ನಟ ತೇಜ್ ಸಜ್ಜ ನಟನೆಯ ಮಿರಾಯ್ ಸಿನಿಮಾ ಮೂಲಕ ಸಿನಿರಸಿಕರ ಮನಗೆದ್ದಿರುವ ನಟಿ ರಿತಿಕಾ ನಾಯಕ್, ಇದೀಗ ತಮ್ಮ ಮಾದಕ ಫೋಟೋಗಳಿಂದ ಮತ್ತೊಮ್ಮೆ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿದ್ದಾರೆ.
ಮನಸೆಳೆಯುವ ಹೊಸ ಫೋಟೋಶೂಟ್
ರಿತಿಕಾ ನಾಯಕ್ ಅವರು ಬಿಳಿ ಬಣ್ಣದ ರಾ-ಹೆಮ್ ಕಟ್ ಕಾಸೆಟ್ ಮಿನಿ ಉಡುಪಿನಲ್ಲಿ ಸಖತ್ ಸ್ಟೈಲಿಶ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಮ್ಯಾಗಜೀನ್ ಲುಕ್
ಗೋಲ್ಡನ್ ಹಿನ್ನೆಲೆಯ ಅಂಬರ್ ಲೈಟಿಂಗ್, ಆಕರ್ಷಕ ನೋಟ ಹಾಗೂ ಕೇಶವಿನ್ಯಾಸದೊಂದಿಗೆ ಮೂಡಿಬಂದಿರುವ ಈ ಫೋಟೋಗಳು ಯಾವುದೋ ಪ್ರೀಮಿಯಂ ಫ್ಯಾಷನ್ ಮ್ಯಾಗಜೀನ್‌ನ ಕವರ್ ಪೇಜ್‌ನಂತೆ ಕಾಣುತ್ತಿದ್ದು, ನೆಟ್ಟಿಗರ ಗಮನ ಸೆಳೆದಿವೆ.
ಟಾಲಿವುಡ್ ಎಂಟ್ರಿ
ಮೂಲತಃ ದೆಹಲಿಯವರಾದ ರಿತಿಕಾ, 'ಅಶೋಕ ವನಮ್ಲೊ ಅರ್ಜುನ ಕಲ್ಯಾಣಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಹಾಗೂ ತಮ್ಮ ಮೊದಲ ಚಿತ್ರಕ್ಕೇ 'ಸೈಮಾ' (SIIMA) ಪ್ರಶಸ್ತಿ ನಾಮನಿರ್ದೇಶನವನ್ನು ಪಡೆದುಕೊಂಡಿದ್ದರು.
ಕರಿಯರ್‌ನ ಬಿಗ್ಗೆಸ್ಟ್ ರಿಲೀಸ್
ಇತ್ತೀಚೆಗಷ್ಟೇ ತೇಜ್ ಸಜ್ಜ ನಟನೆಯ ಬಹುನಿರೀಕ್ಷಿತ 'ಮಿರಾಯ್' ಚಿತ್ರದಲ್ಲಿ ಕಾಣಿಸಿಕೊಂಡ ರಿತಿಕಾ ಅವರಿಗೆ, ಇದು ಅವರ ವೃತ್ತಿಜೀವನದ ಅತಿ ದೊಡ್ಡ ಬಿಡುಗಡೆಯಾಗಿದ್ದು, ಟಾಲಿವುಡ್‌ನಲ್ಲಿ ಭರವಸೆಯ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ.
ಮುಂದಿನ ಸಾಲು ಸಾಲು ಚಿತ್ರಗಳು
ಪ್ರಸ್ತುತ ರಿತಿಕಾ ಕೈಯಲ್ಲಿ ಎರಡು ಪ್ರಮುಖ ಸಿನಿಮಾಗಳಿದ್ದು, 'ಡ್ಯುಯೆಟ್' (Duet) ಹಾಗೂ ಮೆಗಾ ಪ್ರಿನ್ಸ್ ವರುಣ್ ತೇಜ್ ನಟನೆಯ 'ಕೋರಿಯನ್ ಕನಕರಾಜು' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.