ಸಾಂಪ್ರದಾಯಿಕ ಉಡುಪಿನಲ್ಲಿ ಮಾಡರ್ನ್ ಲುಕ್

ರಮೇಶ್​ ಕುಮಾರ್​​ ಬಿ ಎಡಮೋಳೆ

ಸಾಂಪ್ರದಾಯಿಕ ಉಡುಪಿನಲ್ಲಿ ಮಾಡರ್ನ್ ಲುಕ್

ಬಾಲಿವುಡ್​ ಬ್ಯೂಟಿ ಮೃಣಾಲ್ ಠಾಕೂರ್ ಅವರು ಇತ್ತೀಚೆಗೆ ಮಾಡಿರುವ ಫೋಟೋಶೂಟ್‌ಗಳಲ್ಲಿ ಭಾರತೀಯ ಸಾಂಪ್ರದಾಯಿಕ ಉಡುಪುಗಳಿಗೆ ಮಾಡರ್ನ್ ಟ್ವಿಸ್ಟ್ ನೀಡಿ ಮಿಂಚಿದ್ದಾರೆ.

ಜಾಲತಾಣದಲ್ಲಿ ಟ್ರೆಂಡಿಂಗ್​

ಹೆವಿ ಎಂಬ್ರಾಯ್ಡರಿ ಇರುವ ಲೆಹೆಂಗಾ ಹಾಗೂ ಡಿಸೈನರ್ ಸೀರೆಗಳಿಗೆ ಕಂಟೆಂಪರರಿ ಬ್ಲೌಸ್ ಮತ್ತು ವೆಸ್ಟರ್ನ್ ಶೈಲಿಯ ಕಟ್‌ಗಳನ್ನು ಮ್ಯಾಚ್ ಮಾಡಿ, ತಮ್ಮದೇ ಆದ ವಿಭಿನ್ನ ಔರಾ ಮೂಲಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ.

ಬ್ಯಾಕ್-ಟು-ಬ್ಯಾಕ್ ಬಾಲಿವುಡ್ ಸಿನಿಮಾಗಳು

2026ರ ಮೊದಲಾರ್ಧ ಮೃಣಾಲ್ ವೃತ್ತಿಜೀವನ ಬಿಜಿಯಾಗಿತ್ತು. ಇತ್ತೀಚೆಗಷ್ಟೇ ವರುಣ್ ಧವನ್ ಹಾಗೂ ಪೂಜಾ ಹೆಗ್ಡೆ ನಟನೆಯ ರೋಮ್ಯಾಂಟಿಕ್ ಕಾಮಿಡಿ ಚಿತ್ರ ಹೈ ಜವಾನಿ ತೋ ಇಷ್ಕ್ ಹೋನಾ ಹೈ ಸಿನಿಮಾ ಸಾಕಷ್ಟು ಸದ್ದು ಮಾಡಿತು.

ಡಕಾಯಿತ್​ ಆಕ್ಷನ್ ಸಿನಿಮಾ

ಟಾಲಿವುಡ್ ಸ್ಟಾರ್ ಅಡಿವಿ ಶೇಷ್ ಜೊತೆ ನಟಿಸಿದ ಹಿಂದಿ-ತೆಲುಗು ದ್ವಿಭಾಷಾ ಆಕ್ಷನ್ ಡ್ರಾಮಾ ಡಕಾಯಿತ್​: ಎ ಲವ್ ಸ್ಟೋರಿ ಚಿತ್ರದಲ್ಲಿ ಮೃಣಾಲ್ ನಟಿಸಿದ್ದರು. 'ಸರಸ್ವತಿ' ಅಲಿಯಾಸ್ 'ಜೂಲಿಯೆಟ್' ಪಾತ್ರದ ವಿಭಿನ್ನ ಆಕ್ಷನ್ ಹಾಗೂ ಪರ್ಫಾರ್ಮೆನ್ಸ್‌ಗೆ ವಿಮರ್ಶಕರಿಂದ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಸಂಜಯ್ ಲೀಲಾ ಭನ್ಸಾಲಿ ಚಿತ್ರದಲ್ಲಿ ನಾಯಕಿ

ಇದೇ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ಸಂಜಯ್ ಲೀಲಾ ಭನ್ಸಾಲಿ ನಿರ್ಮಾಣದ 'ದೋ ದೀವಾನೇ ಶೆಹರ್ ಮೇ' ಚಿತ್ರದಲ್ಲಿ ಸಿದ್ದಾಂತ್ ಚತುರ್ವೇದಿ ಜತೆ ಮೃಣಾಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ತಾವೊಬ್ಬ ಬಹುಮುಖ ಪ್ರತಿಭೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಹೆಸರಾಂತ ಶೆಫ್‌ನಿಂದ 'ಮೃಣಾಲ್' ಹೆಸರಿನ ಡ್ರಿಂಕ್

ಮೃಣಾಲ್ ಅವರ ಕ್ರೇಜ್ ಕೇವಲ ಸಿನಿಮಾಗೆ ಸೀಮಿತವಾಗಿಲ್ಲ, ಇತ್ತೀಚೆಗೆ ಭಾರತದ ಖ್ಯಾತ ಗ್ಲೋಬಲ್ ಶೆಫ್ ವಿಕಾಸ್ ಖನ್ನಾ ಅವರು ತಾವು ಹೊಸದಾಗಿ ಸಿದ್ಧಪಡಿಸಿದ ನೇರಳೆ ಹಣ್ಣಿನ ಜ್ಯೂಸ್ ಒಂದಕ್ಕೆ ನಟಿ ಮೃಣಾಲ್ ಠಾಕೂರ್ ಹೆಸರಿಟ್ಟು ಗೌರವಿಸಿದ್ದಾರೆ.

ಡೇಟಿಂಗ್ ಹಾಗೂ ಬ್ರೇಕ್-ಅಪ್ ವದಂತಿಗಳಿಗೆ ಬ್ರೇಕ್

ನಟ ಧನುಷ್ ಮತ್ತು ಮೃಣಾಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇತ್ತೀಚಿನ ವರದಿಗಳ ಪ್ರಕಾರ, ಮೃಣಾಲ್ ಈ ಎಲ್ಲಾ ಗಾಳಿಮಾತುಗಳು ಕೇವಲ ವದಂತಿಗಳಷ್ಟೇ ಎಂದು ಸ್ಪಷ್ಟಪಡಿಸುವ ಮೂಲಕ ಈ ಚರ್ಚೆಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.

ಟಾಲಿವುಡ್‌ನ ಮುಂದಿನ ಬಿಗ್ ಪ್ರಾಜೆಕ್ಟ್ 'ರಾಕಾ'

ಸದ್ಯ ಸೌತ್ ಮತ್ತು ನಾರ್ತ್ ಎರಡೂ ಚಿತ್ರರಂಗದಲ್ಲಿ ಬಿಜಿಯಾಗಿರುವ ಮೃಣಾಲ್, ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಬಹುನಿರೀಕ್ಷಿತ 'ರಾಕಾ' ಸಿನಿಮಾದಲ್ಲೂ ಪ್ರಮುಖ ಪಾತ್ರವೊಂದನ್ನು ಒಪ್ಪಿಕೊಂಡಿದ್ದಾರೆ.

ವೈರಲ್​ ಫೋಟೋ

ಸದ್ಯ ಸಾಂಪ್ರದಾಯಿಕ ಉಡುಪುಗಳಿಗೆ ಮಾಡರ್ನ್ ಟಚ್​ ನೀಡಿ, ಎದೆಸೀಳು ಕಾಣುವಂತೆ ಬೋಲ್ಡ್​ ಪೋಸ್​ ನೀಡಿರುವ ಮೃಣಾಲ್​ ಅವರ ಹೊಸ ಫೋಟೋಗಳು ವೈರಲ್​ ಆಗಿದ್ದು, ಪಡ್ಡೆ ಹುಡಗರು ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.