ನಭಾ ನಟೇಶ್ ಮಿನಿ ಸ್ಕರ್ಟ್​ ಲುಕ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ನಭಾ ನಟೇಶ್ ಮಿನಿ ಸ್ಕರ್ಟ್​ ಲುಕ್​

ಕನ್ನಡತಿ ನಭಾ ನಟೇಶ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಫೋಟೋಶೂಟ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಅಭಿಮಾನಿಗಳ ಮನ ಗೆದ್ದಿದೆ.

ಮಾದಕ ನೋಟ

ನಭಾ ಅವರು ಕೆಂಪು-ಬಿಳಿ ಚೌಕಪಟ್ಟಿ ಮಾದರಿಯ ಸ್ಲೀವ್‌ಲೆಸ್ ಉಡುಗೆ ಧರಿಸಿದ್ದಾರೆ. ಇದಂದು ಮಿನಿ ಸ್ಕರ್ಟ್ ಆಗಿದ್ದು, ಗಿಟಾರ್​ ಹಿಡಿದು ಮಾದಕವಾಗಿ ಫೋಸ್​ ನೀಡಿದ್ದಾರೆ.

ಹಾಟ್​ನೆಸ್​ಗೆ ಫಿದಾ

ಮಿನಿ ಸ್ಕರ್ಟ್​ನಲ್ಲಿ ನಭಾ ಅವರ ಹಾಟ್​ನೆಸ್​ಗೆ ಫಿದಾ ಆಗಿರುವ ನೆಟ್ಟಿಗರು ಕಾಮೆಂಟ್​ಗಳ ಮೂಲಕ ಸೌತ್​ ಬ್ಯೂಟಿ ಮೈಮಾಟವನ್ನು ಕೊಂಡಾಡುತ್ತಿದ್ದಾರೆ. ನಭಾ ನಿಜಕ್ಕೂ ಸೌಂದರ್ಯ ದೇವತೆ ಎಂದು ಹೊಗಳುತ್ತಿದ್ದಾರೆ.

ಕನ್ನಡ ಚಿತ್ರರಂಗದ ಮೂಲಕ ಪದಾರ್ಪಣೆ

ನಭಾ ನಟೇಶ್ ಮೂಲತಃ ಕರ್ನಾಟಕದ ಶೃಂಗೇರಿಯವರಾಗಿದ್ದು, 2015 ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 'ವಜ್ರಕಾಯ' ಚಿತ್ರದ 'ಪಟಾಕಾ ಪಾರ್ವತಿ' ಪಾತ್ರದ ಮೂಲಕ ಬೆಳ್ಳಿಪರದೆಗೆ ನಾಯಕಿಯಾಗಿ ಪರಿಚಯವಾದರು.

ತೆಲುಗಿನಲ್ಲಿ ಭಾರಿ ಜನಪ್ರಿಯತೆ

ಕನ್ನಡದ ನಂತರ ಟಾಲಿವುಡ್‌ಗೆ ಕಾಲಿಟ್ಟ ಇವರು, ನಿರ್ದೇಶಕ ಪುರಿ ಜಗನ್ನಾಥ್ ಅವರ 'ಇಸ್ಮಾರ್ಟ್ ಶಂಕರ್' ಚಿತ್ರದ 'ಚಾಂದಿನಿ' ಪಾತ್ರದ ಮೂಲಕ ಅಲ್ಲಿ ಅಪಾರ ಯಶಸ್ಸು ಮತ್ತು ಜನಪ್ರಿಯತೆಯನ್ನು ಗಳಿಸಿದರು.

ಭೀಕರ ರಸ್ತೆ ಅಪಘಾತ ಮತ್ತು ಚೇತರಿಕೆ

ಯಶಸ್ಸಿನ ಉತ್ತುಂಗದಲ್ಲಿದ್ದಾಗ 2022 ರಲ್ಲಿ ಒಂದು ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು. ಎಡ ಭುಜಕ್ಕೆ ಗಾಯಗಳಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇವರು, ದೀರ್ಘಕಾಲದ ವಿಶ್ರಾಂತಿಯ ನಂತರ ಸಂಪೂರ್ಣ ಗುಣಮುಖರಾಗಿದ್ದು, ಚಿತ್ರರಂಗದಲ್ಲಿ ಮತ್ತೆ ಬಿಜಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾ ಸೆನ್ಸೇಷನ್

ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿರುವ ನಭಾ, ತಮ್ಮ ಗ್ಲಾಮರಸ್ ಹಾಗೂ ಸಾಂಪ್ರದಾಯಿಕ ಫೋಟೋಶೂಟ್‌ಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ ಮತ್ತು ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.