ಮಾಲಿವುಡ್ ಖ್ಯಾತಿಯ ನಟ ದುಲ್ಕರ್ ಸಲ್ಮಾನ್ ಅಭಿನಯದ ಲಕ್ಕಿ ಭಾಸ್ಕರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಚಿರಪರಿಚಿತರಾದ ಮೀನಾಕ್ಷಿ ಚೌಧರಿಗೆ ಟಾಲಿವುಡ್ ಅಲ್ಲದೇ ಕಾಲಿವುಡ್ನಲ್ಲಿಯೂ ಸಾಕಷ್ಟು ಅವಕಾಶಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಸಾದಾ ಸೀದಾ ಹುಡುಗಿಯಂತೆ ಪೋಸ್ ಕೊಟ್ಟು ಹಂಚಿಕೊಂಡಿರುವ ಫೋಟೋ ನೆಟ್ಟಿಗರ ಮನ ಗೆದ್ದಿದೆ.
ನಾನು ನನ್ನ ಮನಸ್ಥಿತಿ
ವೃತ್ತಿಯಲ್ಲಿ ಡೆಂಟಿಸ್ಟ್ ಆಗಿರುವ ಮೀನಾಕ್ಷಿ ಹೀ ಎಂದು ಹಲ್ಲು ಗಿಂಜುತ್ತ ಕ್ರೀಂ, ಗ್ರೀನ್ ಮಿಶ್ರಿತ ಪ್ರಿಂಟೆಡ್ ಸಿಂಪಲ್ ಕುರ್ತಾ ಧರಿಸಿ ಮಿಂಚಿದ್ದಾರೆ. ನಾನು ಮತ್ತು ನನ್ನ ಮನಸ್ಥಿತಿ ಹಾಗೂ ನನಗೆ ಪ್ರತಿ ಬಾರಿ ಜೊತೆಯಾಗುವ ರಬ್ಬರ್ ಬ್ಯಾಂಡ್ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಬಹಳ ಚೆನ್ನಾಗಿದ್ದೀರಾ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ
ಡೆಂಟಿಸ್ಟ್ ಮೀನಾಕ್ಷಿ
ರಾಣಾ ದಗ್ಗುಬಾಟಿಯವರ ಕಾರ್ಯಕ್ರಮವೊಂದರಲ್ಲಿ ಹಲ್ಲು ಉಜ್ಜುವ ಬಗ್ಗೆ ಮತ್ತು ಡೆಂಟಿಸ್ಟ್ ಆದ ಮೇಲೆ ಸಾಮಾನ್ಯವಾಗಿ ಎಲ್ಲರ ಹಲ್ಲನ್ನು ಹೇಗೆ ಗಮನಿಸುತ್ತಾರೆ ಎನ್ನುವ ಬಗ್ಗೆ ಹೇಳಿಕೊಂಡು ನಗಾಡಿದ್ದರು. ಇದೊಂದು ಸಾಮಾನ್ಯ ರೋಗವಿದ್ದಂತೆ ಎಂದು ಹೇಳಿದ್ದರು.
ಮೀನಾಕ್ಷಿ ನಟಿಸಿದ ಸಿನಿಮಾಗಳಿವು
ಮಟ್ಕ, ಲಕ್ಕಿ ಭಾಸ್ಕರ್ ಹಿಟ್ ದಿ ಸೆಕೆಂಡ್ ಕೇಸ್, ಸಂಕ್ರಾಂತಿಕಿ ವಸ್ತುನ್ನಾಮುಮ ಗುಂಟೂರು ಖಾರಂ, ಕಿಲಾಡಿ, ಅನಗನಗ ಒಕ ರಾಜು, ಹತ್ಯಾ, ಮೆಕ್ಯಾನಿಕ್ ರಾಕಿ, ಗೋಟ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.
'ಕಾರ್ತಿ 30' ನಾಯಕಿ
ನಟ ಕಾರ್ತಿ ಅವರ ವೃತ್ತಿಜೀವನದ 30ನೇ ಚಿತ್ರ ಕಾರ್ತಿ 30' ಸಿನಿಮಾಗೆ ನಾಯಕಿಯಾಗಿದ್ದಾರೆ. ಪ್ರಸ್ತುತ ಹೈದರಾಬಾದ್‌ನಲ್ಲಿ ಚಿತ್ರದ ಮೊದಲ ಶೆಡ್ಯೂಲ್‌ನ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಅಲ್ಲಿ ಸೆರೆಹಿಡಿಯಲಾಗುತ್ತಿದೆ.
ಮಿಸ್ ಗ್ರ್ಯಾಂಡ್ ಇಂಟರ್ ನ್ಯಾಷನಲ್
2018ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ ನಂತರ ಮಿಸ್ ಗ್ರ್ಯಾಂಡ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಟಾಪ್ 5 ಆಯ್ಕೆಯಲ್ಲಿ ರನರ್ ಅಪ್ ಆಗಿದ್ದರು