ವೈನ್ ಗೌನ್‌ನಲ್ಲಿ ಮಿಂಚಿದ ನಭಾ ನಟೇಶ್!

ರಮೇಶ್​ ಕುಮಾರ್​​ ಬಿ ಎಡಮೋಳೆ

ವೈನ್ ಗೌನ್‌ನಲ್ಲಿ ಮಿಂಚಿದ ನಭಾ ನಟೇಶ್!

ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ರೆಡ್ ಕಾರ್ಪೆಟ್‌ನಲ್ಲಿ ಕನ್ನಡತಿ ನಭಾ ನಟೇಶ್ ತಮ್ಮ ಅದ್ಭುತ ಗ್ಲಾಮರಸ್ ಲುಕ್ ಮೂಲಕ ಎಲ್ಲರ ಕಣ್ಣುಗಳನ್ನು ಸೆಳೆದಿದ್ದಾರೆ.

ಮರೂನ್ ಬಣ್ಣದ ಗೌನ್​ನಲ್ಲಿ ಪೋಸ್​

ಹಳೇ ಹಾಲಿವುಡ್ ಶೈಲಿಯನ್ನು ನೆನಪಿಸುವಂತೆ ನಭಾ ನಟೇಶ್​ ಅವರು ಧರಿಸಿದ್ದ ಮರೂನ್ ಬಣ್ಣದ ಗೌನ್ ಸದ್ಯ ಫ್ಯಾಷನ್ ಲೋಕದಲ್ಲಿ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದೆ.

ರೆಡ್ ಕಾರ್ಪೆಟ್​ನಲ್ಲಿ ರಾಯಲ್​ ಎಂಟ್ರಿ

ನಭಾ ನಟೇಶ್ ಮರೂನ್ ಬಣ್ಣದ ಸೀಕ್ವೆನ್ ಮೆರ್ಮೇಯ್ಡ್ ಗೌನ್ ಧರಿಸಿ ರೆಡ್ ಕಾರ್ಪೆಟ್‌ಗೆ ಎಂಟ್ರಿ ನೀಡಿದ್ದು, ಈ ಫಿಟೆಡ್ ಸಿಲೂಯೆಟ್ ಅವರ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.

ಫ್ಯಾನ್ ಆಕಾರದ ವಿನ್ಯಾಸ

ಈ ಉಡುಪಿನ ಪೂರ್ತಿ ಫ್ಯಾನ್ ಆಕಾರದ ಸೀಕ್ವೆನ್ ಮತ್ತು ಮಣಿಗಳಿಂದ ಅಲಂಕರಿಸಲಾಗಿದ್ದು, ಪ್ರತಿ ಹೆಜ್ಜೆಯಲ್ಲೂ ಬೆಳಕಿಗೆ ಮಿನುಗುತ್ತಾ ಶುದ್ಧ ಹಳೆ-ಹಾಲಿವುಡ್ ಗ್ಲಾಮರ್ ಲುಕ್ ಅನ್ನು ನೀಡಿದೆ.

ಡೀಪ್ ಪ್ಲಂಜಿಂಗ್ ನೆಕ್‌ಲೈನ್

ಗೌನ್‌ನ ಡೀಪ್ ಪ್ಲಂಜಿಂಗ್ ನೆಕ್‌ಲೈನ್ ಮತ್ತು ಡ್ರಮಾಟಿಕ್ ಫಿಶ್‌ಟೇಲ್ ಹೆಮ್ ವಿನ್ಯಾಸವು ಉಡುಪಿಗೆ ಮತ್ತಷ್ಟು ಬೋಲ್ಡ್ ಹಾಗೂ ಸ್ಟೈಲಿಶ್ ಲುಕ್ ಅನ್ನು ತಂದುಕೊಟ್ಟಿದೆ.

ಮಿನಿಮಲ್ ಮೇಕಪ್ ಮತ್ತು ಹೇರ್ ಸ್ಟೈಲ್

ಉಡುಪಿಗೆ ತಕ್ಕಂತೆ ಮೇಕಪ್ ಅನ್ನು ಸರಳವಾಗಿ ಇರಿಸಿಕೊಂಡಿರುವ ನಭಾ, ಫ್ರೀ ಲೂಸ್ ವೇವ್ಸ್ ಹೇರ್ ಸ್ಟೈಲ್, ಸಾಫ್ಟ್ ಸ್ಮೋಕಿ ಮೇಕಪ್ ಹಾಗೂ ನ್ಯೂಡ್ ಲಿಪ್‌ಸ್ಟಿಕ್ ಧರಿಸಿ ಕಂಗೊಳಿಸಿದ್ದಾರೆ.

ಕನಿಷ್ಠ ಆಭರಣಗಳು

ಉಡುಪಿಗೆ ತಕ್ಕಂತೆ ಯಾವುದೇ ದೊಡ್ಡ ಒಡವೆಗಳನ್ನು ಧರಿಸದೆ, ಕೇವಲ ಸರಳವಾದ ಸ್ಟೇಟ್‌ಮೆಂಟ್ ರಿಂಗ್ಸ್‌ಗಳನ್ನು ಮಾತ್ರ ಧರಿಸಿ 'ಕಡಿಮೆಯಿದ್ದಷ್ಟು ಅಂದ ಹೆಚ್ಚು' ಎಂಬುದನ್ನು ಮತ್ತೊಮ್ಮೆ ನಭಾ ಸಾಬೀತುಪಡಿಸಿದ್ದಾರೆ.