ಸೀರೆಯಲ್ಲಿ ಸೀತಾ ಮಹಾಲಕ್ಷ್ಮೀ ದರ್ಶನ

ರಮೇಶ್​ ಕುಮಾರ್​​ ಬಿ ಎಡಮೋಳೆ

ಸೀರೆಯಲ್ಲಿ ಸೀತಾ ಮಹಾಲಕ್ಷ್ಮೀ ದರ್ಶನ

ಬಾಲಿವುಡ್​ ಬ್ಯೂಟಿ ಮೃನಾಲ್ ಠಾಕೂರ್ ಅವರು ಸೀರೆಯುಟ್ಟು ಮಾದಕ ಭಂಗಿಯಲ್ಲಿ ಕ್ಯಾಮರಾಗೆ ಪೋಸ್​ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಮೊದಲ ಚಿತ್ರದಲ್ಲೇ ಸ್ಟಾರ್ ಇಮೇಜ್

ಮೃನಾಲ್ ಠಾಕೂರ್ ಅವರು ದಕ್ಷಿಣ ಭಾರತದಲ್ಲಿ ನಟಿಸಿದ ಮೊದಲ ಸಿನಿಮಾ 'ಸೀತಾ ರಾಮಂ' ಮೂಲಕ ತೆಲುಗು ಹಾಗೂ ಇಡೀ ದಕ್ಷಿಣ ಭಾರತದ ಪ್ರೇಕ್ಷಕರ ಮನ ಗೆದ್ದು, ಸ್ಟಾರ್​ ನಟಿಯಾದರು.

ಸೌತ್​ನಲ್ಲಿ ಸಾಲು ಸಾಲು ಚಿತ್ರಗಳು

ಸೀತಾ ರಾಮಂ ಯಶಸ್ಸಿನ ನಂತರ ಮೃನಾಲ್ ತಮ್ಮ ಅದ್ಭುತ ನಟನೆ ಮತ್ತು ಸೌಂದರ್ಯದಿಂದ ತಮ್ಮ ಪ್ರತಿಭೆ ಸಾಬೀತುಪಡಿಸಿದರು. ನಾನಿ ಜೊತೆ 'ಹಾಯ್ ನಾನ್ನ' ಮತ್ತು ವಿಜಯ್ ದೇವರಕೊಂಡ ಜೊತೆ 'ಫ್ಯಾಮಿಲಿ ಸ್ಟಾರ್' ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಹೊಸ ಪ್ರಾಜೆಕ್ಟ್‌ಗಳು

ತೆಲುಗು ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ಬಿಜಿಯಾಗಿರುವ ಮೃನಾಲ್, ಇತ್ತೀಚೆಗೆ ಯುವ ಹೀರೊ ಅಡಿವಿ ಶೇಷ್ ಜೋಡಿಯಾಗಿ ಡಕಾಯಿತ್​ ಸಿನಿಮಾದಲ್ಲಿ ನಟಿಸಿದರು. ಸದ್ಯ ಅವರ ಕೈಯಲ್ಲಿ ಮೂರು ದೊಡ್ಡ ಬಜೆಟ್‌ನ ಸಿನಿಮಾಗಳಿವೆ.

ಅಟ್ಲಿ ಸಿನಿಮಾದಲ್ಲಿ ಮೃನಾಲ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಕಾಲಿವುಡ್‌ನ ಸ್ಟಾರ್ ಡೈರೆಕ್ಟರ್ ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದ ಬೃಹತ್ ಚಿತ್ರದಲ್ಲಿ ಮೃನಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಹೊರಬಿದ್ದಿದೆ.

'ಪೆದ್ದಿ' ಚಿತ್ರದ ಐಟಂ ಸಾಂಗ್ ವದಂತಿಗೆ ತೆರೆ

ರಾಮ್​ಚರಣ್​ ನಟನೆಯ 'ಪೆದ್ದಿ' ಸಿನಿಮಾದಲ್ಲಿ ಐಟಂ ಹಾಡೊಂದಕ್ಕೆ ಮೃನಾಲ್​ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಸದ್ಯ ಆ ಜಾಗಕ್ಕೆ ಶ್ರುತಿ ಹಾಸನ್ ಆಯ್ಕೆಯಾಗುವ ಮೂಲಕ ವದಂತಿಗಳಿಗೆ ತೆರೆಬಿದ್ದಿದೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್

ಒಂದೆಡೆ ಕೈತುಂಬಾ ಸಿನಿಮಾಗಳನ್ನಿಟ್ಟುಕೊಂಡು ಬಿಜಿಯಾಗಿದ್ದರೂ, ಮೃನಾಲ್ ಜಾಲತಾಣದಲ್ಲಿ ಆಕ್ಟಿವ್ ಆಗಿರುತ್ತಾರೆ. ತಮ್ಮ ಲೇಟೆಸ್ಟ್ ಫೋಟೋಶೂಟ್‌ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.

ಗ್ರೀನ್ ಸೀರೆ ಲುಕ್​ನಲ್ಲಿ ಮಿಂಚಿದ ಮೃನಾಲ್

ಮೃನಾಲ್​ ಅವರ ಫೋಟೋಗಳಿಗಾಗಿಯೇ ವಿಶೇಷ ಅಭಿಮಾನಿ ಬಳಗವಿದೆ. ಇತ್ತೀಚೆಗೆ ಮೃನಾಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿ ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ಫಿದಾ

ಸೀರೆಯುಟ್ಟು ವಿಭಿನ್ನ ಆ್ಯಂಗಲ್‌ಗಳಲ್ಲಿ ತಮ್ಮ ಸೌಂದರ್ಯವನ್ನು ಪ್ರದರ್ಶಿಸಿರುವ ಗ್ಲಾಮರಸ್ ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡಿಂಗ್ ಆಗಿದ್ದು, ವೈರಲ್ ಆಗುತ್ತಿವೆ. ಫೋಟೋಗಳಲ್ಲಿ ಮೃನಾಲ್​ ಮೈಮಾಟ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ.