ಮಿರಾಯ್​ ಸುಂದ್ರಿಯ ಹಾಟ್​ ಅವತಾರ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಿರಾಯ್​ ಸುಂದ್ರಿಯ ಹಾಟ್​ ಅವತಾರ!

ತೆಲುಗಿನ ಸೂಪರ್​ ಹಿಟ್​ ಮಿರಾಯ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ರಿತಿಕಾ ನಾಯಕ್​ ಅವರ ಹಾಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಡೆಲ್ಲಿ ಬ್ಯೂಟಿ

ರಿತಿಕಾ ಅವರು ಅಕ್ಟೋಬರ್​ 26, 2000ನೇ ಇಸವಿಯಲ್ಲಿ ದೆಹಲಿಯಲ್ಲಿ ಒಡಿಯಾ ಕುಟುಂಬದಲ್ಲಿ ಜನಿಸಿದರು. ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದು, ದೆಹಲಿ ವಿಶ್ವವಿದ್ಯಾಲಯದ ಶ್ಯಾಮಾ ಪ್ರಸಾದ್ ಮುಖರ್ಜಿ ಕಾಲೇಜ್‌ನಿಂದ ಪದವಿ ಪಡೆದಿದ್ದಾರೆ.

ಚಿತ್ರರಂಗ ಪ್ರವೇಶ

2022ರಲ್ಲಿ ಅಶೋಕ ವನಮ್ಲೋ ಅರ್ಜುನ ಕಲ್ಯಾಣಂ ತೆಲುಗು ಸಿನಿಮಾದ ಮೂಲಕ ನಟನೆಗೆ ಚೊಚ್ಚಲ ಪ್ರವೇಶ ಮಾಡಿದರು. ಇದು ಅವರ ಬ್ರೇಕ್‌ಥ್ರೂ ಚಿತ್ರವಾಗಿತ್ತು. ಇದರಲ್ಲಿ ಅವರ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಿರಾಯ್‌ನಿಂದ ಖ್ಯಾತಿ

2025ರಲ್ಲಿ ಬಿಡುಗಡೆಯಾದ ಫ್ಯಾಂಟಸಿ ಆಕ್ಷನ್ ಅಡ್ವೆಂಚರ್ ಚಿತ್ರ ಮಿರಾಯ್​ನಲ್ಲಿ ವಿಭಾ ಎಂಬ ಹಿಮಾಲಯದ ಸನ್ಯಾಸಿನಿ ಪಾತ್ರದಲ್ಲಿ ನಟಿಸಿದ್ದಾರೆ. ತೇಜ ಸಜ್ಜಾ ನಾಯಕನಾಗಿರುವ ಈ ಚಿತ್ರ, ರಿತಿಕಾಗೆ ದೊಡ್ಡ ವಾಣಿಜ್ಯ ಯಶಸ್ಸು ಎಂದು ಪರಿಗಣಿಸಲಾಗಿದೆ.

ಇತರ ಚಿತ್ರಗಳು

ಹೈ ನಾನ್ನ (2023) ಸಿನಿಮಾದಲ್ಲಿ ಕ್ಯಾಮಿಯೋ ಪಾತ್ರ ಮಾಡಿದ್ದಾರೆ. ಪ್ರಸ್ತುತ ಡ್ಯೂಯೆಟ್ ಎಂಬ ತೆಲುಗು-ತಮಿಳು ಬೈಲಿಂಗ್ವಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಜನಪ್ರಿಯತೆ

ತೆಲುಗು ಚಿತ್ರರಂಗದಲ್ಲಿ ತ್ವರಿತವಾಗಿ ಜನಪ್ರಿಯತೆ ಗಳಿಸಿದ ಯುವ ನಟಿ. ಮಿರಾಯ್ ಯಶಸ್ಸಿನ ನಂತರ ಅವರ ಪ್ರದರ್ಶನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜಾಲತಾಣದಲ್ಲಿ ಆ್ಯಕ್ಟಿವ್​

ಇನ್​​ಸ್ಟಾಗ್ರಾಂನಲ್ಲಿ ಆ್ಯಕ್ಟೀವ್​ ಆಗಿರುವ ರಿತಿಕಾ, ಬರೋಬ್ಬರಿ 1 ಮಿಲಿಯನ್ಸ್​ ಫಾನ್ಸ್​ ಹೊಂದಿದ್ದಾರೆ. ಆಗಾಗ ಗ್ಲಾಮರಸ್​ ಫೋಟೋಗಳ ಮೂಲಕ ರಿತಿಕಾ ಸದ್ದು ಮಾಡುತ್ತಿರುತ್ತಾರೆ.

ಮತ್ತೆ ಹಾಟ್​ ಅವತಾರ

ಇದೀಗ ಕಪ್ಪು ಬಣ್ಣದ ಟಾಪ್​ ಹಾಗೂ ಜೀನ್ಸ್​ ಧರಿಸಿ ರಿತಿಕಾ ಅವರು ಮತ್ತೆ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಫೋಟೋಗಳು ಸಖತ್​ ವೈರಲ್​ ಆಗಿವೆ. ರಿತಿಕಾ ಮೈಮಾಟ ನೋಡಿದ ಫ್ಯಾನ್ಸ್​ ಫಿದಾ ಆಗಿದ್ದಾರೆ.