LIK ಸಿನಿಮಾ ರಿಲೀಸ್ ಆದ ನಂತರ ಲೇಡಿ ಸೂಪರ್ ಸ್ಟಾರ್ ಹಾಗೂ ಅವರ ಪತಿ ವಿಘ್ನೇಶ್ ಅವರು ಪ್ರವಾಸ ಕೈಗೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಇಬ್ಬರು ರೊಮ್ಯಾನ್ಸ್ ಮೂಡ್ನಲ್ಲಿರುವ ಫೋಟೋ ಹಂಚಿಕೊಂಡಿರುವುದನ್ನು ಕಂಡ ನೆಟ್ಟಿಗರು ಪ್ಯೂರ್ ಲವ್ ಎಂದು ಕಾಮೆಂಟ್ ಮಾಡಿದ್ದಾರೆ.
ಕ್ಯೂಟ್ ಕಪಲ್ಸ್ ಎಂದ ಫ್ಯಾನ್ಸ್
ನಯನತಾರ ದಂಪತಿ ಯೂರೋಪ್ ಪ್ರವಾಸದಲ್ಲಿದ್ದಾರೆ. ವೆನಿಸ್ ಅಥವಾ ವ್ಯಾಟಿಕನ್ ಸಿಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ದಿನ ಕಳೆಯುತ್ತಿದ್ದಾರೆ ಎಂದು ಊಹಿಸಲಾಗಿದೆ. ಸೂರ್ಯನ ಬೆಳಕಲ್ಲಿ ಪತಿ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಂಡಿರುವುದನ್ನು ಕಂಡ ಫ್ಯಾನ್ಸ್ ಕ್ಯೂಟ್ ಕಪಲ್ಸ್ ಎಂದು ಕರೆದಿದ್ದಾರೆ.
ಸೂರ್ಯನ ಬೆಳಕಲ್ಲಿ ಲೇಡಿ ಸೂಪರ್ ಸ್ಟಾರ್
ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಸೂರ್ಯಾಸ್ತದ ಹೊಂಬೆಳಕಿನ ಹಿನ್ನೆಲೆಯಲ್ಲಿ ಪರಸ್ಪರ ಕೈ ಕೈ ಹಿಡಿದು ಪ್ರೀತಿಯಿಂದ ಪೋಸ್ ಕೊಟ್ಟಿದ್ದಾರೆ. ಸುವರ್ಣ ಸೂರ್ಯನ ಕಿರಣಗಳು ಅವರ ಮುಖದ ಮೇಲೆ ಬೀಳುತ್ತಿದ್ದು, ಇಬ್ಬರ ನಡುವಿನ ಕೆಮಿಸ್ಟ್ರಿ ಮತ್ತು ರೋಮ್ಯಾನ್ಸ್ ಅದ್ಭುತವಾಗಿ ಮೂಡಿಬಂದಿದೆ.
ಮೇಡ್ ಫಾರ್ ಈಚ್ ಅದರ್ ಕಪಲ್
ಮೇಡ್ ಫಾರ್ ಈಚ್ ಅದರ್ ಕಪಲ್, ಪ್ಯೂರ್ ಲವ್, ಬ್ಯೂಟಿ ಕ್ವೀನ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ ಅಲ್ಲದೆ, ಮದುವೆಯಾಗಿ ಇಷ್ಟು ವರ್ಷಗಳಾದರೂ ಇವರಿಬ್ಬರ ನಡುವಿನ ಪ್ರೀತಿ ಮತ್ತು ಬಾಂಡಿಂಗ್ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದು ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ.
2022ರಲ್ಲಿ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನ
2015ರಿಂದ ಡೇಟಿಂಗ್ನಲ್ಲಿದ್ದ ವಿಘ್ನೇಶ್ ಶಿವನ್ ಮತ್ತು ನಯನಾತಾರ ಅವರು 9 ಜೂನ್ 2022ರಲ್ಲಿ ಮದುವೆಯಾದರು. ನಾನು ರೌಡಿದಾನ್, ಕೌತುವಾಲ ಎನ್ನುವ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ವಿಘ್ನೇಶ್ ಅವರು ಗೀತರಚನೆಕಾರರೂ ಹೌದು. ಉಯಿರ್ ರುದ್ರನೀಲ್ ಮತ್ತು ಉಲಗ್ ದೈವಿಕ್ ಎನ್ನುವ ಅವಳಿ ಮಕ್ಕಳಿದ್ದಾರೆ.
ಬಹುಭಾಷಾ ನಟಿ ನಯನಾ
ಮನಸ್ಸಿನಕ್ಕರೆ ಎನ್ನುವ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಆಇದಿ ನಯನತಾರಾ ಅವರು. ಈಗ ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ನಟಿಸಿ ಲೇಡಿ ಸೂಪರ್ ಸ್ಟಾರ್ ಎಂದು ಹೆಸರು ಪಡೆದುಕೊಂಡಿದ್ದಾರೆ.
ಸಿನಿ ಪಯಣ
ಚಂದ್ರಮುಖಿ, ರಾಜಾರಾಣಿ, ನಾನು ರೌಡಿ ಧಾನ್, ಮಾಯಾ, ಯಾರಡಿ ನೀ ಮೋಹಿನಿ ಗಜನಿ, ನೇತ್ರಿಕನ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದಾರೆ.