ಮಲಯಾಳಂ ನಟಿ ನಜ್ರಿಯಾ ನಜೀಮ್ ಬಹುತೇಕ ಮಂದಿಗೆ ತಿಳಿದಿದ್ದಾರೆ. ತಮ್ಮ ನಟನೆಯಿಂದಲೇ ಎಲ್ಲರ ಗಮನ ಸೆಳೆದಿರುವ ನಜ್ರಿಯಾ, ಇದೀಗ ಗ್ಲಾಮರಸ್ ಫೋಟೋಗಳ ಮೂಲಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ.
ಬಹುಮುಖ ಪ್ರತಿಭೆ
ನಜ್ರಿಯಾ ಅವರು ಕೇವಲ ನಟಿಯಷ್ಟೇ ಅಲ್ಲದೆ, ಹಿನ್ನೆಲೆ ಗಾಯಕಿ ಮತ್ತು ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಇವರು ಬಹಳ ಜನಪ್ರಿಯರು.
ಬಾಲನಟಿಯಾಗಿ ಆರಂಭ
ಇವರು ತಮ್ಮ ವೃತ್ತಿಜೀವನವನ್ನು ಮಲಯಾಳಂ ಕಿರುತೆರೆಯಲ್ಲಿ ನಿರೂಪಕಿಯಾಗಿ (Anchor) ಆರಂಭಿಸಿದರು ಮತ್ತು 2006ರಲ್ಲಿ 'ಪಳುಂಕು' ಚಿತ್ರದ ಮೂಲಕ ಬಾಲನಟಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.
ಖ್ಯಾತಿ ತಂದುಕೊಟ್ಟ ಚಿತ್ರಗಳು
'ನೇರಂ', 'ರಾಜಾ ರಾಣಿ', 'ಓಮ್ ಶಾಂತಿ ಓಶಾನ' ಮತ್ತು 'ಬೆಂಗಳೂರು ಡೇಸ್' ನಜ್ರಿಯಾ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಮತ್ತು ಅಭಿಮಾನಿ ಬಳಗವನ್ನು ತಂದುಕೊಟ್ಟವು.
ಪ್ರಶಸ್ತಿಗಳು
2014ರಲ್ಲಿ 'ಓಮ್ ಶಾಂತಿ ಓಶಾನ' ಮತ್ತು 'ಬೆಂಗಳೂರು ಡೇಸ್' ಚಿತ್ರಗಳಲ್ಲಿನ ಅಭಿನಯಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು.
ವೈಯಕ್ತಿಕ ಜೀವನ
2014ರಲ್ಲಿ ಖ್ಯಾತ ನಟ ಫಹಾದ್ ಫಾಸಿಲ್ ಅವರನ್ನು ವಿವಾಹವಾದರು. ಮದುವೆಯ ನಂತರ ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದ ಇವರು, ಕೂಡೆ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದರು.
ಹಾಟ್ ಫೋಟೋ ವೈರಲ್
ಸದ್ಯ ಮಿನಿ ಸ್ಕರ್ಟ್ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ನಜ್ರಿಯಾ ಶೇರ್ ಮಾಡಿಕೊಂಡಿದ್ದಾರೆ. ನಟಿಯ ಹಾಟ್ ಅವತಾರ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.