ಕರುಳಿನ ಆರೋಗ್ಯ ಕಾಪಾಡಲು ಈ ಪಾನೀಯಗಳು ಬೆಸ್ಟ್​​!

ವಿಜಯವಾಣಿ ಸುದ್ದಿ ಜಾಲ

ಕರುಳಿನ ಆರೋಗ್ಯ ಕಾಪಾಡಲು ಈ ಪಾನೀಯ ಬೆಸ್ಟ್​​

ಕರುಳಿನ ಆರೋಗ್ಯ ಕಾಪಾಡಲು, ಜೀರ್ಣಾಂಗ ವ್ಯವಸ್ಥೆಯ ಸಂಚಲನಕ್ಕೆ ಬೆಳಿಗ್ಗೆ ಸಾಕಷ್ಟು ನೀರು ಸೇವನೆ ಮಾಡುವುದು ಮುಖ್ಯ. ಹೀಗಾಗಿ ಈ ಏಳು ಪಾನೀಯ ನಿತ್ಯ ಒಂದೊಂದರಂತೆ ಕುಡಿಯುವುದು ಬೆಸ್ಟ್.

ಮಜ್ಜಿಗೆ ನೀರು

ಮಜ್ಜಿಗೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳಿರುತ್ತದೆ. ಒಟ್ಟೆಯಲ್ಲಿ ಇರುಸು ಮುರುಸು ಉಂಟಾದಾಗ ಅಥವಾ ಲೂಸ್​ಮೋಷನ್​ನಿಂದ ಹೈರಾಣಾದಾಗ ಮಜ್ಜಿಗೆ ಬೆಸ್ಟ್ ಪಾನೀಯ.

ಜೀರಿಗೆ ನೀರು

ನಿಮ್ಮ ಹೊಟ್ಟೆ ಉಬ್ಬುವಿಕೆ ಸಮಸ್ಯೆ ನಿವಾರಣೆಗೆ ಜೀರಾ ನೀರು ಬೆಸ್ಟ್. ಚಿಕನ್, ಮಟನ್ ತಿಂದಾಗ ಕಾಡುವ ಅಸ್ವಸ್ಥೆಯನ್ನು ದೂರ ಮಾಡುತ್ತದೆ.

ಬೆಚ್ಚಗಿನ ನೀರು

ನಿತ್ಯ ಬೆಳಿಗ್ಗೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ಮಲವನ್ನು ಮೃದುಗೊಳಿಸಿ, ಹೊಟ್ಟೆಯಲ್ಲಿರುವ ಗಲೀಜು ಹೊರ ತರಲು ಸಹಾಯ ಮಾಡುತ್ತದೆ.

ಚಿಯಾ ಸೀಡ್ಸ್

ನೆನಸಿದ ಚಿಯಾ, ನೀರಿನೊಂದಿಗೆ ಕುಡಿಯುವುದು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಮಲ ಮೃದುಗೊಳಿಸಿ ಸರಾಗ ಮಲವಿಸರ್ಜನೆಗೆ ಸಹಾಯ ಮಾಡುತ್ತದೆ.

ಪುದೀನಾ ಚಹಾ

ಜೀರ್ಣಾಂಗವ್ಯೂಹದ ಮೇಲಾಗುವ ಸಮಸ್ಯೆ ಹಾಗೂ ಹೊಟ್ಟೆ ಉಬ್ಬುವಿಕೆಯಂತಹ ಸಮಸ್ಯೆಯಿಂದ ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತದೆ.

ನಿಂಬೆ ನೀರು

ಇದರಲ್ಲಿರುವ ವಿಟಮಿನ್​ ಸಿ ನಿಮಗೆ ಶೀಘ್ರ ಶಕ್ತಿಯನ್ನು ನೀಡುತ್ತದೆ. ಮುಂಜಾನೆ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದೊಂದು ರಿಫ್ರೆಶ್​ಮೆಂಟ್ ನೀಡುತ್ತದೆ.