ಮುಂಗಾರು ಮಳೆ - 2 ಚಿತ್ರದ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟ ನಟಿ ನೇಹಾ ಶೆಟ್ಟಿ ಚಿನ್ನದ ಬಣ್ಣದ ಸೀರೆಯುಟ್ಟು ಸಾಂಪ್ರದಾಯಕ ಲುಕ್ನಲ್ಲಿ ಮಿಂಚಿದ್ದಾರೆ. ನೇಹಾ ಅವರ ಫೋಟೋಗಳು ಸದ್ದು ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವೃತ್ತಿಜೀವನದ ಆರಂಭ
ನೇಹಾ ಶೆಟ್ಟಿ ಅವರು ಮಾಡೆಲಿಂಗ್ ಲೋಕದಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 2014ರಲ್ಲಿ 'ಮಿಸ್ ಮಂಗಳೂರು' ಕಿರೀಟವನ್ನು ಮುಡಿಗೇರಿಸಿಕೊಂಡರು.
ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ
2016ರಲ್ಲಿ ತೆರೆಕಂಡ ಮುಂಗಾರು ಮಳೆ-2 ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪರಿಚಯವಾದರು. ಇದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ನಟಿಸಿದರು.
ತೆಲುಗು ಚಿತ್ರರಂಗದಲ್ಲಿ ಯಶಸ್ಸು
ಕನ್ನಡದ ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಇವರು, 'ಡಿಜೆ ಟಿಲ್ಲು' ಚಿತ್ರದ 'ರಾಧಿಕಾ' ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ಈ ಸಿನಿಮಾ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಿತು.
ಶಿಕ್ಷಣ ಮತ್ತು ತರಬೇತಿ
ನಟನೆಯಲ್ಲಿ ಹೆಚ್ಚಿನ ಪರಿಣಿತಿ ಪಡೆಯಲು ಇವರು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ (New York Film Academy) ತರಬೇತಿಯನ್ನು ಪಡೆದಿದ್ದಾರೆ.
ಇತ್ತೀಚಿನ ಚಿತ್ರಗಳು
ಇತ್ತೀಚೆಗೆ 'ಬೆದುರುಲಂಕ 2012', 'ಗ್ಯಾಂಗ್ಸ್ ಆಫ್ ಗೋದಾವರಿ' ಮತ್ತು 'ರೂಲ್ಸ್ ರಂಜನ್' ನಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸೌತ್ ಇಂಡಿಯನ್ ಸಿನಿಮಾದಲ್ಲಿ ಬ್ಯುಸಿ ನಟಿಯಾಗಿದ್ದಾರೆ.
ಸಾಮಾಜಿಕ ಜಾಲತಾಣ
ಇವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ತಮ್ಮ ಫ್ಯಾಷನ್ ಸೆನ್ಸ್ ಮತ್ತು ಗ್ಲಾಮರಸ್ ಫೋಟೋಶೂಟ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಸಾಂಪ್ರಾಯಿಕ ಉಡುಗೆಯಲ್ಲಿ ಮಿಂಚು
ಇದೀಗ ಸಾಂಪ್ರದಾಯಿಕ ಸೀರೆಯುಟ್ಟು ವಿವಿಧ ಭಂಗಿಯಲ್ಲಿ ನೇಹಾ ಕ್ಯಾಮೆರಾಗೆ ಪೋಸ್ ನೀಡಿದ್ದು, ಫೋಟೋಗಳು ವೈರಲ್ ಆಗಿವೆ. ನೇಹಾ ಸೌಂದರ್ಯವನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.