಸ್ಯೆ ಹೆಚ್ಚಾಗಬಹುದು.

ಪಂಗಾಶಿಯಸ್ ಅಥವಾ ಬಾಸಾ ಮೀನು

ಹೋಟೆಲ್‌ಗಳಲ್ಲಿ ಫಿಶ್ ಫಿಂಗರ್ಸ್ ಅಥವಾ ಫಿಶ್ ಫ್ರೈಗೆ ಹೆಚ್ಚಾಗಿ ಬಳಸುವ ಈ ಬಾಸಾ ಮೀನುಗಳನ್ನು ಹೆಚ್ಚಾಗಿ ಕಲುಷಿತ ನದಿಗಳು ಅಥವಾ ಕೊಳಗಳಲ್ಲಿ ಬೆಳೆಸಲಾಗುತ್ತದೆ. ಇವುಗಳ ಜೀವಿತಾವಧಿಯಲ್ಲಿ ಬ್ಯಾಕ್ಟೀರಿಯಾಗಳು ಬರದಂತೆ ತಡೆಯಲು ಭೀಕರ ರಾಸಾಯನಿಕಗಳನ್ನು ಬಳಸಲಾಗುತ್ತದೆ.

ಕಡಲ ಕುದುರೆ

ಸಮುದ್ರದ ಆಳದಲ್ಲಿ ಸಿಗುವ ದೊಡ್ಡ ಗಾತ್ರದ ಮೀನುಗಳಾದ ಇವುಗಳ ಜೀವಿತಾವಧಿ ಹೆಚ್ಚು. ಇವು ಸಮುದ್ರದಲ್ಲಿರುವ ಸಣ್ಣ ಸಣ್ಣ ವಿಷಕಾರಿ ಮೀನುಗಳನ್ನು ತಿನ್ನುತ್ತಾ ಬೆಳೆಯುತ್ತವೆ. ಗರ್ಭಿಣಿಯರು ಮತ್ತು ಸಣ್ಣ ಮಕ್ಕಳು ಇದನ್ನು ತಿಂದರೆ ನರಮಂಡಲದ ಸಮಸ್ಯೆಗಳು ಮತ್ತು ಮಗುವಿನ ಬೆಳವಣಿಗೆಯಲ್ಲಿ ಕುಂಠಿತ ಉಂಟಾಗಬಹುದು.

ಸ್ಥಳೀಯ ಕೆಮಿಕಲ್ ಮಿಶ್ರಿತ ಒಣ ಮೀನು

ಒಣ ಮೀನುಗಳು ಆರೋಗ್ಯಕ್ಕೆ ಒಳ್ಳೆಯದೇ ಆದರೂ, ಮಾರುಕಟ್ಟೆಯಲ್ಲಿ ಸಿಗುವ ಕೆಲವು ಒಣ ಮೀನುಗಳನ್ನು ದೀರ್ಘಕಾಲ ಇಡಲು ಮತ್ತು ನೊಣಗಳು ಕೂರದಂತೆ ತಡೆಯಲು 'ಫಾರ್ಮಾಲಿನ್' ಎಂಬ ಅಪಾಯಕಾರಿ ರಾಸಾಯನಿಕವನ್ನು ಸ್ಪ್ರೇ ಮಾಡಲಾಗುತ್ತದೆ.