ಈ ವರ್ಷ ಬಾಕ್ಸ್​ ಆಫೀಸಿನಲ್ಲಿ ಮಕಾಡೆ ಮಲಗಿದ ಸಿನಿಮಾಗಳು

ವಿನಾಯಕ ನಾಯಕ

ಈ ವರ್ಷ ಬಾಕ್ಸ್​ ಆಫೀಸಿನಲ್ಲಿ ಮಕಾಡೆ ಮಲಗಿದ ಸಿನಿಮಾಗಳು

ಈಗ ನಾವು ವರ್ಷದ ಕೊನೆಯ ತಿಂಗಳಲ್ಲಿದ್ದು, ಇನ್ನೊಂದು ಹತ್ತು ದಿನ ಕಳೆದರೆ ಹೊಸ ವರ್ಷವನ್ನು ಪ್ರವೇಶಿಸಲಿದ್ದೇವೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಸರಿಸುಮಾರು 1500 ಕ್ಕೂ ಹೆಚ್ಚಿನ ಸಿನಿಮಾಗಳು ತೆರೆಕಂಡಿದ್ದು, ಅದರಲ್ಲಿ ಹತ್ತೋ-ಇಪ್ಪತ್ತೋ ಸಿನಿಮಾಗಳು ಮಾತ್ರ ಪ್ರೇಕ್ಷಕರ ಮನವನ್ನು ಗೆದ್ದಿದ್ದರೆ, ಬೆರಳೆಣಿಕೆಯಷ್ಟು ಸಿನಿಮಾಗಳು ಮನದ ಜತೆಗೆ ಮನಿ(ಹಣ) ಯನ್ನು ಗಳಿಸಿವೆ.

ವಾರ್​ 2

ವಾರ್ 2 ಸಿನಿಮಾವು ಮೂಲತಃ ಹಿಂದಿ ಭಾಷೆಯಲ್ಲಿ ತೆರೆಕಂಡಿತ್ತು. ಇದನ್ನು ಪ್ಯಾನ್​ ಇಂಡಿಯಾ ಸಿನಿಮಾವಾಗಿ ನಿರ್ಮಿಸಲಾಗಿದ್ದು, ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್.ಟಿ.ಆರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಬಹು ದೊಡ್ಡ ಮೊತ್ತದ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಹಾಕಿದ ಬಂಡವಾಳವನ್ನು ಸಹ ಗಳಿಸಲು ಸಾಧ್ಯವಾಗಲಿಲ್ಲ. ಸಿನಿಮಾದ ಕಥೆ, ಸ್ಕ್ರಿಪ್ಟ್ ಮತ್ತು ದೃಶ್ಯ ಸಂಯೋಜನೆಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದವು.

ಥಗ್ ಲೈಫ್

ಥಗ್ ಲೈಫ್ ಇದು ಮೂಲತಃ ತಮಿಳು ಭಾಷೆಯಲ್ಲಿ ತೆರೆಕಂಡಿತು. ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಮತ್ತು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮನಿರತ್ನಂ ಕಾಂಭಿನೇಷನ್​ನಲ್ಲಿ ಮೂಡಿಬಂದ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಯಿತು. ಹಾಗೆಯೇ ಕನ್ನಡ ಭಾಷೆಯ ಬಗ್ಗೆ ಮಾತನಾಡಿದಕ್ಕಾಗಿ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ನಿರ್ಬಂಧವನ್ನು ಹೇರಲಾಯಿತು.

ಸಿಕಂದರ್​

ಸಿಕಂದರ್​ ಇದು ಮೂಲತಃ ಹಿಂದಿ ಭಾಷೆಯ ಸಿನಿಮಾವಾಗಿದ್ದು ಬಾಲಿವುಡ್​ನ ಸೂಪರ್ ಸ್ಟಾರ್​ ಸಲ್ಮಾನ್​ ಖಾನ್​ ನಾಯಕ ನಟರಾಗಿ ನಟಿಸಿದ್ದರು. ಇವರೊಟ್ಟಿಗೆ ರಶ್ಮಿಕಾ ಮಂದಣ್ಣ , ಕಾಜಲ್ ಅಗರವಾಲ್​ ಮತ್ತು ಸತ್ಯಜೀತ್ ಸಹ ತೆರೆಹಂಚಿಕೊಂಡಿದ್ದರು. ಆದರೆ ಈ ಸಿನಿಮಾದ ಕಥೆ ಪ್ರೇಕ್ಷಕರ ಮನವನ್ನು ಗೆಲ್ಲುವುದರಲ್ಲಿ ಸೋತಿತು.

ಭಾಗಿ 4

ಭಾಗಿ 4 ಇದು ಮೂಲತಃ ಹಿಂದಿ ಭಾಷೆಯ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಟೈಗರ್ ಶ್ರಾಫ್, ಸಂಜಯ್ ದತ್, ಸೌರವ್ ಸಚ್ಚದೇವಾ ಮೊದಲಾದ ದೊಡ್ಡ ತಾರಾಗಣವಿದ್ದರೂ ಸಹ ಕಥೆ, ಸ್ಕ್ರಿಪ್ಟ್ ಮತ್ತು ನಿರ್ದೇಶನ ಬಹಳ ಕಳಪೆಯಾಗಿದ್ದರಿಂದ ಎಷ್ಟೇ ದೊಡ್ಡ ತಾರಾಗಣವನ್ನು ಹೊಂದದ್ದರು ಸಹ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತು

ಗೇಮ್ ಚೆಂಜರ್

ಗೇಮ್ ಚೆಂಜರ್ ಇದು ಮೂಲತಃ ತೆಲಗು ಸಿನಿಮಾವಾಗಿದ್ದು, ಖ್ಯಾತನಟ ರಾಮ್​ಚರಣ್​ ನಾಯಕನಟನಾಗಿ ಅಭಿನಯಿಸಿದ್ದರು. 400-450 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಚಿತ್ರ 130-150 ಕೋಟಿ ಮಾತ್ರ ಗಳಿಸಿಲು ಸಾಧ್ಯವಾಯಿತು. ದೊಡ್ಡ ಮಟ್ಟದ ಹೈಪ್​ಹೊಂದಿದ್ದ ಈ ಸಿನಿಮಾದ ಕಥೆಯಲ್ಲಿ ಸ್ಪಷ್ಟತೆ ಕೊರತೆ ಇದ್ದ ಕಾರಣ ಈ ಸಿನಿಮಾ ಪ್ಲಾಪ್ ಪಟ್ಟಿಯನ್ನು ಸೇರಿದೆ.