ವಿಜಯವಾಣಿ ಸುದ್ದಿ ಜಾಲ
ನಟಿ ಮೀರಾ ಜಾಸ್ಮಿನ್ ಸಾಂಪ್ರದಾಯಕವಾಗಿ ಸೀರೆಯುಟ್ಟು ಸಿಂಪಲ್ ಮೇಕಪ್ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಮೀರಾ ಜಾಸ್ಮಿನ್ ಅವರು ಕನ್ನಡದ ಹಲವು ಸಿನಿಮಾದಲ್ಲಿ ನಟಿಸಿ, ಫ್ಯಾನ್ಸ್ ಮನ ಗೆದ್ದಿದ್ದಾರೆ. ಇಂದಿಗೂ ಅರಸು, ಮೌರ್ಯ ಸಿನಿಮಾ ಕನ್ನಡಿಗರ ನೆಚ್ಚಿನ ಸಿನಿಮಾ.
ಅರಸು, ಮೌರ್ಯ, ಹೂ, ದೇವರು ಕೊಟ್ಟ ತಂಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲವೂ ಹಿಟ್ ಕಂಡಿವೆ
ಮೀರಾ ಜಾಸ್ಮಿನ್ ಕೇರಳದ ಮೂಲದವರು. ಸೂತ್ರಧಾರನ್ ಸಿನಿಮಾ ಮೂಲಕ ಅವರು ಬೆಳ್ಳಿತೆರೆಗೆ ಕಾಲಿಟ್ಟರು.
ಭದ್ರ, ಗುಡುಂಬ ಶಂಕರ್, ಮಕಲ್, ರನ್, ಒರೆ ಕಾದಲ್, ಅಮ್ಮಾಯಿ ಬಾಗುಂದಿ, ನೆಪಾಲಿ, ಇಂಗ ಎನ್ನ ಸೊಲ್ಲುತ್ತು ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ
ಮೀರಾ ಜಾಸ್ಮಿನ್ ಅವರು ಮೋಹನ್ ಲಾಲ್ ಅವರೊಂದಿಗಿನ ಸಿನಿಮಾದಲ್ಲಿ ನಟಿಸಿದ್ದಾರೆ. ಅತಿಮನೋಹರಂ ಸಿನಿಮಾವು ದಸರಾದಲ್ಲಿ ಅಥವಾ ದೀಪಾವಳಿ ವೇಳೆಗೆ ರಿಲೀಸ್ ಆಗುವ ಸಾಧ್ಯತೆ ಇದೆ.
ಮೀರಾ ಜಾಸ್ಮಿನ್ ಹಾಗೂ ಮೋಹನ್ ಲಾಲ್ ಅವರು ನಟಿಸಿರುವ ಅತಿ ಮನೋಹರಂ ಸಿನಿಮಾದ ಫಸ್ಟ್ ಲುಕ್ ಅನ್ನು ಸಿನಿಮಾ ತಂಡ ಹಂಚಿಕೊಂಡಿದೆ.
ರಸತಂತ್ರಂ' ಮತ್ತು 'ಇನ್ನತೆ ಚಿಂತಾವಿಷಯಂ ಸಿನಿಮಾದಲ್ಲಿ ಮೋಹನ್ ಲಾಲ್ ಮತ್ತು ಮೀರಾ ಜಾಸ್ಮಿನ್ ಒಟ್ಟಾಗಿ ನಟಿಸಿದ್ದರು. ಲಾಂಗ್ ಗ್ಯಾಪ್ ಬಳಿಕ ಮತ್ತೆ ಕಂಬ್ಯಾಕ್ ಆಗಿದ್ದಾರೆ.