ಇತ್ತೀಚೆಗೆ ಮೃಣಾಲ್ ಠಾಕೂರ್ ಗಾಢವಾದ ಮೆಜೆಂತಾ ಅಥವಾ ರಾಣಿ ಗುಲಾಬಿ ಬಣ್ಣದ ಸೀರೆ ಧರಿಸಿ, ಫೋಟೋ ಶೂಟ್ ಮಾಡಿಸಿಕೊಂಡಿರುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಎಂಥಾ ಬ್ಯೂಟಿ ಕಣ್ರೀ ಎಂದ ಫ್ಯಾನ್ಸ್
ಮೃಣಾಲ್ ಠಾಕೂರ್ ಅವರ ಚೆಂದದ ಫೋಟೋ ಶೂಟ್ಗೆ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಎಂಥಾ ಬ್ಯೂಟಿ ಅಂದಿದ್ದಲ್ಲದೆ,.,ನೀವು ಕಷ್ಟ ಪಟ್ಟು ಇಷ್ಟು ಸಾಧನೆ ಮಾಡಿದ್ದೀರಾ ನಿಮ್ಮನ್ನು ನೋಡಲು ತುಂಬಾನೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ತೆಲುಗು ನಾಡಿನ ಸೊಸೆಯಾಗ್ತಾರಾ ನಟಿ?
ಇತ್ತೀಚೆಗೆ ಅಲ್ಲು ಅರವಿಂದ್ ಅವರು ಮೃಣಾಲ್ ಅವರನ್ನು ಇಲ್ಲಿಯೇ ಕಟ್ಟಿ ಹಾಕಬೇಕು ಎಂದರೆ, ಟಾಳಿವುಡ್ ಸ್ಟಾರ್ ಜೊತೆಗೆ ಮದುವೆ ಮಾಡಬೇಕು ಎಂದು ಹೇಳಿದ್ದರು. ಈ ಹಿಂದೆ ಲಾವಣ್ಯ ತ್ರಿಪಾಠಿಗೂ ಹೀಗೆ ಹೇಳಿದ್ದಕ್ಕೆ ಅವರಿಗೆ ವರುಣ್ ಜೊತೆ ಮದುವೆಯಾಗಿತ್ತು. ಮೃಣಾಲ್ಗೂ ಹೀಗೆ ಆಗುತ್ತದೆಯೇ ಎನ್ನುವುದು ಫ್ಯಾನ್ಸ್ ಕುತೂಹಲ.
ಸೀರಿಯಲ್ ಮೂಲಕ ಬೆಳ್ಳಿ ತೆರೆಗೆ ಹೆಜ್ಜೆ..
2012ರಲ್ಲಿ 'ಮುಜ್ಸೆ ಕುಚ್ ಕೆಹತಿ... ಯೇ ಖಾಮೋಷಿಯಾನ್' ಧಾರಾವಾಹಿಯ ಮೂಲಕ ಬಾಲಿವುಡ್ ಕಿರುತರೆಗೆ ಕಾಲಿಟ್ಟ ಮೃಣಾಲ್ ಠಾಕೂರ್ಗೆ ಖ್ಯಾತಿ ಮತ್ತು ಬೇಡಿಕೆಯನ್ನು ತಂದುಕೊಟ್ಟಿದ್ದು ತೆಲುಗಿನ ಸೀತಾ ರಾಮಂ ಸಿನಿಮಾ.
ಯಶಸ್ಸು ಕೊಟ್ಟ ಸೀತಾ ರಾಮಂ
ಸೀತಾ ರಾಮಂ ಮೂಲಕ ದಕ್ಷಿಣ ಭಾರತದಲ್ಲಿ ತಮ್ಮದೇ ಆದ ಛಾಪನ್ನು ಮೃಣಾಲ್ ಮೂಡಿಸಿದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಇವರಿಗಾಗಿ ಕೇಳಿ ಬಂದವು.
2018ರಲ್ಲಿ ಮೃಣಾಲ್ ಅವರು 'ಲವ್ ಸೋನಿಯಾ' ಎನ್ನುವ ಸಿನಿಮಾ ಮೂಲಕ ಬಾಲಿವುಡ್ಗೆ ಪ್ರವೇಶಿಸಿದರು. ಆನಂತರ ಅವಿಗೆ ಸೂಪರ್ 30 ಮತ್ತು ಬಟ್ಲಾ ಹೌಸ್ ಎನ್ನುವ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು.
ಧನುಷ್ ಜೊತೆ ಡೇಟಿಂಗ್?
ಇತ್ತೀಚೆಗೆ ಮೃಣಾಲ್ ಮತ್ತು ಧನುಷ್ ಮದುವೆಯಾಗಲಿದ್ದಾರೆ. ಡೇಟಿಂಗ್ನಲ್ಲಿದ್ದಾರೆ ಎನ್ನುವು ಆರೋಪಗಳು ಕೇಳಿಬಂದಿತ್ತು. ಇದಕ್ಕೆ ಉತ್ತರಿಸಿದ್ದ ಅವರು ಇದು ಆಧಾರ ರಹಿತ ಮತ್ತು ಸುಳ್ಳುಸುದ್ದಿ ಎಂದು ಹೇಳಿದ್ದಾರೆ. ಜೊತೆಗೆ ವೈಯಕ್ತಿಕ ಜೀವನಕ್ಕಿಂತ ನನಗೆ ಕೆಲಸ ಮುಖ್ಯ ಎಂದು ಹೇಳಿ ಸ್ಪಷ್ಟನೆ ಕೊಟ್ಟಿದ್ದರು.