ಆ.26ರಂದು ರಿಲೀಸ್ ಆಗಲು ರೆಡಿಯಾಗಿರುವ ಟಾಕ್ಸಿಕ್ ಸಿನಿಮಾದ ಹವಾ ಇಡೀ ದೇಶದಲ್ಲೇ ಹಬ್ಬಿದೆ. ಈ ಸಿನಿಮಾದಲ್ಲಿ ನಯನತಾರಾ ಅವರು ಗಂಗಾ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಪ್ರಚಾರದ ಬ್ಯುಸಿಯಲ್ಲಿರುವ ಅವರು ಓಣಂ ಸೀರೆಯುಟ್ಟು ಇನ್ಸ್ಟಾಗ್ರಾಮ್ದಲ್ಲಿ ಫೋಟೋಸ್ ಪೋಸ್ಟ್ ಮಾಡಿದ್ದಾರೆ.
ಓಣಂ ಸೀರೆಯಲ್ಲಿ ಮಿಂಚಿಂಗ್
ಬಿಳಿ ಬಣ್ಣದ ಸೀರೆ ಅದಕ್ಕೆ ತುದಿಯಲ್ಲಿ ರೇಷ್ಮೆ ಜರಿಯ ಬಾರ್ಡರ್ ಸಿಂಪಲ್ ಬ್ಲೌಸ್ ನೆಕ್ಲೇಸ್ ರೀತಿ ಡಿಸೈನ್ ಮಾಡಿರುವ ರೇಷ್ಮೆ ಬಣ್ಣದ ಸಾಲು ಸೀರೆ ಅಂದ ಹಾಗೂ ನಯನತಾರಾ ಅವರ ಅಂದವನ್ನು ಹೆಚ್ಚಿಸಿದೆ.
ಎಂಥಾ ಲುಕ್ಕು
ನಯನಾತಾರಾ ಅವರು ಎಂದಿಗೂ ಸಿಂಪಲ್ ಮೇಕಪ್ಗೆ ಹೆಸರುವಾಸಿ, ಓಣಂ ಸ್ಯಾರಿಗೆ ತಕ್ಕಂತೆ ಸಿಂಪಲ್ ಮೇಕಪ್ ಮಾಡಿಕೊಂಡು, ಕೆಂಪು ಬಿಂದಿ ಹಾಗೂ ಬನ್ ಮಾಡಿರುವ ಕೂದಲು ಕಂಡು ನೆಟ್ಟಿಗರು ನಿದ್ದೆಗೆಡಿಸಿಕೊಂಡಿದ್ದಾರೆ.
ಟಾಕ್ಸಿಕ್ ಪ್ರಚಾರದಲ್ಲಿ ಬ್ಯುಸಿ
ಇತ್ತೀಚೆಗೆ ಟಾಕ್ಸಿಕ್ ಟ್ರೇಲರ್ ರಿಲೀಸ್ ಆದ ವೇಳೆ ನಯನತಾರಾ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಯಶ್ ಅವರ ಕಾರ್ಯವೈಖರಿ ಬಗ್ಗೆ ಕೊಂಡಾಡಿದ್ದರು.
ಯಶ್-ನಯನಾ ಅಕ್ಕ-ತಮ್ಮ ಪಾತ್ರ?
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಮತ್ತು ನಯನತಾರಾ ಅಕ್ಕ-ತಮ್ಮ ಎನ್ನುವುದು ತಿಳಿದು ಬರುತ್ತದೆ. ಇಬ್ಬರು ಗ್ಯಾಂಗ್ಸ್ಟರ್ಗಳೊಂದಿಗೆ ನಿಕಟ ಸಂಬಂಧ ಹೊಂದಿರುತ್ತಾರೆ ಎನ್ನುವುದು ಟ್ರೇಲರ್ನಲ್ಲೇ ತಿಳಿಯುತ್ತದೆ.
ಸಲ್ಮಾನ್ ಜೊತೆಗೆ ನಟನೆ
ಮಾನ್ಸ್ಟರ್ ಎನ್ನುವ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಈ ಸಿನಿಮಾದ ನಿರ್ಮಾಣ ಹೊಣೆ ದಿಲ್ರಾಜು ಅವರು ಹೊತ್ತಿದ್ದು, ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ.