ಲೇಡಿ ಸೂಪರ್ ಸ್ಟಾರ್, ಬಹುಭಾಷಾ ನಟಿ ನಯನತಾರಾ ಅವರು ಇನ್ಸ್ಟಾಗ್ರಾಮ್ನಲ್ಲಿ ಹೊಸ ಗೆಟಪ್ನಲ್ಲಿರುವ ಫೋಟೋಸ್ ಹಂಚಿಕೊಂಡಿದ್ದಾರೆ. ಅವರ ಕಣ್ಣೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ಬ್ಯೂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಹೊಸ ಲುಕ್ನಲ್ಲಿ ನಯನತಾರಾ
ಬಿಳಿ ಬಣ್ಣದ ಉಡುಪಿನಲ್ಲಿ ಅವರು ಕಾಣಿಸಿಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹೀಗಿದೆ ಲೇಡಿ ಸೂಪರ್ ಸ್ಟಾರ್ ಧಿರಿಸು
ಸ್ಟ್ರೈಟ್ ಕುರ್ತಾ ಮತ್ತು ಚೂಡಿದಾರ್ ಧರಿಸಿ, ಅದಕ್ಕೆ ತಕ್ಕಂತೆ ತೆಳುವಾದ ಫ್ಲೋವಿ ದುಪಟ್ಟಾವನ್ನು ಧರಿಸಿದ್ದ ನಯನತಾರಾ ಸಿಲ್ವರ್ ಜುಮುಕಿ, ಸೂಕ್ಷ್ಮವಾದ ಮಾಂಗ್ ಟಿಕಾ ಹಾಗೂ ಬಳೆಗಳೊಂದಿಗೆ ತಮ್ಮ ಲುಕ್ ಅನ್ನು ಸಿಂಪಲ್ ಆಗಿ ಸುಂದರವಾಗಿಸಿಕೊಂಡಿದ್ದಾರೆ.
41ರಲ್ಲಿಯೂ ಎಂಥಾ ಸೌಂದರ್ಯಾ!
ನೀಲಿ ಬಣ್ಣದ ವಿಂಡೋ ಗ್ರಿಲ್ ಹಿನ್ನೆಲೆಯಲ್ಲಿ, ಸೂರ್ಯನ ಬೆಳಕು ಅವರ ಮೇಲೆ ಬೀಳುವಂತೆ ಕಾಣಿಸಿಕೊಂಡಿರುವ ಈ ಅಂದವು ಸಾಟಿ ಇಲ್ಲದಂತಿದ್ದು, ಅತಿ ಹೆಚ್ಚು ಆಭರಣಗಳು ಅಥವಾ ಅದ್ದೂರಿ ಬಟ್ಟೆಗಳಿಲ್ಲದೆಯೂ ಸುಂದರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಹಾಯ್ ಸಿನಿಮಾ
ಕಳೆದ ತಿಂಗಳು ನಟ ಕಾವಿನ್ ಜೊತೆ ನಟಿಸಿದ್ದ ಅವರ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ಹಾಯ್ ರಿಲೀಸ್ ಆಗಿತ್ತು. ವಿಷ್ಣು ಎಡವನ್ ಈ ಸಿನಿಮಾವು ಇಷ್ಟವಾಗುತ್ತದೆ. ಸ್ವತಂತ್ರ್ಯವಾಗಿ ಬದುಕಲು ಬಯಸುವ ಯುವತಿ..ಮದುವೆಗೆ ಇಚ್ಛಿಸುವ ಯುವಕನ ಸುತ್ತ ಈ ಸಿನಿಮಾದ ಕತೆ ಸುತ್ತುತ್ತದೆ
ಟಾಕ್ಸಿಕ್ ಹವಾ
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅಕ್ಕನಾಗಿ ನಟಿಸಿದ್ದು, ಸಾಕಷ್ಟು ಉತ್ತಮ ಪ್ರತಿಕ್ರಿಯೆ ನಯನಾ ನಟನೆಗೆ ಕೇಳಿಬಂದಿತ್ತು. ನಯನಾ ಅವರ ಪಾತ್ರದಲ್ಲಿ ಹೆಚ್ಚು ಜೀವಂತಿಕೆ ಇದೆ. ಸ್ಟೈಲಿಶ್ನೆಸ್ ಸಹ ಒಪ್ಪುವಂತಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
'ಮನ ಶಂಕರ ವರ ಪ್ರಸಾದ್ ಗಾರು' ಸಿನಿಮಾ
ಜನವರಿಯಲ್ಲಿ ಚಿರಂಜೀವಿ ಜೊತೆ ನಟಿಸಿದ 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರವು ಬ್ಲಾಕ್‌ಬಸ್ಟರ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಮಲಯಾಳಂನ ಬಹುನಿರೀಕ್ಷಿತ ಮಲ್ಟಿಸ್ಟಾರರ್ 'Patriot' ಚಿತ್ರವು ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣಲಿಲ್ಲ.
ನಯನಾ ಮುಂದಿರುವ ಸಿನಿಮಾಗಳಿವು
ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ಸಲ್ಮಾನ್ ಖಾನ್ ಜೊತೆಗಿನ ಮುಂದಿನ ದೊಡ್ಡ ಪ್ರಾಜೆಕ್ಟ್ ಸೇರಿದಂತೆ ಸಾಲು ಸಾಲು ಸಿನಿಮಾಗಳನ್ನು ನಯನತಾರಾ ಹೊಂದಿದ್ದಾರೆ.