ಬಹುಭಾಷಾ ನಟಿ ನಂದಿತಾ ಶ್ವೇತಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಮಾದಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕನ್ನಡದ ಕುವರಿ
ನಂದಿತಾ ಅವರು 1990ರ ಏಪ್ರಿಲ್ 30ರಂದು ಬೆಂಗಳೂರಿನಲ್ಲಿ ಜನಿಸಿದರು. ನಿಜ ಹೆಸರು ಶ್ವೇತಾ ಆದರೆ, ಸಿನಿಮಾ ರಂಗದಲ್ಲಿ ನಂದಿತಾ ಶ್ವೇತಾ ಎಂದು ಪ್ರಸಿದ್ಧರಾಗಿದ್ದಾರೆ. ಕ್ರಿಸ್ತ್ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ.
ಚಿತ್ರರಂಗ ಎಂಟ್ರಿ
2008ರಲ್ಲಿ ತೆರಕಂಡ ಕನ್ನಡದ ನಂದ ಲವ್ಸ್ ನಂದಿತಾ ಸಿನಿಮಾ ಮೂಲಕ ನಾಯಕಿಯಾಗಿ ಚೊಚ್ಚಲ ಪ್ರವೇಶ ಮಾಡಿದರು. ಈ ಚಿತ್ರದ "ಜಿಂಕೆ ಮರಿ ನಾ..." ಹಾಡಿನಿಂದ ಭಾರೀ ಜನಪ್ರಿಯತೆ ಪಡೆದರು.
ಬಹುಭಾಷಾ ನಟಿ
ಕನ್ನಡದ ನಂತರ ಮುಖ್ಯವಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಎಥಿರ್ ನೀಚಲ್, ಪುಲಿ, ಎಕ್ಕಡಿಕಿ ಪೋಥಾವು ಚಿನ್ನವಾಡ, ಮುಂಡಾಸುಪಟ್ಟಿ ಹಾಗೂ ನಿಜಂ ಮರಪಥಿಲ್ಲೈ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಶಸ್ತಿ
ತೆಲುಗಿನ ಎಕ್ಕಡಿಕಿ ಪೋಥಾವು ಚಿನ್ನವಾಡ ಚಿತ್ರದಲ್ಲಿ ಉತ್ತಮ ನಟಿಯಾಗಿ ಫಿಲ್ಮ್ಫೇರ್ ಪ್ರಶಸ್ತಿ ಗಳಿಸಿದ್ದಾರೆ. ತಮಿಳಿನಲ್ಲಿ ಅಟ್ಟಕಥಿ ಚಿತ್ರದ ಮೂಲಕ ಚೊಚ್ಚಲ ನಟಿಯಾಗಿ ಜಯಾ ಟಿವಿ ಅವಾರ್ಡ್ ಪಡೆದಿದ್ದಾರೆ.
ಕನ್ನಡಕ್ಕೆ ವಾಪಸ್
17 ವರ್ಷಗಳ ನಂತರ 2025-26ರಲ್ಲಿ ಬೆನ್ನಿ ಎಂಬ ಮಹಿಳಾ ಪ್ರಧಾನ ಕನ್ನಡ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡಿದ್ದಾರೆ. ಇದರಿಂದ ಅವರ ಹೊಸ ಗೆಟಪ್ ಮತ್ತು ಅವತಾರ ಗಮನ ಸೆಳೆದಿದೆ.
ಜಾಲತಾಣದಲ್ಲಿ ಆ್ಯಕ್ಟೀವ್
ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಆಗಿರುವ ನಂದಿತಾ, ತಮ್ಮ ಮಾದಕ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ವರ್ಕೌಟ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.
ಚಿನ್ನದ ಬಣ್ಣದ ಉಡುಗೆ ತೊಟ್ಟ ಜಿಂಕೆಮರಿ
ಇತ್ತೀಚೆಗೆ ಈ ಸುಂದರಿ ಚಿನ್ನದ ಬಣ್ಣದ ಉಡುಪಿನಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಮಾದಕ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.