ಕನ್ನಡತಿ ನಭಾ ನಟೇಶ್ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪಾರದರ್ಶಕ ಸೀರೆಯ ಮಾದಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ನಾಗಬಂಧಂ ಯಶಸ್ಸಿನ ಸಂಭ್ರಮ
ನಭಾ ನಟೇಶ್ ಅವರು ತಮ್ಮ ಇತ್ತೀಚಿನ ಚಿತ್ರ ನಾಗಬಂಧಂ ಯಶಸ್ಸಿನ ಕಾರ್ಯಕ್ರಮದಲ್ಲಿ ಅತ್ಯಂತ ಆಕರ್ಷಕವಾಗಿ ಕಾಣಿಸಿಕೊಂಡರು.
ಕಪ್ಪು ಬಣ್ಣದ ಪಾರದರ್ಶಕ ಸೀರೆ
ಈ ಇವೆಂಟ್‌ನಲ್ಲಿ ನಭಾ ಅವರು ಗೋಲ್ಡನ್ ಹಾಗೂ ಬ್ಲಾಕ್ ಬಾರ್ಡರ್ ಡಿಸೈನ್ ಇರುವ ಕಪ್ಪು ಬಣ್ಣದ ಪಾರದರ್ಶಕ ಸೀರೆಯನ್ನು ಧರಿಸಿ ಮಿಂಚಿದರು. ಅವರ ಸರಳವಾದ ಲುಕ್ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತು.
ಕನ್ನಡತಿ ಎಂಬ ಹೆಮ್ಮೆ
ನಭಾ ನಟೇಶ್ ಮೂಲತಃ ಕರ್ನಾಟಕದ ಶೃಂಗೇರಿಯವರು. ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಇನ್ಫರ್ಮೇಷನ್ ಸೈನ್ಸ್ ಬಿಇ ಪದವಿ ಮುಗಿಸಿರುವ ಇವರು ಪಕ್ಕಾ ಕರಾವಳಿ ಮೂಲದ ಪ್ರತಿಭೆ.
ಸ್ಯಾಂಡಲ್‌ವುಡ್ ಮೂಲಕ ಸಿನಿ ಜರ್ನಿ ಆರಂಭ
ಇವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ನಮ್ಮ ಹೆಮ್ಮೆಯ ಸ್ಯಾಂಡಲ್‌ವುಡ್ ಮೂಲಕ. ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ನಟನೆಯ ಸೂಪರ್ ಹಿಟ್ 'ವಜ್ರಕಾಯ' ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು 'ಪಟಾಕಾ' ಹುಡುಗಿಯಾಗಿ ಕನ್ನಡಿಗರ ಮನಗೆದ್ದಿದ್ದರು.
ಟಾಲಿವುಡ್‌ನಲ್ಲಿ 'ಇಸ್ಮಾರ್ಟ್' ಬ್ರೇಕ್
ಕನ್ನಡದ ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಇವರಿಗೆ ನಿರ್ದೇಶಕ ಪುರಿ ಜಗನ್ನಾಥ್ ಅವರ 'ಇಸ್ಮಾರ್ಟ್ ಶಂಕರ್' ಸಿನಿಮಾ ಬ್ರೇಕ್ ನೀಡಿತು. ಈ ಚಿತ್ರದ 'ಚಾಂದಿನಿ' ಪಾತ್ರದ ಮೂಲಕ ಇವರು ತೆಲುಗಿನಲ್ಲಿ ರಾತ್ರೋರಾತ್ರಿ ಸ್ಟಾರ್ ಹೀರೊಯಿನ್ ಆಗಿ ಗುರುತಿಸಿಕೊಂಡರು.
ರಂಗಭೂಮಿ ಹಿನ್ನೆಲೆ
ಕೇವಲ ಗ್ಲಾಮರ್ ಮಾತ್ರವಲ್ಲದೆ ನಟನೆಗೂ ಸೈ ಎನಿಸಿಕೊಂಡಿರುವ ನಭಾ, ಸಿನಿಮಾಗೆ ಬರುವ ಮುನ್ನ ಖ್ಯಾತ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರ ನಾಟಕ ತಂಡದಲ್ಲಿ ಸಕ್ರಿಯ ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್ 11 ರೌಂಡ್ ತಲುಪಿದ್ದರು.
ಅಪಘಾತದ ಬಳಿಕ ಭರ್ಜರಿ ಕಮ್‌ಬ್ಯಾಕ್
ಕಳೆದ ಕೆಲವು ವರ್ಷಗಳ ಹಿಂದೆ ಭೀಕರ ಕಾರು ಅಪಘಾತಕ್ಕೆ ಒಳಗಾಗಿ ತೋಳಿಗೆ ತೀವ್ರ ಗಾಯ ಮಾಡಿಕೊಂಡಿದ್ದ ನಭಾ, ದೀರ್ಘಕಾಲದ ಚಿಕಿತ್ಸೆ ಹಾಗೂ ಚೇತರಿಕೆಯ ಬಳಿಕ ಈಗ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
ಫ್ಯಾನ್ಸ್ ಫಿದಾ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಭಾ ಹಂಚಿಕೊಂಡಿರುವ ಮಾದಕ ಫೋಟೋಗಳಲ್ಲಿ ಅವರ ಮೈಮಾಟವನ್ನು ಕಂಡು ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ಗಳ ಮೂಲಕ ಅವರ ಸೌಂದರ್ಯವನ್ನು ಹೊಗಳುತ್ತಿದ್ದಾರೆ.