ಕನ್ನಡದ 'ವಜ್ರಕಾಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬ್ಯೂಟಿ ನಭಾ ನಟೇಶ್.ಶಿವರಾಜ್ಕುಮಾರ್ ಅವರಿಗೆ ನಾಯಕಿಯಾಗಿ ನಟಿಸುವ ಮೂಲಕ ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಗಮನ ಸೆಳೆದ ಬ್ಯೂಟಿ.'ಪಟ್ಟಾಕ' ಪಾತ್ರದಲ್ಲಿ ಮಸ್ತ್ ಡೈಲಾಗ್ಗಳನ್ನು ಹೊಡೆದು ಕನ್ನಡ ಸಿನಿಪ್ರಿಯರ ಮನಗೆದ್ದ ನಟಿ ಈಗ ಟಾಲಿವುಡ್ನಲ್ಲಿ ಬಿಜಿ.ಟಾಲಿವುಡ್ಗೆ ಎಂಟ್ರಿಕೊಟ್ಟ ನಭಾ, 'ನಾನು ದೋಚುಕುಂಡುವತೆ' ಚಿತ್ರದ ಮುಖೇನ ತೆಲುಗು ಅಭಿಮಾನಿಗಳಿಗೆ ಪರಿಚಿತರಾದರು.ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಶೃಂಗೇರಿಯ ಬೆಡಗಿ, ಆಗಾಗ್ಗೆ ಹಲವು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ