ನೀಲಿ ಸೀರೆಯಲ್ಲಿ ಮೇಘಾ ಶೆಟ್ಟಿ!

ವಿಜಯವಾಣಿ ಸುದ್ದಿ ಜಾಲ

ಸಿನಿಮಾ ಪ್ರವೇಶ

ಧಾರಾವಾಹಿಯ ಯಶಸ್ಸಿನ ಬಳಿಕ ಮೇಘಾ ಶೆಟ್ಟಿ ಸ್ಯಾಂಡ್‌ವುಡ್‌ಗೆ ಕಾಲಿಟ್ಟರು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಟ್ರಿಪಲ್ ರೈಡಿಂಗ್' ಚಿತ್ರದ ಮೂಲಕ ಅವರು ಸಿನಿಮಾರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಈ ಚೊಚ್ಚಲ ಚಿತ್ರದಲ್ಲೇ ಅವರ ಅಭಿನಯ ಮತ್ತು ಗ್ಲಾಮರ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಸೋಷಿಯಲ್​ ಮೀಡಿಯಾನಲ್ಲಿ ಸಕ್ರೀಯ

ನಟನೆಯ ಜತೆಗೆ ಮೇಘಾ ಶೆಟ್ಟಿ ತಮ್ಮ ವಿಶಿಷ್ಟ ನೃತ್ಯ ಶೈಲಿ ಮತ್ತು ಆಕರ್ಷಕ ಫೋಟೋಶೂಟ್‌ಗಳ ಮೂಲಕವೂ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇನ್ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿರುವ ಅವರು, ತಮ್ಮ ದೈನಂದಿನ ಅಪ್ಟೇಟ್‌ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಮುಂದಿನ ಸಿನಿಮಾ

ಮುಂದಿನ ಹಂತದಲ್ಲಿ ನಟಿ ಮೇಘಾ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಮಟ್ಟದ ಚಿತ್ರಗಳಲ್ಲೂ ನಟಿಸುವ ಮೂಲಕ ತಮ್ಮ ನಟನಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ದಿಯಾ ಖ್ಯಾತಿಯ ದೃತಿಕ್ ಜತೆಗೂಡಿ ನಟಿಸಿದ 'ಕದಿರ' ಚಿತ್ರದಂತಹ ಭಿನ್ನ ಕಥಾಹಂದರವು ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಿದೆ.

ಉದ್ಯಮಿ

ಕೇವಲ ನಟನೆಯಷ್ಟೇ ಅಲ್ಲದೆ, ನಿರ್ಮಾಣ ಕ್ಷೇತ್ರದಲ್ಲೂ ಮೇಘಾ ಶೆಟ್ಟಿ ತಮ್ಮ ಆಸಕ್ತಿಯನ್ನು ತೋರಿಸಿದ್ದಾರೆ. ತಮ್ಮದೇ ಆದ ನಿರ್ಮಾಣ ಸಂಸ್ಥೆಯ ಮೂಲಕ ಕೆಲವೊಂದು ಹೊಸ ಪ್ರಾಜೆಕ್ಟ್‌ಗಳಿಗೆ ಕೈಹಾಕುವ ಮೂಲಕ ಯುವ ಉದ್ಯಮಿನಿಯಾಗಿಯೂ ಅವರು ಗುರುತಿಸಿಕೊಂಡಿರುವುದು ವಿಶೇಷ ಸಾಧನೆಯಾಗಿದೆ.

ಅಭಿಮಾನಿಗಳ ಫೇವರೇಟ್​

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಇವರು, ಆಗಾಗ್ಗೆ ಸಮಾಜಮುಖಿ ಕೆಲಸಗಳಲ್ಲಿ ಹಾಗೂ ದೇವಾಲಯಗಳ ಭೇಟಿಯಲ್ಲಿಯೂ ತೊಡಗಿಸಿಕೊಳ್ಳುತ್ತಾರೆ. ಅವರ ಸರಳತೆ ಮತ್ತು ಸೌಮ್ಯ ಸ್ವಭಾವವು ಅಭಿಮಾನಿಗಳನ್ನು ಮತ್ತಷ್ಟು ಆಕರ್ಷಿಸಿದೆ ಹಾಗೂ ಸ್ಯಾಂಡ್‌ವುಡ್‌ನಲ್ಲಿ ಭವಿಷ್ಯದ ದೊಡ್ಡ ನಾಯಕಿಯಾಗಿ ಬೆಳೆಯುತ್ತಿದ್ದಾರೆ.