ಪಡ್ಡೆ ಹುಡುಗರ ಹಾಟ್ ಫೇವರಿಟ್ ಆಗಿರುವ ನಟಿ ಮೃಣಾಲ್ ಠಾಕೂರ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ರಿಷಭ್ ಪಂತ್ ಜೊತೆ ಡೇಟಿಂಗ್ ವದಂತಿ
ಮೃಣಾಲ್ ಠಾಕೂರ್ ಮತ್ತು ಭಾರತೀಯ ಕ್ರಿಕೆಟರ್ ರಿಷಭ್ ಪಂತ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಫಾಲೋ ಮಾಡಲು ಆರಂಭಿಸಿದ ಬೆನ್ನಲ್ಲೇ ಇವರಿಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿವೆ.
ಧನುಷ್ ಜೊತೆಗಿನ ವದಂತಿಗೆ ಬ್ರೇಕ್
ಕೆಲವು ವಾರಗಳ ಹಿಂದಷ್ಟೇ ನಟ ಧನುಷ್ ಮತ್ತು ಮೃಣಾಲ್ ನಡುವೆ ಕೇಳಿಬಂದಿದ್ದ ಪ್ರೇಮದ ಗಾಸಿಪ್‌ಗಳನ್ನು ನಟಿ ಈಗಾಗಲೇ ತಳ್ಳಿಹಾಕಿದ್ದಾರೆ.
ಅದ್ಭುತ ಫ್ಯಾಷನ್ ಶೈಲಿ
ಸಿನಿಮಾಗಳು ಸೋತರೂ ಮೃಣಾಲ್ ಅವರ ಫ್ಯಾಷನ್ ಗೇಮ್ ಎಂದೂ ಕುಗ್ಗಿಲ್ಲ ಎಂಬುದನ್ನು ಇತ್ತೀಚೆಗೆ ಅವರು ಧರಿಸಿದ್ದ ಮಿನುಗುವ ಬೆಳ್ಳಿ ಬಣ್ಣದ ಕಟೌಟ್ ಗೌನ್ ಹಾಗೂ ವಜ್ರ ಮತ್ತು ಪಚ್ಚೆ ಹರಳುಗಳ ನೆಕ್ಲೇಸ್ ಸಾಬೀತುಪಡಿಸಿದೆ.
ಬಾಕ್ಸ್ ಆಫೀಸ್‌ನಲ್ಲಿ ಸತತ ಹಿನ್ನಡೆ
2026ನೇ ವರ್ಷ ಮೃಣಾಲ್ ಅವರ ಸಿನಿ ಬದುಕಿಗೆ ಅಷ್ಟಾಗಿ ಒಲಿದಿಲ್ಲ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಅವರಿಗೆ ಸತತ ಹಿನ್ನಡೆಯಾಗಿದೆ.
ಸೋತ ಬ್ಯಾಕ್ ಟು ಬ್ಯಾಕ್ ಚಿತ್ರಗಳು
ಇತ್ತೀಚೆಗೆ ಬಿಡುಗಡೆಯಾದ ಅವರ ನಟನೆಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ', 'ಡಕಾಯ್ತ್: ಎ ಲವ್ ಸ್ಟೋರಿ' ಮತ್ತು 'ದೋ ದೀವಾನೆ ಶೆಹರ್ ಮೇ' ಎಂಬ ಮೂರೂ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿವೆ.
ಅಲ್ಲು ಅರ್ಜುನ್ ಚಿತ್ರಕ್ಕೆ ಆಯ್ಕೆ?
ಇಷ್ಟೆಲ್ಲಾ ಸೋಲುಗಳ ನಡುವೆಯೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ 'ರಾಕಾ' ಚಿತ್ರಕ್ಕೆ ಮೃನಾಲ್ ಠಾಕೂರ್ ಸೇರ್ಪಡೆಯಾಗಲಿದ್ದಾರೆ ಎಂಬ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.