ಮಾಡ್ರನ್​ ಮೀನಾಕ್ಷಿ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಾಡ್ರನ್​ ಮೀನಾಕ್ಷಿ!

ಲಕ್ಕಿ ಭಾಸ್ಕರ್​ ಸಿನಿಮಾ ಮೂಲಕ ಸಿನಿಪ್ರಿಯರ ಗಮನ ಸೆಳೆದ ಬಹುಭಾಷಾ ನಟಿ ಮೀನಾಕ್ಷಿ ಚೌಧರಿ ಅವರ ಹೊಸ ಲುಕ್​ ವೈರಲ್​ ಆಗಿದೆ. ಹಾಟ್​ ಅವತಾರದಲ್ಲಿ ಮೀನಾಕ್ಷಿಯನ್ನು ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ.

ಬಹುಮುಖ ಪ್ರತಿಭೆ

ಮೀನಾಕ್ಷಿ ಚೌಧರಿ ಅವರು ಕೇವಲ ನಟಿ ಮಾತ್ರವಲ್ಲದೆ, ದಂತವೈದ್ಯೆ ಮತ್ತು ಮಾಡೆಲ್ ಕೂಡ ಹೌದು. ಬಣ್ಣದ ಲೋಕ ಇಷ್ಟವಾದ್ದರಿಂದ ಸಿನಿಮಾವನ್ನು ತಮ್ಮ ವೃತ್ತಿಜೀವನವಾಗಿ ಆಯ್ದುಕೊಂಡಿದ್ದಾರೆ.

ಸೌಂದರ್ಯ ಸ್ಪರ್ಧೆಗಳಲ್ಲಿ ಸಾಧನೆ

ಇವರು 2018ರ 'ಫೆಮಿನಾ ಮಿಸ್ ಇಂಡಿಯಾ' ಸ್ಪರ್ಧೆಯಲ್ಲಿ ರನ್ನರ್-ಅಪ್ ಆಗಿದ್ದರು ಮತ್ತು 'ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2018' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಫಸ್ಟ್ ರನ್ನರ್-ಅಪ್ ಪ್ರಶಸ್ತಿ ಗೆದ್ದಿದ್ದರು.

ಸಿನಿಮಾ ರಂಗಕ್ಕೆ ಪದಾರ್ಪಣೆ

2021ರಲ್ಲಿ ಬಿಡುಗಡೆಯಾದ 'ಇಚ್ಚಟ ವಹನಮುಲು ನಿಲುಪರಾದು' ಎಂಬ ತೆಲುಗು ಚಿತ್ರದ ಮೂಲಕ ಇವರು ಚಿತ್ರರಂಗಕ್ಕೆ ಪ್ರವೇಶಿಸಿದರು.

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ

ತೆಲುಗಿನ 'ಹಿಟ್ 2', 'ಗುಂಟೂರು ಕಾರಂ', 'ಸಂಕ್ರಾಂತಿ ವಸ್ತುನಾಂ' ಮತ್ತು ತಮಿಳಿನ ವಿಜಯ್ ಅಭಿನಯದ 'ದಿ ಗೋಟ್' (The GOAT) ನಂತಹ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಲಕ್ಕಿ ಭಾಸ್ಕರ್​ ಭರ್ಜರಿ ಯಶಸ್ಸು

ದುಲ್ಕರ್​ ಸಲ್ಮಾನ್​ ಅಭಿನಯದ ಲಕ್ಕಿ ಭಾಸ್ಕರ್​ ಸಿನಿಮಾದಲ್ಲಿ ಸಾಮಾನ್ಯ ಗೃಹಿಣಿಯ ಪಾತ್ರದಲ್ಲಿ ಮಿಂಚುವ ಮೂಲಕ ಮೀನಾಕ್ಷಿ ಅವರು ತಮ್ಮ ನಟನೆಯನ್ನು ಸಾಬೀತು ಮಾಡಿದರು.

ಜಾಲತಾಣದಲ್ಲಿ ಆ್ಯಕ್ಟೀವ್​

ಸಾಮಾಜಿಕ ಜಾಲತಾಣದಲ್ಲೂ ಸಖತ್​ ಆ್ಯಕ್ಟೀವ್​ ಆಗಿರುವ ಮೀನಾಕ್ಷಿ, ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈಬಿಸಿ ಏರಿಸುತ್ತಿರುತ್ತಾರೆ.

ಹಾಟ್​ ಮೀನಾಕ್ಷಿ

ಮೀನಾಕ್ಷಿ ಅವರು ಇತ್ತೀಚೆಗೆ ಹಳದಿ ಬಣ್ಣದ ಟಾಪ್ ಮತ್ತು ಜೀನ್ಸ್ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತುಂಬಾ ಮಾದಕ ಭಂಗಿಯಲ್ಲಿ ಪೋಸ್​​ ನೀಡಿದ್ದು, ಫೋಟೋ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.