ಶರಾರತ್​ ಸುಂದರಿ ಆಯೇಷಾ!

ವಿನಾಯಕ ನಾಯಕ

ಶರಾರತ್​ ಸುಂದರಿ ಆಯೇಷಾ!

ಧುರಂಧರ್​ ಸಿನಿಮಾದ 'ಶರಾರತ್​' ಹಾಡಿಗೆ ಹೆಜ್ಜೆ ಹಾಕಿ ವೀಕ್ಷಕರ ಮನ ಕದ್ದಿದ್ದ ನಟಿ ಆಯೇಷಾ ಖಾನ್​ ಇತ್ತೀಚೆಗೆ ಹಸಿರು ಬಣ್ಣದ ಸೀರೆಯಲ್ಲಿ ಫೋಟೊಶೂಟ್​ ನಡೆಸಿದ್ದು, ಆ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜನನ ಮತ್ತು ಮೂಲ

ಆಯೇಷಾ ಖಾನ್​ ಸೆಪ್ಟೆಂಬರ್ 13, 2002 ರಂದು ಮಹಾರಾಷ್ಟ್ರದ ಮುಂಬೈ ಜನಿಸಿದರು. ಮುಂಬೈನಲ್ಲೇ ಬೆಳೆದು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡು ಮಾಡೆಲಿಂಗ್ ಹಾಗೂ ನಟನಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಿಸ್​ ಟೀನ್​ ವಿನ್ನರ್

2019 ರಲ್ಲಿ ನಡೆದ 'ಮಿಸ್ ಟೀನ್ ನವಿವುಡ್' ಸ್ಪರ್ಧೆಯಲ್ಲಿ ವಿಜೇತರಾಗಿ ಕಿರೀಟವನ್ನು ಧರಿಸುವ ಮೂಲಕ ಮಾಡೆಲಿಂಗ್ ಲೋಕದಲ್ಲಿ ಹೆಜ್ಜೆ ಇಟ್ಟು ಪ್ರಸಿದ್ಧಿ ಪಡೆದರು.

ಟಿವಿ ಪ್ರವೇಶ

ಸೋನಿ ಟಿವಿಯ ಜನಪ್ರಿಯ ಧಾರಾವಾಹಿಯಾದ 'ಬಾಲ್ವೀರ್ ರಿಟರ್ನ್ಸ್' ಮೂಲಕ ಕಿರುತೆರೆಗೆ ಕಾಲಿಟ್ಟ ಆಯೇಷಾ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ದೂರದರ್ಶನ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದರು.

ಬೆಳ್ಳಿತೆರೆ ಪಾದಾರ್ಪಣೆ

2022 ರಲ್ಲಿ ಬಿಡುಗಡೆಯಾದ 'ಮುಖಚಿತ್ರಂ' ತೆಲುಗು ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಯಾರ್ಪಣೆ ಮಾಡಿ, ಚಿತ್ರರಂಗದಲ್ಲಿ ತಮ್ಮ ನಟನಾ ಪ್ರಯಾಣವನ್ನು ಅಧಿಕೃತವಾಗಿ ಆರಂಭಿಸಿದರು.

ಬಿಗ್​ಬಾಸ್​​ನಲ್ಲಿ ಮಿಂಚಿಂಗ್​

ಭಾರತದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಸೀಸನ್ 17 ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ದೇಶಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹಾಗೂ ಜನಪ್ರಿಯತೆಯನ್ನು ಗಳಿಸಿದರು.

ಸೋಷಿಯಲ್​ ಮೀಡಿಯಾನಲ್ಲಿ ಸಕ್ರೀಯ

ಸಿನಿಮಾಗಳು ಮತ್ತು ಕಿರುತೆರೆಯಲ್ಲದೆ, ಹಲವಾರು ಜನಪ್ರಿಯ ಮ್ಯೂಸಿಕ್ ವಿಡಿಯೋಗಳಲ್ಲಿ ಹಾಗೂ ಸಂಗೀತ ಆಲ್ಬಮ್‌ಗಳಲ್ಲಿ ನಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.