ಮಾದಕ ಲುಕ್​​ನಲ್ಲಿ ಮೀನಾಕ್ಷಿ

ಮಮತಾ

ಮಾದಕ ಲುಕ್​​ನಲ್ಲಿ ಮೀನಾಕ್ಷಿ

ಲಕ್ಕಿ ಭಾಸ್ಕರ್​ ಸಿನಿಮಾ ಮೂಲಕ ಮನೆ ಮಾತಾಗಿದ್ದ ಮೀನಾಕ್ಷಿ ಚೌಧರಿ ಅವರ ಇನ್​ಸ್ಟಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಾದಕ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಎಂಥಾ ಚಂದ ಕಣ್ಣು ಎಂದ ಫ್ಯಾನ್ಸ್

ಅವರ ಈ ಫೋಟೋಗೆ Might cause a few group chats to go off ಶೀರ್ಷಿಕೆ ಬರೆದುಕೊಂಡಿದ್ದಾರೆ. ಪ್ಯಾನ್​ ಇಂಡಿಯಾ ಬ್ಯೂಟಿ, ನಿಮ್ಮ ಕಣ್ಣುಗಳು ತುಂಬಾನೆ ಚಂದವಾಗಿದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ

ಡಾಕ್ಟ್ರು ನಟಿಯಾಗಿದ್ದು ಹೇಗೆ?

ಮೀನಾಕ್ಷಿ ಚೌಧರಿಯವರು ಮೂಲತಃ ದಂತ ವೈದ್ಯೆ. ಪಂಜಾಬ್​ನ ನ್ಯಾಷನಲ್​ ಡೆಂಟಲ್​ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಓದುವ ಸಮಯದಲ್ಲೇ ಅವರು ಮಾಡಲಿಂಗ್​​ ಸೌಂದರ್ಯ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದರು. 2018ರ ಫೆಮಿನಾ ಮಿಸ್​​ ಇಂಡಿಯಾ ಸ್ಪರ್ಧೆಯಲ್ಲಿ ಹರಿಯಾಣವನ್ನು ಪ್ರತಿನಿಧಿಸಿ ರನರ್​ ಅಪ್​ ಆಗಿದ್ದರು.

ಹರಿಯಾಣದ ಮೀನಾಕ್ಷಿ

ಹರಿಯಾಣದಲವರಾದ ಮೀನಾಕ್ಷಿ ಚೌಧರಿಯವರು ಹೆಚ್ಚಾಗಿ ಅವಕಾಶ ಗಿಟ್ಟಿಸಿಕೊಂಡಿದ್ದು, ಸೌತ್​ ಇಂಡಿಯಾ ಸಿನಿಮಾಗಳಲ್ಲಿ.

ಮೀನಾಕ್ಷಿ ಸಿನಿಮಾಗಳಿವು

ಲಕ್ಕಿ ಭಾಸ್ಕರ್​​, ಸಂಕ್ರಾತಿಕಿ ವಸ್ತುನ್ನಾಮು, ಗೋಟ್​​, ಕಿಲಾಡಿ, ಅನಗನಗ ಒಕ ರಾಜು, ಹಿಟ್​, ಹಿಟ್​ ದಿ ಸೆಕಂಡ್​ ಕೇಸ್, ಕೊಲೈ, ಮಟ್ಕ, ಸಿಂಗಾಪುರ್​ ಸಲೂನ್​ ಸೇರದಂತೆ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ

ಕಾರ್ತಿ30ಯಲ್ಲಿ ನಟನೆ

ನಟ ಸೂರ್ಯ ತಮ್ಮ ಕಾರ್ತಿಕ್​ ಅವರ ಕಾರ್ತಿ 30 ಸಿನಿಮಾದಲ್ಲಿ ಮೀನಾಕ್ಷಿ ಅವರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮ್ಯಾಡ್​​, ಟಿಲ್ಲು ಸ್ಕ್ವೇರ್​ ನಿರ್ದೇಶಕ ಕಲ್ಯಾಣ್​ ಶಂಕರ್​ ಸಿನಿಮಾಗೆ ಆಕ್ಷನ್​ ಕಟ್​​ ಹೇಳಲಿದ್ದಾರೆ. ಇನ್ನು ಸಿತಾರಾ ಎಂಟರ್​ಟೈನ್​​ಮೆಂಟ್ಸ್​ ನಿರ್ಮಾಣದ ಹೊಣೆ ಹೊತ್ತಿದೆ ಎನ್ನಲಾಗಿದೆ. ಮೀನಾಕ್ಷಿ ಅವರು ಮೊದಲ ಬಾರಿಗೆ ಕಾರ್ತಿಕ್​ ಅವರೊಮದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸದ್ದು

ಸದ್ಯ ಮೀನಾಕ್ಷಿ ಅವರ ಸಿನಿಮಾ ಬಗ್ಗೆ ಯಾವುದೇ ಅಪಡೇಟ್ ಇಲ್ಲ. ಯಾವ ಸಿನಿಮಾ ರಿಲೀಸ್​ ಆಗುತ್ತಿದೆ ಎನ್ನುವ ಬಗ್ಗೆ ಮಾಹಿತಿಯೂ ಇಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಆಕ್ಟಿವ್ ಇರುವ ಅವರು, ಆಗಾಗ್ಗೆ ಸ್ಟೋರಿಸ್​ಗಳನ್ನು ಹಾಕುತ್ತಾರೆ.

ಪೀಚ್​ ಕಲರ್​ ಡ್ರೆಸ್​ನಲ್ಲಿ ಮಿಂಚಿಂಗ್​

ಪೀಚ್​ ಕಲರ್​ ಜಮ್​ಸ್ಯೂಟ್​ಗೆ ದೊಡ್ಡ ರಿಂಗ್​ನಂತಿರುವ ಓಲೆಯನ್ನು ಮೀನಾಕ್ಷಿ ಧರಿಸಿದ್ದಾರೆ. ಸಿಂಪಲ್​ ಮೇಕಪ್​ ಲುಕ್​ ಅವರ ಅಂದವನ್ನು ಹೆಚ್ಚಿಸಿದೆ.

ಎಲ್ಲರ ಹಲ್ಲನ್ನೇ ಗಮನಿಸುವೆ

ಲಕ್ಕಿ ಭಾಸ್ಕರ್​ ಸಿನಿಮಾ ರಿಲೀಸ್ ಆದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ನಾನು ದಂತ ವೈದ್ಯಳಾಗಿರುವ ಕಾರಣ ಎಲ್ಲರ ಹಲ್ಲನ್ನು ಗಮನಿಸುತ್ತೇನೆ ಎಂದು ಹಲ್ಲು ಉಜ್ಜುವ ವಿಧಾನವನ್ನು ಎಕ್ಸ್​ಪ್ಲೇನ್ ಮಾಡಿದ್ದರು.