ಟಾಕ್ಸಿಕ್​ನ ಮೆಲಿಸಾ!

ಭಾನುಪ್ರಿಯ ಡಿ.ಕೆ

ಟಾಕ್ಸಿಕ್​ನ ಮೆಲಿಸಾ!

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ರುಕ್ಮಿಣಿ ವಸಂತ್‌ ಪ್ರಮುಖ ಹೆಸರು. ಬೆಂಗಳೂರಿನಲ್ಲಿ ಜನಿಸಿದ ಅವರು ಲಂಡನ್‌ನ ರಾಯಲ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ಸ್‌ನಲ್ಲಿ ಅಭಿನಯ ತರಬೇತಿ ಪಡೆದಿದ್ದಾರೆ. 2019ರ ಬಿರ್ಬಲ್ ಟ್ರಿಲಜಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

‘ಸಪ್ತ ಸಾಗರದಾಚೆ ಎಲ್ಲೋ’ ತಿರುವು

ಹೇಮಂತ್‌ ಎಂ. ರಾವ್‌ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಪ್ರಿಯಾ ಪಾತ್ರ ರುಕ್ಮಿಣಿಗೆ ದೊಡ್ಡ ಬ್ರೇಕ್ ನೀಡಿತು. ಭಾವನಾತ್ಮಕ ಅಭಿನಯ, ಸಹಜತೆ ಹಾಗೂ ಕಣ್ಣಿನಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯದಿಂದ ಪ್ರೇಕ್ಷಕರ ಗಮನ ಸೆಳೆದರು.

ಪ್ರಶಸ್ತಿಗಳ ಗರಿ

ಪ್ರಿಯಾ ಪಾತ್ರಕ್ಕಾಗಿ ರುಕ್ಮಿಣಿ ಫಿಲ್ಮ್‌ಫೇರ್‌ ಅವಾರ್ಡ್ಸ್‌ ಸೌತ್‌ನಲ್ಲಿ ಅತ್ಯುತ್ತಮ ನಟಿ–ಕ್ರಿಟಿಕ್ಸ್ ಪ್ರಶಸ್ತಿ ಪಡೆದಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋಗಾಗಿ IIFA ಉತ್ಸವ್‌ನಲ್ಲೂ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.

ಕಾಂತಾರ: ಅಧ್ಯಾಯ 1 ವಿಶೇಷತೆ

ಕಾಂತಾರ: ಅಧ್ಯಾಯ 1ನಲ್ಲಿ ರಾಜಕುಮಾರಿ ಕನಕವತಿ ಪಾತ್ರದಲ್ಲಿ ಕಾಣಿಸಿಕೊಂಡ ರುಕ್ಮಿಣಿ, ವಿಭಿನ್ನ ಕಾಲಘಟ್ಟದ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ತಮ್ಮ ನಟನೆಯ ಮತ್ತೊಂದು ಮುಖ ತೋರಿಸಿದರು. ಇದರಿಂದ ಅವರ ಪ್ಯಾನ್-ಇಂಡಿಯಾ ಗುರುತು ಮತ್ತಷ್ಟು ಗಟ್ಟಿಯಾಯಿತು.

ಟಾಕ್ಸಿಕ್’ನಲ್ಲಿ ಮೆಲಿಸಾ

ಯಶ್‌ ಅಭಿನಯದ, ಗೀತು ಮೋಹನ್‌ದಾಸ್‌ ನಿರ್ದೇಶನದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ನಲ್ಲಿ ರುಕ್ಮಿಣಿ ‘ಮೆಲಿಸಾ’ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರವನ್ನು ಚಿತ್ರತಂಡ ಆರಂಭದಲ್ಲಿ ರಹಸ್ಯವಾಗಿಟ್ಟುಕೊಂಡಿತ್ತು. ಮೊದಲ ಲುಕ್‌ನಲ್ಲಿ ಮೆಲಿಸಾ ಗಂಭೀರ, ಆತ್ಮವಿಶ್ವಾಸಿ ಹಾಗೂ ನಿಗೂಢ ವ್ಯಕ್ತಿತ್ವದಂತೆ ಕಾಣಿಸಿಕೊಂಡಿದ್ದಾರೆ.

‘ಟಾಕ್ಸಿಕ್’ನಲ್ಲಿ ವಿಶೇಷ ನಿರೀಕ್ಷೆ

ಟಾಕ್ಸಿಕ್ನಲ್ಲಿ ಯಶ್‌, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಬಳಗವಿದೆ. ರುಕ್ಮಿಣಿಯ ‘ಮೆಲಿಸಾ’ ಪಾತ್ರವೂ ಕಥೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಅವರ ವೃತ್ತಿಜೀವನದಲ್ಲಿ ಮತ್ತೊಂದು ವಿಭಿನ್ನ ಮೈಲಿಗಲ್ಲಾಗುವ ನಿರೀಕ್ಷೆ ಮೂಡಿಸಿದೆ.