ಇಸ್ಮಾರ್ಟ್ ಶಂಕರ್ ಖ್ಯಾತಿಯ ಬೋಲ್ಡ್ ನಟಿ ನಭಾ ನಟೇಶ್ ಮತ್ತೆ ತಮ್ಮ ಗ್ಲಾಮರಸ್ ಸ್ಟನ್ನಿಂಗ್ ಲುಕ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಉದ್ದನೆ ಜಡೆ, ಸಾಂಪ್ರದಾಯಿಕ ಉಡುಗೆ, ಸಿಂಪಲ್ ಮೇಕಪ್ನಲ್ಲಿನ ಅವರ ಸೌಂದರ್ಯಕ್ಕೆ ಫ್ಯಾನ್ಸ್ ಮಾರು ಹೋಗಿದ್ದಾರೆ.
ನಿಮ್ಮ ಸೌಂದರ್ಯಕ್ಕೆ ಸಾಟಿಯಿಲ್ಲ
ನಿಮ್ಮ ಸೌಂದರ್ಯ ಅದ್ಭುತ. ನಿಮ್ಮಿಂದ ನನ್ನ ಗಮನ ಬೇರೆಡೆಗೆ ಸೆಳೆಯಿತು. ಕ್ಯೂಟ್ ಫೋಟೋಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಹಿಂದಿಯಲ್ಲಿ ಖೂಬ್ ಸೂರತ್ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ತೆಲುಗಿನಲ್ಲಿ ಕುದುರಿದ ಲಕ್
ನಭಾ ನಟೇಶ್ ಅವರು ನಟ ಸುಧೀರ್ ಬಾಬು ನಟನೆಯ Nannu Dochukunduvate ಸಿನಿಮಾ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟರು. ಇದರಿಂದ ಅವರಿಗೆ ರಾಮ್ ಪೋತಿನೇನಿ ಅಭಿನಯದ ಇಸ್ಮಾರ್ಟ್ ಶಂಕರ್ನಲ್ಲಿ ಬೋಲ್ಡ್ ಆಗಿ ನಟನೆ ಮಾಡಲು ಅವಕಾಶ ಸಿಕ್ಕಿತ್ತು.
ಈ ಸಿನಿಮಾದಲ್ಲಿ ನಟನೆ
ಸೋಲೋ ಬತುಕುತೆ ಬೆಟರ್, ಅಲ್ಲುಡು ಅದರ್ಸ್, ಟೈಸನ್ ನಾಯ್ಡು, ಡಾರ್ಲಿಂಗ್, ಸ್ವಯಂಭು, ಮಾನ್ಭೂಮಿಗು ಮರುಮಗನ್ ಸಿನಿಮಾ ಸೇರಿದಂತೆ ಹಲವು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಪಘಾತದಿಂದಾಗಿ ನಟನೆಯಿಂದ ದೂರವಿದ್ದ ಇವರು ಈಗ ಮತ್ತೆ ಆಕ್ಟೀವ್ ಆಗಿದ್ದಾರೆ.
ವಜ್ರಕಾಯ ಮೂಲಕ ಕನ್ನಡಕ್ಕೆ ಎಂಟ್ರಿ
ನಭಾ ನಟೇಶ್ ಅವರು ಕನ್ನಡದಲ್ಲಿ ಹೇ ಮತಾಪು ಪ್ರತಾಪು ಡೈಲಾಗ್ ಮೂಲಕ ರಗಡ್ ಆಗಿ ಕಾಣಿಸಿಕೊಂಡು ಭಾರಿ ಸದ್ದು ಮಾಡಿದ್ದರು. ಶಿವರಾಜ್ ಕುಮಾರ್ರೊಂದಿಗೆ ನಟಿಸಿದ್ದ ಅವರು ಆನಂತರ ಕನ್ನಡದಲ್ಲಿ ನಟಿಸಿದ್ದು ಕಡಿಮೆ.
ಶೃಂಗೇರಿ ವಾಸ್ತುಶಿಲ್ಪ ಕೊಂಡಾಡಿದ್ದ ನಭಾ
ಇತ್ತೀಚೆಗೆ ಶೃಂಗೇರಿಗೆ ಭೇಟಿ ನೀಡಿದ್ದ ನಭಾ ನಟೇಶ್ ಅವರು ಅಲ್ಲಿನ ವಾಸ್ತು ಶಿಲ್ಪದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಹುಟ್ಟಿದ ಊರು ಅಲ್ಲಿ ಸಿಗುವ ಶಾಂತಿ ಎಷ್ಟು ಮುಖ್ಯವಾಗುತ್ತದೆ ಎಂದು ಕೊಂಡಾಡಿದ್ದರು.
ಸಾಹೇಬ ಸಿನಿಮಾದಲ್ಲಿ ಸ್ಪೆಷಲ್ ಎಂಟ್ರಿ
ಕನ್ನಡದಲ್ಲಿ ತೆರೆಕಂಡ ಸಾಹೇಬ ಸಿನಿಮಾದಲ್ಲಿ ಸ್ಪೆಷಲ್ ಹಾಡೊಂದಕ್ಕೆ ನಭಾ ಎಂಟ್ರಿ ಕೊಟ್ಟಿದ್ದರು. ರವಿಚಂದ್ರನ್ ಅವರ ಮಗ ಮನೋಹರ್ ಅವರು ನಟಿಸಿದ್ದ ಸಿನಿಮಾ ಶಾನ್ವಿ ಅವರು ನಾಯಕ ನಟಿಯಾಗಿದ್ದರು.