ಬ್ಯೂಟಿ ಕ್ವೀನ್​ ನಯನತಾರಾ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಬ್ಯೂಟಿ ಕ್ವೀನ್​ ನಯನತಾರಾ!

ಲೇಡಿ ಸೂಪರ್​ಸ್ಟಾರ್​ ಖ್ಯಾತಿಯ ನಟಿ ನಯನತಾರಾ ಅವರು ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊ0ಡಿರುವ ಮಾದಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಗಂಗಾ ಮಿಂಚು

ನಯನತಾರಾ ಅವರು ಇತ್ತೀಚೆಗೆ ಬಿಡುಗಡೆಯಾದ 'ಟಾಕ್ಸಿಕ್' (Toxic) ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್ ಅವರ ಅಕ್ಕ ಗಂಗಾ ಪಾತ್ರದಲ್ಲಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ.

ಹೊಸ ಫೋಟೋಶೂಟ್

ಟಾಕ್ಸಿಕ್​ ಸಿನಿಮಾ ಬಿಡುಗಡೆ ಬೆನ್ನಲ್ಲೇ ತಮ್ಮ ವಿಭಿನ್ನ ಹಾಗೂ ಆಕರ್ಷಕ ಶೈಲಿಯ ಹೊಸ ಫೋಟೋಶೂಟ್‌ ಮೂಲಕ ನಯನತಾರಾ ಅವರು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.

ಮೊದಲ ಲುಕ್

ಮೊದಲ ಲುಕ್‌ನಲ್ಲಿ ಕ್ರೀಮ್ ಬಣ್ಣದ ಕಾರ್ಸೆಟ್ ಟಾಪ್ ಮತ್ತು ಮ್ಯಾಚಿಂಗ್ ವೈಡ್-ಲೆಗ್ ಪ್ಯಾಂಟ್ ಧರಿಸಿ, ಅದರ ಮೇಲೆ ಉದ್ದನೆಯ ಕಪ್ಪು ಓವರ್ಕೋಟ್ ತೊಟ್ಟು ಪವರ್‌ಫುಲ್ ಲುಕ್ ನೀಡಿದ್ದಾರೆ.

ಎರಡನೇ ಮತ್ತು ಮೂರನೇ ಲುಕ್

ಎರಡನೇ ಲುಕ್‌ನಲ್ಲಿ ಓವರ್‌ಸೈಜ್ಡ್ ವೈಟ್ ಶರ್ಟ್ ಡ್ರೆಸ್ ಧರಿಸಿದ್ದು, ತುಂಬಾ ಮಾದಕ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ಮೂರನೇ ಲುಕ್​

ತಮ್ಮ ಮೂರನೇ ಲುಕ್‌ನಲ್ಲಿ ಶೀರ್ ಬ್ಲ್ಯಾಕ್ ಲೇಸ್ ಬಾಡಿಕಾನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಲೇಡಿ ಸೂಪರ್​ಸ್ಟಾರ್​ ಅಲ್ಟ್ರಾ ಸ್ಟೈಲಿಶ್ ಲುಕ್ ಪ್ರದರ್ಶಿಸಿದ್ದಾರೆ.

ನಾಲ್ಕನೇ ಲುಕ್

ನಾಲ್ಕನೇ ಫೋಟೋದಲ್ಲಿ 'ವೆರೈಟಿ ಇಂಡಿಯಾ' ಕ್ಷಣಕ್ಕಾಗಿ ಕಾಣಿಸಿಕೊಂಡಿರುವ ನಯನತಾರಾ ಅವರು ಸೂಕ್ಷ್ಮ ಭಾವನೆಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಮುಂದಿನ ಪ್ರಾಜೆಕ್ಟ್‌ಗಳು

ಸಿನಿಮಾ ವಿಚಾರಕ್ಕೆ ಬರುವುದಾದರೆ, ನಯನತಾರಾ ಅವರು 'ಮೂಕುತಿ ಅಮ್ಮನ್ 2' ಸೇರಿದಂತೆ ಕೆಲ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.