ಹರಾಜಿನಲ್ಲಿ ಮಂಗೇಶ್ 5.20 ಕೋಟಿ ರೂ.ಗೆ ಸೋಲ್ಡ್​​

ಭೂಮಿಕಾ ವಿ. ನಾಥ್​​​

ಹರಾಜಿನಲ್ಲಿ ಮಂಗೇಶ್ 5.20 ಕೋಟಿ ರೂ.ಗೆ ಸೋಲ್ಡ್​​

5.20 ಕೋಟಿ ರೂ. ನೀಡಿ ಆರ್​ಸಿಬಿ ತನ್ನ ತೆಕ್ಕೆಗೆ ಹಾಕಿಕೊಂಡಿರೋ ಮಂಗೇಶ್​ ಓರ್ವ ಆಲ್​ರೌಂಡರ್​ ಆಟಗಾರ. ಬಲಗೈ ಬ್ಯಾಟರ್​ ಹಾಗೂ ಎಡಗೈ ಬೌಲರ್.

24 ವರ್ಷದ ಮಂಗೇಶ್​ ಮಧ್ಯಪ್ರದೇಶದ ಕ್ರಿಕೆಟಿಗ

24 ವರ್ಷದ ಮಂಗೇಶ್​ ಮಧ್ಯಪ್ರದೇಶದ ಕ್ರಿಕೆಟಿಗ. ಡೆತ್​ ಓವರ್​ಗಳಲ್ಲಿ ಕರಾರುವೊಕ್ಕಾಗಿ ಯಾರ್ಕರ್​ ಮಾಡುವ ಸಾಮರ್ಥ್ಯ ಮಂಗೇಶ್​ ಅವರಲ್ಲಿದೆ. ಇತ್ತೀಚೆಗೆ ಅವರು ನೀಡಿದ ಉತ್ತಮ ಪ್ರದರ್ಶನಗಳು ಆತನನ್ನು ಓರ್ವ ಎಡಗೈ ಪೇಸ್​ ಬೌಲಿಂಗ್​ ಆಲ್​ರೌಂಡರ್​ ಆಗಿ ಬೆಳೆದುಬಂದ ರೀತಿಯನ್ನು ತೋರಿಸಿದೆ.

ಹರಾಜಿನಲ್ಲಿ ಯಾರ ನಡುವೆ ಪೈಪೋಟಿ?

ಮಂಗೇಶ್ ಯಾದವ್ ತಮ್ಮ ಮೂಲ ಬೆಲೆ 30 ಲಕ್ಷ ರೂ.ನೊಂದಿಗೆ ಮಿನಿ ಹರಾಜಿನಲ್ಲಿ ಭಾಗವಹಿಸಿದರು. ಆರ್‌ಸಿಬಿ ಬಿಡ್ಡಿಂಗ್ ಆರಂಭಿಸಿತು. ಈ ವೇಳೆ ಸನ್‌ರೈಸರ್ಸ್ ಹೈದರಾಬಾದ್ (SRH) ಸ್ಪರ್ಧೆಗೆ ಸೇರಿಕೊಂಡಿತು. ಎರಡೂ ತಂಡಗಳು ಎಡಗೈ ಪೇಸ್-ಬೌಲಿಂಗ್ ಆಲ್‌ರೌಂಡರ್​ ಪಡೆಯಲು ಭಾರಿ ಪೈಪೋಟಿ ನಡೆಸಿದಂತೆ ಬೆಲೆ ಕೂಡ ಏರಿಕೆಯಾಯಿತು.

ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮಂಗೇಶ್

ಈಗ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT)ಯಲ್ಲಿ ಮಧ್ಯಪ್ರದೇಶ ಪರ ಚೊಚ್ಚಲ ಪಂದ್ಯವಾಡಿದರು. ಎರಡು ಸೂಪರ್ ಲೀಗ್ ಪಂದ್ಯಗಳಲ್ಲಿ ಆಡುವ ಮೂಲಕ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಯಶ್​ ದಯಾಳ್​ಗೆ ಬ್ಯಾಕಪ್

ಆರ್‌ಸಿಬಿ ಬೆಲೆಯನ್ನು 4 ಕೋಟಿ ರೂ.ಗೆ ಹೆಚ್ಚಿಸಿತು. ಈ ವೇಳೆ ಎಸ್‌ಆರ್‌ಎಚ್ 4.20 ಕೋಟಿ ರೂ.ಗೆ ಹೆಚ್ಚಿಸಿತು. ಯಶ್​ ದಯಾಳ್​ಗೆ ಬ್ಯಾಕಪ್​ ಆಗಿ ಹೇಗಾದರೂ ಮಾಡಿ ಎಡಗೈ ಬೌಲರ್​ ಆಯ್ಕೆಯನ್ನು ಪಡೆಯಲು ನಿರ್ಧರಿಸಿದ್ದ ಆರ್‌ಸಿಬಿ, ಮೊತ್ತವನ್ನು 5 ಕೋಟಿ ರೂ.ಗಳಿಗೆ ಹೆಚ್ಚಿಸಿತು.