ಎಕ್ಸ್​ಪ್ರೆಶನ್ಸ್​ ಕ್ವೀನ್​ ನಜ್ರಿಯಾ!

ಮಮತಾ

ಎಕ್ಸ್​ಪ್ರೆಶನ್ಸ್​ ಕ್ವೀನ್​ ನಜ್ರಿಯಾ!

ಹಲವು ದಿನಗಳ ನಂತರ ಮಲಯಾಳಂ ನಟಿ ನಜ್ರಿಯಾ ನಜೀಮ್ ಬಿಳಿ ಹಾಗೂ ಹಸಿರು ಬಣ್ಣ ಮಿಶ್ರಿತ ಶಾರ್ಟ್​ ಫ್ರಾಕ್​ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ಮೆನಿ ಮೂಡ್ಸ್​ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಅಪ್ಸರೆ ಎಂದ ಫ್ಯಾನ್ಸ್

ಮೆನಿ ಮೂಡ್ಸ್​ ಎನ್ನುವ ನಜ್ರಿಯಾ ನಜೀಮ್ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದು ಎಕ್ಸ್​ಪ್ರೆಶನ್ಸ್​ ಕ್ವೀನ್​ ಹಾಗೂ ಸ್ಟಿಲ್​ ಬ್ರೇಕಿಂಗ್​ ಹಾರ್ಟ್​, ಮ್ಯೂಸಿಕ್​ ಅಂಡ್​ ಯೂ, ನೀವು ದೇವಲೋಕದ ಅಪ್ಸರೆಯಂತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಗಾಯಕಿ ನಜ್ರಿಯಾ

ನಜ್ರಿಯಾ ಕೇವಲ ನಟಿ ಮಾತ್ರವಲ್ಲ ನಿರ್ಮಾಪಕಿ ಮತ್ತು ಗಾಯಕಿಯೂ ಹೌದು. ಸಣ್ಣವರಂತೆ ನಟಿಸುವ ಅವರ ಮುಗ್ಧ ನಟನೆಯೇ ಎಲ್ಲರನ್ನು ಮೆಚ್ಚಿಸುವಂತೆ ಮಾಡುತ್ತದೆ. ಬೆಂಗಳೂರು ಡೇಸ್, ರಾಜರಾಣಿ ಸಿನಿಮಾಗಳು ಸಾಕಷ್ಟು ಹಿಟ್ ಕಂಡಿದ್ದವು.

‘ಗ್ರೇಸಿಯಾಸ್ ಎಲ್ ಕ್ಲಾಸಿಕೋ’

ಮಾಲಿವುಡ್‌ನ ಸ್ಟಾರ್ ನಟ ಟೊವಿನೋ ಥಾಮಸ್ ಮತ್ತು ಜನಪ್ರಿಯ ನಟಿ ನಜ್ರಿಯಾ ನಜೀಮ್ ‘ಗ್ರೇಸಿಯಾಸ್ ಎಲ್ ಕ್ಲಾಸಿಕೋ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ 'ಎಲ್ ಕ್ಲಾಸಿಕೋ' ಪಂದ್ಯ ನಡೆಯುವ ವೇಳೆ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

ಡಿಫರೆಂಟ್​ ಆಗಿ ಪೋಸ್ಟರ್​ ರಿವೀಲ್

ವಿಶ್ವದಾದ್ಯಂತ ಲಕ್ಷಾಂತರ ಫುಟ್‌ಬಾಲ್ ಅಭಿಮಾನಿಗಳು ಕುತೂಹಲದಿಂದ ವೀಕ್ಷಿಸುತ್ತಿದ್ದ ಈ ಪ್ರತಿಷ್ಠಿತ ಪಂದ್ಯದ ವೇಳೆ, ಕ್ರೀಡಾಂಗಣದ ಗ್ಯಾಲರಿಯಲ್ಲಿ ಉಪಸ್ಥಿತರಿದ್ದ ಟೊವಿನೋ ಥಾಮಸ್ ಮತ್ತು ನಜ್ರಿಯಾ ನಜೀಮ್ ಅವರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಲೈವ್ ಬಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಜಗತ್ತಿಗೆ ಪರಿಚಯಿಸಿದರು.

‘ಗ್ರೇಸಿಯಾಸ್ ಎಲ್ ಕ್ಲಾಸಿಕೋ’

ರಾಷ್ಟ್ರಪ್ರಶಸ್ತಿ ವಿಜೇತ 'ಸುಡಾನಿ ಫ್ರಮ್ ನೈಜೀರಿಯಾ' ಚಿತ್ರದ ನಿರ್ದೇಶಕ ಜಕರಿಯಾ ಮೊಹಮ್ಮದ್ ಅವರೊಂದಿಗೆ ಸೇರಿ ಮುಹ್ಸಿನ್ ಪರಾರಿ ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಮುಹ್ಸಿನ್ ಪರಾರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಟೊವಿನೋ ಥಾಮಸ್ ಮತ್ತು ನಜ್ರಿಯಾ ಮೊದಲ ಸಿನಿಮಾ

ಇದು ಟೊವಿನೋ ಥಾಮಸ್ ಮತ್ತು ನಜ್ರಿಯಾ ನಜೀಮ್ ಒಟ್ಟಿಗೆ ನಟಿಸುತ್ತಿರುವ ಮೊದಲ ಚಿತ್ರವಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸೂಕ್ಷ್ಮ ದರ್ಶಿನಿ ನಂತ್ರ ಗ್ಯಾಪ್​ ಯಾಕೆ?

ಸೂಕ್ಷ್ಮ ದರ್ಶಿನಿ ಸಿನಿಮಾ ಸಾಕಷ್ಟು ಹಿಟ್​ ಕಂಡಿತ್ತು. ಆನಂತರ ನಜ್ರಿಯಾ ಅವರು ಸೋಶಿಯಲ್​ ಮೀಡಿಯಾದಿಂದ ದೂರವಿರುವ ಬಗ್ಗೆ ಪೋಸ್ಟ್​ ಹಂಚಿಕೊಂಡಿದ್ದರು.