ಮೃನಾಲ್ ಮೈಮಾಟಕ್ಕೆ ಫ್ಯಾನ್ಸ್​ ಫಿದಾ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಮೃನಾಲ್ ಮೈಮಾಟಕ್ಕೆ ಫ್ಯಾನ್ಸ್​ ಫಿದಾ!

ಸಿನಿರಂಗದಲ್ಲಿ ಮೊದಲ ಚಿತ್ರದಲ್ಲೇ ಸ್ಟಾರ್ ನಟಿಯರಾದ ಅನೇಕ ಯುವ ನಾಯಕಿಯರು ಇದ್ದಾರೆ. ಅವರಲ್ಲಿ ಮೃಣಾಲ್ ಠಾಕೂರ್ ಕೂಡ ಒಬ್ಬರು. ತೆಲುಗಿನ 'ಸೀತಾರಾಮಂ' ಸಿನಿಮಾದ ಮೂಲಕ ಎಲ್ಲ ಭಾಷೆಯ ಸಿನಿರಸಿಕರಿಗೆ ಹತ್ತಿರವಾದರು.

ದೊಡ್ಡ ಅಭಿಮಾನಿ ಬಳಗ

ಸೀತಾರಾಮಂ ಬಳಿಕ ಪ್ರತಿ ಚಿತ್ರದಲ್ಲೂ ತಮ್ಮ ಪ್ರತಿಭೆ ಸಾಬೀತುಪಡಿಸಿದರು ಮತ್ತು ಸ್ಟಾರ್ ನಟಿ ಇಮೇಜ್ ಪಡೆದರು. ಮೃನಾಲ್​, ಸೌಂದರ್ಯ ಮತ್ತು ನಟನೆಯಿಂದ ಖ್ಯಾತಿಯನ್ನು ಗಳಿಸಿದ್ದು, ಅಭಿಮಾನಿ ಬಳಗವನ್ನೂ ಹೆಚ್ಚಿಸಿಕೊಂಡಿದ್ದಾರೆ.

ಸಿನಿಮಾಗಳಲ್ಲಿ ಬಿಜಿ

ಈ ಮುದ್ದು ಹುಡುಗಿ ತೆಲುಗು ಮತ್ತು ಇತರ ಭಾಷೆಯ ಚಿತ್ರಗಳಲ್ಲಿ ಬಿಜಿಯಾಗಿದ್ದಾಳೆ. ಹಾಯ್ ನಾನ್ನಾ ಮತ್ತು ಫ್ಯಾಮಿಲಿ ಸ್ಟಾರ್ಸ್ ಚಿತ್ರಗಳಲ್ಲಿ ನಟಿಸಿದ್ದು, ಇತ್ತೀಚೆಗೆ, ಅವರು ಆದಿವಿ ಶೇಷ್ ಜೊತೆ ಡಕಾಯಿತ್​ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬೃಹತ್​ ಯೋಜನೆ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸ್ಟಾರ್ ನಿರ್ದೇಶಕ ಅಟ್ಲೀ ನಿರ್ದೇಶನದ ಬೃಹತ್ ಯೋಜನೆಯಲ್ಲಿ ಮೃನಾಲ್ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಅವರು ಪೆದ್ದಿ ಚಿತ್ರದ ವಿಶೇಷ ಹಾಡಿಗೆ ಸೊಂಟ ಬಳಕಿಸುತ್ತಾರೆ ಎಂಬ ಮಾತಿದೆ.

ಜಾಲತಾಣದಲ್ಲಿ ಆ್ಯಕ್ಟೀವ್​

ಒಂದೆಡೆ ಈ ಮುದ್ದಾದ ಹುಡುಗಿ ಕೈತುಂಬಾ ಸಿನಿಮಾಗಳನ್ನು ಹೊಂದಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಕಾಲಕಾಲಕ್ಕೆ ಹೊಸ ಫೋಟೋಶೂಟ್‌ಗಳನ್ನು ಪೋಸ್ಟ್​ ಮಾಡುತ್ತಿರುತ್ತಾರೆ.

ಫೋಟೋಗಳಿಗಾಗಿಯೇ ಫ್ಯಾನ್ಸ್​

ಮೃನಾಲ್​ ಅವರು ತಮ್ಮ ಫೋಟೋಗಳ ಮೂಲಕವೇ ನೆಟ್ಟಿಗರನ್ನು ತಮ್ಮತ್ತ ಗಮನ ಸೆಳೆಯುತ್ತಾರೆ. ಮೃನಾಲ್​ ಅವರ ಫೋಟೋಗಳಗಾಗಿಯೇ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವು ನೆಟ್‌ನಲ್ಲಿ ಟ್ರೆಂಡಿಂಗ್ ಆಗುತ್ತಿರುತ್ತವೆ.

ಹಾಟ್​ ಫೋಟೋಸ್​ ವೈರಲ್​

ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕಪ್ಪು ಉಡುಪಿನಲ್ಲಿ ಸ್ಟೈಲಿಶ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಾದಕ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ್ದು, ಮೃನಾಲ್​ ಅವರ ಮೈಮಾಟ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ.