ಮುಂಗಾರು ಮಳೆ 2 ಸಿನಿಮಾದಿಂದ ಕನ್ನಡಿಗರ ಮನದಲ್ಲಿ ಮನೆ ಮಾಡಿರುವ ಕನ್ನಡತಿ ನೇಹಾ ಶೆಟ್ಟಿ ಅವರ ಹೊಸ ಫೋಟೋಶೂಟ್ ವೈರಲ್ ಆಗಿದೆ. ಡೆನಿಮ್ ಲುಕ್ನಲ್ಲಿ ನೇಹಾ ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ.
ಫ್ಯಾನ್ಸ್ ಫಿದಾ
ಡೆನಿಮ್ ಲುಕ್ನಲ್ಲಿ ನೇಹಾ ಅವರ ಹಾಟ್ನೆಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದು, ಕಾಮೆಂಟ್ಗಳ ಮೂಲಕ ನೆಚ್ಚಿನ ನಟಿಯ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ.
ಕನ್ನಡ ಕುವರಿ
ಕನ್ನಡದ 'ಮುಂಗಾರು ಮಳೆ 2' ಸಿನಿಮಾದಲ್ಲಿ ಬಣ್ಣ ಹಚ್ಚಿದ ಇವರು, ನಂತರ ತೆಲುಗಿನ 'ಮೆಹಬೂಬಾ' ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದರು.
ಯಶಸ್ಸು ಮತ್ತು ಜನಪ್ರಿಯತೆ
ಯೂತ್ ಫುಲ್ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಡಿಜೆ ಟಿಲ್ಲು' ಸಿನಿಮಾದ ರಾಧಿಕಾ ಪಾತ್ರದ ಮೂಲಕ ಇವರು ದೇಶಾದ್ಯಂತ ಅಪಾರ ಜನಪ್ರಿಯತೆ ಮತ್ತು ಮನ್ನಣೆಗಳಿಸಿದರು.
ಫ್ಯಾಷನ್ ಮತ್ತು ಮಾಡೆಲಿಂಗ್
ಸಿನಿಮಾಗಳ ಜೊತೆಗೆ ತಮ್ಮ ವಿಭಿನ್ನ ಫ್ಯಾಷನ್ ಸ್ಟೈಲ್, ಆಕರ್ಷಕ ಫೋಟೋಶೂಟ್‌ಗಳು ಹಾಗೂ ಗ್ಲಾಮರಸ್ ಲುಕ್‌ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನೇಹಾ ಅವರು ಸದಾ ಚರ್ಚೆಯಲ್ಲಿರುತ್ತಾರೆ.