ದೇಸಿ ಲುಕ್​ನಲ್ಲಿ ಮೇಘಾ ಮಿಂಚಿಂಗ್​!

ವಿನಾಯಕ ನಾಯಕ

ದೇಸಿ ಲುಕ್​ನಲ್ಲಿ ಮೇಘಾ ಮಿಂಚಿಂಗ್​!

ಮೇಘಾ ಶೆಟ್ಟಿ ಆಗಸ್ಟ್ 4, 1998 ರಂದು ಕರ್ನಾಟಕದ ಮಂಗಳೂರಿನಲ್ಲಿ ತುಳು ಮಾತನಾಡುವ ಬಂಟ್ಸ್ ಕುಟುಂಬದಲ್ಲಿ ಜನಿಸಿದರು. ಇವರು ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದು, ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ (MBA) ಪಡೆದಿದ್ದಾರೆ.

ಕಿರುತೆರೆ ಪ್ರವೇಶ ಮತ್ತು ಜನಪ್ರಿಯತೆ

ಮೇಘಾ ಶೆಟ್ಟಿ 2019ರಲ್ಲಿ ಜೀ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿ 'ಜೊತೆ ಜೊತೆಯಲಿ' ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಧಾರಾವಾಹಿಯಲ್ಲಿ ಅವರು ನಿರ್ವಹಿಸಿದ 'ಅನು ಸಿರಿಮನೆ' ಪಾತ್ರವು ಅವರಿಗೆ ರಾಜ್ಯಾದ್ಯಂತ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.

ಪ್ರಶಸ್ತಿ ಮತ್ತು ನಿರ್ಮಾಪಕಿಯಾಗಿ ಸಾಧನೆ

'ಜೊತೆ ಜೊತೆಯಲಿ' ಧಾರಾವಾಹಿಯ ನಟನೆಗಾಗಿ ಅವರು 2020ರ 'ಜೀ ಕುಟುಂಬ ಅವಾರ್ಡ್ಸ್' ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದರೊಂದಿಗೆ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ 'ಕೆಂಡಸಂಪಿಗೆ' ಧಾರಾವಾಹಿಗೆ ಸಹ-ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ.

ಸಿನಿಮಾಗಳು

ಕಿರುತೆರೆಯ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ 'ತ್ರಿಬಲ್ ರೈಡಿಂಗ್' ಚಿತ್ರದ ಮೂಲಕ ಸ್ಯಾಂಡ್‌ವುಡ್‌ಗೆ ಪಾದಯಾರ್ಪಣೆ ಮಾಡಿದರು. ನಂತರ 'ದಿಲ್‌ಪಸಂದ್', 'ಕೈವ', 'ಆಪ್ಟರ್ ಆಪರೇಷನ್ ಲಂಡನ್ ಕೆಫೆ' ಮತ್ತು ವಿನಯ್ ರಾಜ್‌ಕುಮಾರ್ ಜೊತೆ 'ಗ್ರಾಮಾಯಣ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಇತರ ಭಾಷೆಗಳಿಲ್ಲಿ ನಟನೆ

ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿರದ ಮೇಘಾ, ಇತರೆ ಭಾಷೆಗಳಾದ ಮರಾಠಿ ಹಾಗೂ ತೆಲುಗು ಚಲನಚಿತ್ರ ರಂಗಕ್ಕೂ ತಮ್ಮ ನಟನೆಯನ್ನು ವಿಸ್ತರಿಸಿಕೊಂಡಿದ್ದಾರೆ.