ಸೂರ್ಯ ಸರ್ ಅಭಿಮಾನಿ ನಾನು
ವಿಶ್ವನಾಥನ್ ಕುಟುಂಬ ಸಿನಿಮಾದಲ್ಲಿ ಸೂರ್ಯ ಜೊತೆಗೆ ನಟಿಸಿರುವ ಮಮಿತಾ ಬೈಜು ಅವರು ಸಂದರ್ಶನವೊಂದರಲ್ಲಿ ಹೀಗೆಂದು ಹೇಳಿದ್ದರು. ನಾನು ನಾನು ಸೂರ್ಯ ಸರ್ ಅವರ ದೊಡ್ಡ ಅಭಿಮಾನಿ. ನಾನು ಹೈಸ್ಕೂಲಿನಲ್ಲಿದ್ದಾಗ, ಅವರು ಸಿನಿಮಾ ಪ್ರಚಾರಕ್ಕಾಗಿ ಕೊಚ್ಚಿಯ ಲುಲು ಮಾಲ್‌ಗೆ ಬಂದಿದ್ದರು. ನನಗೆ ಅವರನ್ನು ನೋಡಲು ತುಂಬಾ ಆಸೆ ಇತ್ತು, ಆದರೆ ಆ ದಿನ ಕೊಟ್ಟಾಯಂನಿಂದ ಕೊಚ್ಚಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ನನ್ನ ಸಹೋದರ ಅವರನ್ನು ಭೇಟಿಯಾಗಿ ಫೋಟೋ ತೆಗೆಸಿಕೊಂಡಿದ್ದ ಎಂದು ಹೇಳಿದ್ದರು.