ಮಾಲ್ಡೀವ್ಸ್​ನಲ್ಲಿ ಲೇಡಿ ಸೂಪರ್​ಸ್ಟಾರ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಾಲ್ಡೀವ್ಸ್​ನಲ್ಲಿ ಲೇಡಿ ಸೂಪರ್​ಸ್ಟಾರ್​

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ತಮ್ಮ ಬಿಡುವಿಲ್ಲದ ಸಿನಿಮಾ ವೇಳಾಪಟ್ಟಿಯಿಂದ ಸ್ವಲ್ಪ ಕಾಲ ವಿರಾಮ ಪಡೆದುಕೊಂಡು, ಕುಟುಂಬದೊಂದಿಗೆ ಮಾಲ್ಡೀವ್ಸ್ ಕಡಲತೀರದಲ್ಲಿ ರಜಾದಿನಗಳನ್ನು ಆನಂದಿಸುತ್ತಿದ್ದಾರೆ.

ಫೋಟೋಗಳು ವೈರಲ್​

ನಯನತಾರಾ ಅವರು ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್​ನಲ್ಲಿನ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ವೈರಲ್​ ಆಗಿವೆ.

ಫ್ಯಾಷನ್ ಲುಕ್

ಕಡಲತೀರದ ವಾತಾವರಣಕ್ಕೆ ತಕ್ಕಂತೆ ನಯನತಾರಾ ಧರಿಸಿರುವ ಸ್ಟೈಲಿಶ್ ಮತ್ತು ಕ್ಯಾಶುವಲ್ ಉಡುಪುಗಳು ಯುವ ಪ್ರೇಕ್ಷಕರ ಹಾಗೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

ಶಾಂತಿಯ ಕ್ಷಣಗಳು

ಸಿನಿಮಾಗಳ ಗದ್ದಲದಿಂದ ದೂರ ಉಳಿದು, ಪ್ರಕೃತಿಯ ಮಡಿಲಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ಅವರು ಸಂಪೂರ್ಣ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.

ಗ್ಲಾಮರಸ್​ ಡ್ರೆಸ್​

ಹಳದಿ ಬಣ್ಣದ ತುಂಡುಡುಗೆ ಧರಿಸಿ ಕಡಲ ಕಿನಾರೆಯಲ್ಲಿ ಲೇಡಿ ಸೂಪರ್​ ಸ್ಟಾರ್​ ನೀಡಿರುವ ಗ್ಲಾಮರಸ್​ ಪೋಸ್​ ಪಡ್ಡೆ ಹುಡುಗರ ಮನ ಗೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್​ಗಳ ಮಹಾಪೂರವೇ ಹರಿದುಬಂದಿದೆ.

ಅಭಿಮಾನಿಗಳ ಮೆಚ್ಚುಗೆ

ತಮ್ಮ ನೆಚ್ಚಿನ ನಟಿಯ ವೆಕೇಷನ್ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಹಾಗೂ ಕಾಮೆಂಟ್‌ಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.