ಕನ್ನಡತಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ನಭಾ ನಟೇಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪಾರದರ್ಶಕ ಸೀರೆಯಲ್ಲಿನ ಹಾಟ್ ಅವತಾರದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕನ್ನಡದ ಕುವರಿ
ನಭಾ ನಟೇಶ್, ಕರ್ನಾಟಕದ ಶೃಂಗೇರಿಯಲ್ಲಿ ಜನಿಸಿದರು. ಮಂಗಳೂರಿನ ಎನ್.ಎಂ.ಎ.ಎಂ (NMAMIT) ತಾಂತ್ರಿಕ ಕಾಲೇಜಿನಲ್ಲಿ ಇನ್ಫರ್ಮೇಷನ್ ಸೈನ್ಸ್ ಬಿ.ಇ (B.E) ಪದವಿ ಪಡೆದಿದ್ದಾರೆ.
ಪಟಾಕಾ ಪಾತ್ರ
2015ರಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಅಭಿಯನದ 'ವಜ್ರಕಾಯ' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿನ 'ಪಟಾಕಾ' ಪಾತ್ರ ದೊಡ್ಡ ಹೆಸರು ತಂದುಕೊಟ್ಟಿತು.
ಟಾಲಿವುಡ್ ಸ್ಟಾರ್ ನಟಿ
'ನನ್ನು ದೋಚುಕುಂಡುವಾಟೆ' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ನಭಾ, ರಾಮ್ ಪೋತಿನೇನಿ ಅಭಿನಯದ 'ಇಸ್ಮಾರ್ಟ್ ಶಂಕರ್' ಚಿತ್ರದ ಭರ್ಜರಿ ಯಶಸ್ಸಿನ ನಂತರ ಅಲ್ಲಿ ಸ್ಟಾರ್ ನಟಿಯರಲ್ಲಿ ಒಬ್ಬರಾದರು.
ಸೌಂದರ್ಯ ಸ್ಪರ್ಧೆ
ನಭಾ ಅವರು 2013ರ 'ಫೆಮಿನಾ ಮಿಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಟಾಪ್ 11 ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರು.
ಬೌನ್ಸ್ ಬ್ಯಾಕ್
ಕೆಲವು ಸಮಯದ ಹಿಂದೆ ಭೀಕರ ರಸ್ತೆ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ನಭಾ, ದೀರ್ಘಕಾಲದ ಚಿಕಿತ್ಸೆ ಮತ್ತು ವಿಶ್ರಾಂತಿಯ ನಂತರ ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿದ್ದಾರೆ.
ಹಾಟ್ ಫೋಟೋಸ್ ವೈರಲ್
ನಭಾ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಎದೆ ಸೀಳು ಕಾಣುವಂತೆ ಕಪ್ಪು ಬಣ್ಣದ ಪಾರದರ್ಶಕ ಸೀರೆಯನ್ನು ಧರಿಸಿ ಮಾದಕ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ನಭಾ ಮೈಮಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.