ಚಳಿಗಾಲದಲ್ಲಿ ಯಾವುದೇ ಕಾರಣಕ್ಕೂ ಅತಿ ಚಳಿ ವಾತಾವರಣ ಇರುವ ಪ್ರದೇಶಕ್ಕೆ ಹೋಗಲೇಬಾರದು. ಅದರಲ್ಲೂ ವಿಶ್ವದ ಈ ಐದು ಪ್ರದೇಶಗಳಿಗಂತೂ ಹೋಗಬಾರದು. ಹೋದರೆ, ಅದು ಯಮ ಲೋಕಕ್ಕೆ ಟಿಕೆಟ್ ತೆಗೆದುಕೊಂಡಂತೆ.
ಓಮಿಯಾಕಾನ್, ರಷ್ಯಾ
ಇದು ವಿಶ್ವದ ಅತ್ಯಂತ ತಂಪಾದ ಪ್ರದೇಶವಾಗಿದೆ. ಇಲ್ಲಿ ಚಳಿಗಾಲದಲ್ಲಿ ತಾಪಮಾನವು -60°C ಗಿಂತಲೂ ಕೆಳಗಿಳಿಯುತ್ತದೆ. ಇಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆ ಇರುವುದರಿಂದ, ಉಸಿರಾಡುವಾಗ ಶ್ವಾಸಕೋಶದ ಒಳಗೆ ಐಸ್ ಹರಳುಗಳು ಉಂಟಾಗುವ ಅಪಾಯವಿರುತ್ತದೆ.
ವೋಸ್ಟಾಕ್ ಸ್ಟೇಷನ್, ಅಂಟಾರ್ಕ್ಟಿಕಾ
ಇದು ಭೂಮಿಯ ಮೇಲಿನ ಅತಿ ಕಡಿಮೆ ತಾಪಮಾನ ದಾಖಲಾಗಿರುವ ಸ್ಥಳ. ಇಲ್ಲಿ ತಾಪಮಾನವು ಸುಮಾರು -89.2°C ವರೆಗೂ ತಲುಪುತ್ತದೆ. ಇಲ್ಲಿ ಮನುಷ್ಯರು ಸಾಮಾನ್ಯ ಸ್ಥಿತಿಯಲ್ಲಿ ಬದುಕಲು ಅಸಾಧ್ಯ.
ಮೌಂಟ್ ವಾಷಿಂಗ್ಟನ್, ಅಮೆರಿಕ
ಇದನ್ನು 'ವಿಶ್ವದ ಅತ್ಯಂತ ಕೆಟ್ಟ ಹವಾಮಾನ' ಹೊಂದಿರುವ ಸ್ಥಳ ಎಂದು ಕರೆಯಲಾಗುತ್ತದೆ. ಇಲ್ಲಿ ಚಳಿಗಾಲದಲ್ಲಿ ಗಾಳಿಯ ವೇಗ ಗಂಟೆಗೆ 372 ಕಿ.ಮೀ. ಗಿಂತಲೂ ಹೆಚ್ಚಿರುತ್ತದೆ. ಗಾಳಿಗೆ ಸಿಲುಕಿದರೆ ಪ್ರಾಣವೇ ಹೋಗುತ್ತದೆ.
ಯಾಕುಟ್ಸ್ಕ್, ರಷ್ಯಾ
ಇದು ವಿಶ್ವದ ಅತ್ಯಂತ ತಂಪಾದ ನಗರವಾಗಿದೆ. ಇಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದರು ಕೂಡ ಚಳಿಗಾಲದಲ್ಲಿ ಜೀವನ ಅತ್ಯಂತ ಕಠಿಣವಾಗಿರುತ್ತದೆ. ತಾಪಮಾನವು -50°C ಗೆ ಇಳಿದಾಗ ಕಣ್ಣಿನ ರೆಪ್ಪೆಗಳು ಕೂಡ ಹೆಪ್ಪುಗಟ್ಟುತ್ತವೆ.
ಡೆನಾಲಿ ಪರ್ವತ, ಅಲಾಸ್ಕಾ
ಉತ್ತರ ಅಮೆರಿಕಾದ ಅತಿ ಎತ್ತರದ ಶಿಖರವಾದ ಡೆನಾಲಿ, ಚಳಿಗಾಲದಲ್ಲಿ ಸಾವಿನ ಮನೆಯಾಗಿ ಬದಲಾಗುತ್ತದೆ. ಇಲ್ಲಿನ ತಾಪಮಾನ ಮತ್ತು ಗಾಳಿಯ ಒತ್ತಡವು ಮನುಷ್ಯರ ದೇಹದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಸಣ್ಣ ತಪ್ಪು ಕೂಡ ಜೀವ ತೆಗೆಯುತ್ತೆ
ಈ ಮೇಲಿನ ಐದೂ ಸ್ಥಳಗಳಲ್ಲಿ ಚಳಿಗಾಲದ ಸಮಯದಲ್ಲಿ ಹವಾಮಾನವು ಎಷ್ಟೊಂದು ಕಠಿಣವಾಗಿರುತ್ತದೆ ಎಂದರೆ, ಒಂದು ಸಣ್ಣ ತಪ್ಪು ಕೂಡ ಕ್ಷಣಾರ್ಧದಲ್ಲಿ ಜೀವಕ್ಕೆ ಸಂಚಕಾರ ತರಬಲ್ಲದು.