ಸೌಂದರ್ಯಕ್ಕೆ ಸರಳತೆಯ ಸ್ಪರ್ಶ ನೀಡಿದ ನಮ್ರತಾ!

ಭಾನುಪ್ರಿಯ ಡಿ.ಕೆ

ಸೌಂದರ್ಯಕ್ಕೆ ಸರಳತೆಯ ಸ್ಪರ್ಶ ನೀಡಿದ ನಮ್ರತಾ!

ಬಾಲ್ಯದಿಂದಲೇ ನಟನೆ ಮತ್ತು ಮನರಂಜನಾ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ವಿದ್ಯಾಭ್ಯಾಸದ ಜೊತೆಗೆ ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದತ್ತ ಹೆಜ್ಜೆ ಇಟ್ಟ ನಮ್ರತಾ , ತಮ್ಮ ಪ್ರತಿಭೆಯಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡರು.

ಸಿಂಪಲ್ ಲುಕ್‌

ಬಿಳಿ ಬಣ್ಣದ ಸೀರೆಯಲ್ಲಿ ನಮೃತ ಗೌಡ ಅತ್ಯಂತ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಮೃದುವಾದ ನಗು, ನೈಸರ್ಗಿಕ ಮೇಕಪ್ ಹಾಗೂ ಶಾಂತ ಭಂಗಿಯು ಅವರ ಲುಕ್‌ಗೆ ಮತ್ತಷ್ಟು ಮೆರುಗು ನೀಡಿದೆ. ಸರಳತೆಯಲ್ಲಿಯೇ ಸೌಂದರ್ಯವನ್ನು ಅನಾವರಣಗೊಳಿಸಿರುವ ಈ ಫೋಟೋ ಅಭಿಮಾನಿಗಳ ಮನಸೆಳೆಯುತ್ತಿದೆ.

ಕಿರುತೆರೆ ಪಯಣ

ನಮೃತ ಗೌಡ ಕೃಷ್ಣ ರುಕ್ಮಿಣಿ, ಪುಟ್ಟಗೌರಿ ಮದುವೆ, ನಾಗಿಣಿ 2 ಮತ್ತು 'ಕರ್ಣ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದರು

ಬಿಗ್ ಬಾಸ್ ಮೂಲಕ ಜನಪ್ರಿಯತೆ

'ಬಿಗ್ ಬಾಸ್ ಕನ್ನಡ ಸೀಸನ್ 10' ಸ್ಪರ್ಧಿಯಾಗಿ ಭಾಗವಹಿಸಿ ಮತ್ತಷ್ಟು ಜನಪ್ರಿಯರಾದರು. ಮನೆಯೊಳಗಿನ ಅವರ ನೇರ ವ್ಯಕ್ತಿತ್ವ, ಸ್ನೇಹಪರ ಸ್ವಭಾವ ಮತ್ತು ಆತ್ಮವಿಶ್ವಾಸದ ನಡೆ ಪ್ರೇಕ್ಷಕರ ಗಮನ ಸೆಳೆಯಿತು. ಈ ಕಾರ್ಯಕ್ರಮದ ನಂತರ ಅವರಿಗೆ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು.

ವೆಬ್‌ಸಿರೀಸ್ ಪಯಣ

ಕಿರುತೆರೆಯಲ್ಲಿ ಯಶಸ್ಸು ಕಂಡಿರುವ ನಮೃತ ಗೌಡ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿಯೂ ಹೆಜ್ಜೆ ಇಟ್ಟಿದ್ದಾರೆ. 'ಲೈಫ್ ಇಸ್ ಬ್ಯೂಟಿಫುಲ್' ವೆಬ್‌ಸಿರೀಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಅಭಿನಯದ ಮತ್ತೊಂದು ಮುಖವನ್ನು ಪರಿಚಯಿಸಿದರು.

ನಮ್ರತಾ ಗೌಡಗೆ ಕಿರುಕುಳ

ತಮಗೆ ಬಂದಿರುವ ಕೆಲ ಅಸಭ್ಯ ಸಂದೇಶಗಳನ್ನು ನೋಡಿ ನಟಿ ನಮ್ರತಾ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಅವುಗಳ ಸ್ಕ್ರೀನ್ ಶಾಟ್ ತೆಗೆದುಕೊಂಡ ನಮ್ರತಾ, ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ರೋಷನ್​ ಎಂಬುವವರಿಗೆ ಎಚ್ಚರಿಕೆ ನೀಡಿದ್ದಾರೆ.