ಇಟಲಿಯಲ್ಲಿ 'ಮಾಸ್ಟರ್ ಪೀಸ್' ಬೆಡಗಿ!

ಭಾನುಪ್ರಿಯ ಡಿ.ಕೆ

ಇಟಲಿಯಲ್ಲಿ 'ಮಾಸ್ಟರ್ ಪೀಸ್' ಬೆಡಗಿ!

ನಟಿ ಸಾನ್ವಿ ಶ್ರೀವಾಸ್ತವ ಅವರು ಇತ್ತೀಚೆಗೆ ಇಟಲಿಗೆ ಭೇಟಿ ನೀಡಿದ್ದು, ಅಲ್ಲಿನ ಐತಿಹಾಸಿಕ ರಸ್ತೆಗಳು ಮತ್ತು ಪ್ರಾಚೀನ ವಾಸ್ತುಶಿಲ್ಪದ ಸೌಂದರ್ಯವನ್ನು ಸವಿಯುತ್ತಿದ್ದಾರೆ.

ಕ್ಲಾಸಿಕ್ ಮತ್ತು ಸ್ಟೈಲಿಶ್ ಲುಕ್

ಪ್ರವಾಸದ ಸಮಯದಲ್ಲಿ ಸಾನ್ವಿ ಅತ್ಯಂತ ಸರಳ ಹಾಗೂ ಆಕರ್ಷಕ ಉಡುಪಿನಲ್ಲಿ ಮಿಂಚಿದ್ದಾರೆ. ತಿಳಿ ಬಣ್ಣದ ಫ್ಲೋರಲ್ ಫ್ರಾಕ್, ಬಿಳಿ ಬಣ್ಣದ ಕಾರ್ಡಿಗನ್ ಮತ್ತು ಬಿಳಿ ಸ್ಲಿಂಗ್ ಬ್ಯಾಗ್ ಧರಿಸಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿರುವ ಅವರ ಸ್ಟೈಲಿಶ್ ಶೈಲಿ ಅಭಿಮಾನಿಗಳ ಗಮನ ಸೆಳೆದಿದೆ.

ಸ್ಥಳೀಯ ಸಂಸ್ಕೃತಿಯ ಪರಿಚಯ

ಇಟಲಿಯ ಗಲ್ಲಿಗಳಲ್ಲಿ ಸುತ್ತಾಡುತ್ತಾ ಅಲ್ಲಿನ ಸ್ಥಳೀಯ ಸಂಸ್ಕೃತಿ, ಇಟಾಲಿಯನ್ ಆಹಾರ ಪದ್ಧತಿ ಮತ್ತು ವಿಶಿಷ್ಟ ಅಲಂಕಾರಿಕ ವಸ್ತುಗಳನ್ನು ಅವರು ಹತ್ತಿರದಿಂದ ವೀಕ್ಷಿಸುತ್ತಿದ್ದಾರೆ.

ಖುಷಿಯ ಕ್ಷಣಗಳು

ಚಿತ್ರದಲ್ಲಿ ಸಾನ್ವಿ ಅವರು ಕ್ಯಾಮೆರಾಗೆ ಪೋಸ್ ನೀಡುತ್ತಾ, ತಮ್ಮ ಪ್ರವಾಸದ ಪ್ರತಿಯೊಂದು ಕ್ಷಣವನ್ನು ಎಷ್ಟು ಆನಂದಿಸುತ್ತಿದ್ದಾರೆ ಎಂಬುದನ್ನು ತೋರಿಸಿದ್ದಾರೆ.

ಸಿನಿಮಾ ಬಗ್ಗೆ

ತೆಲುಗಿನ 'ಲವ್ಲಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಾನ್ವಿ, ಇಂದು ಕನ್ನಡ ಚಿತ್ರರಂಗದ ಪ್ರಮುಖ ಮತ್ತು ನೆಚ್ಚಿನ ನಟಿಯರಲ್ಲಿ ಒಬ್ಬರಾಗಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾನ್ವಿ ತಮ್ಮ ಇಟಲಿ ಪ್ರವಾಸದ ಸುಂದರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಅವರ ಈ ಕ್ಯೂಟ್ ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿವೆ.