ಅಪ್ಸರೆಯಂತೆ ಕಂಗೊಳಿಸಿದ ನೇಹಾ ಶೆಟ್ಟಿ!

ಭಾನುಪ್ರಿಯ ಡಿ.ಕೆ

ಅಪ್ಸರೆಯಂತೆ ಕಂಗೊಳಿಸಿದ ನೇಹಾ ಶೆಟ್ಟಿ!

ನಟಿ ನೇಹಾ ಶೆಟ್ಟಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿಯಾಗಿದ್ದು, ಮುಂಗಾರು ಮಳೆ 2 ಮೂಲಕ ವೃತ್ತಿ ಜೀವನವನ್ನು ಆರಂಭಿಸಿದರು.

ಲೆಹೆಂಗಾ ಲುಕ್​

ನಟಿ ನೇಹಾ ಶೆಟ್ಟಿ ಐವರಿ ಬಣ್ಣದ ಸಾಂಪ್ರದಾಯಿಕ ಲೆಹೆಂಗಾ ಉಡುಪನ್ನು ಧರಿಸಿದ್ದು, ಈ ಚೋಲಿಯ ಮೇಲೆ ಅತ್ಯಂತ ಸೂಕ್ಷ್ಮವಾದ ಎಂಬ್ರಾಯ್ಡರಿ, ಜರಿ ಮತ್ತು ಹೊಳೆಯುವ ಸೀಕ್ವೆನ್ಸ್ ಕೆಲಸಗಳನ್ನು ಮಾಡಲಾಗಿದೆ.

ಹಸಿರು ಪಚ್ಚೆ ಆಭರಣಗಳು

ಉಡುಪಿಗೆ ಹೊಂದುವಂತಹ ಆಭರಣಗಳು ನೋಡುಗರ ಗಮನ ಸೆಳೆಯುತ್ತವೆ. ಕುತ್ತಿಗೆಗೆ ವಜ್ರ ಹಾಗೂ ಹಸಿರು ಪಚ್ಚೆ ಕಲ್ಲುಗಳಿಂದ ವಿನ್ಯಾಸಗೊಳಿಸಲಾದ ಆಕರ್ಷಕ ಚೋಕರ್ ನೆಕ್ಲೇಸ್ ಧರಿಸಿದ್ದಾರೆ. ಇದಕ್ಕೆ ಮ್ಯಾಚಿಂಗ್ ಆಗುವ ಇಯರ್‌ರಿಂಗ್ಸ್ ಹಾಗೂ ಡಿಸೈನರ್ ಉಂಗುರಗಳು ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಸಿನಿಮಾಗಳು

ನೇಹಾ ಶೆಟ್ಟಿ ಭಾರತೀಯ ಚಿತ್ರರಂಗದ ಪ್ರಮುಖ ನಟಿಯಾಗಿದ್ದು, ಮುಖ್ಯವಾಗಿ ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. 'ಮುಂಗಾರು ಮಳೆ 2' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಇವರು, ನಂತರ ತೆಲುಗಿನ 'ಡಿಜೆ ಟಿಲ್ಲು' ಚಿತ್ರದ 'ರಾಧಿಕಾ' ಪಾತ್ರದ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು

ಪ್ರಶಸ್ತಿಗಳು

ನಟಿ ನೇಹಾ ಶೆಟ್ಟಿ ಅವರು ತಮ್ಮ ಅಭಿನಯಕ್ಕಾಗಿ ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಖ್ಯವಾಗಿ, ಸೂಪರ್ ಹಿಟ್ ತೆಲುಗು ಸಿನಿಮಾ 'ಡಿಜೆ ಟಿಲ್ಲು' ಚಿತ್ರದ ಅತ್ಯುತ್ತಮ ನಟನೆಗಾಗಿ ಅವರು ಪ್ರತಿಷ್ಠಿತ SIIMA ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿಯ ನಾಮನಿರ್ದೇಶನವನ್ನು ಪಡೆದುಕೊಂಡಿದ್ದಾರೆ.

ಜನಪ್ರಿಯತೆ

ಇತ್ತೀಚೆಗೆ ನೇಹಾ ಬೆದುರುಲಂಕಾ ಟಿಲ್ಲು ಸ್ಕ್ವೇರ್ ಮತ್ತು ನಟ ವಿಶ್ವಾಕ್ ಸೇನ್ ಜೊತೆಗೆ ಆಕ್ಷನ್ ಸಿನಿಮಾ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.