ನಟಿ ಮಾಳವಿಕಾ ಮೋಹನನ್ ಸದ್ಯ ಮಾಲ್ಡೀವ್ಸ್‌ನ ಸುಂದರ ಕಡಲತೀರದಲ್ಲಿ ತಮ್ಮ ರಜಾದಿನಗಳನ್ನು ಕಳೆಯುತ್ತಿದ್ದು, ಅಲ್ಲಿನ ಅದ್ಭುತ ಕ್ಷಣಗಳನ್ನು ಸವಿಯುತ್ತಿದ್ದಾರೆ. ಇದರ ನಡುವೆ ಅವರ ಹಾಟ್ ಫೋಟೋಗಳು ವೈರಲ್ ಆಗುತ್ತಿವೆ.
ಬೋಲ್ಡ್ ಲುಕ್
ಮಾಲ್ಡೀವ್ಸ್‌ನ ಬಿಳಿ ಮರಳಿನ ಬೀಚ್ ಹಾಗೂ ತೆಂಗಿನ ಮರಗಳ ಹಿನ್ನೆಲೆಯಲ್ಲಿ ಅವರು ಕ್ಲಿಕ್ಕಿಸಿಕೊಂಡಿರುವ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.
ಸ್ಟೈಲಿಶ್ ಸ್ಟನ್ನಿಂಗ್ ಲುಕ್
ವೈರಲ್ ಫೋಟೋಶೂಟ್‌ನಲ್ಲಿ ಮಾಳವಿಕಾ ಅವರು ಪ್ರಿಂಟೆಡ್ ಸರೊಂಗ್ ಜೊತೆಗೆ ಅತ್ಯಂತ ಸ್ಟೈಲಿಶ್ ಆದ ಬೀಚ್ ಉಡುಪನ್ನು ಧರಿಸಿದ್ದು, ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಬಿಸಿಲಿನಲ್ಲಿ ಪೋಸ್
ಸೂರ್ಯನ ಹೊಂಬೆಳಕಿನಲ್ಲಿ ಮಾಳವಿಕಾ ಅವರು ತಮ್ಮ ಫಿಟ್‌ನೆಸ್ ಹಾಗೂ ರಿಲ್ಯಾಕ್ಸ್ಡ್ ಮೂಡ್ ಅನ್ನು ಪ್ರದರ್ಶಿಸುತ್ತಾ ನೀಡಿರುವ ಎಲಿಗಂಟ್ ಪೋಸ್‌ಗಳು ಅಭಿಮಾನಿಗಳ ಹೃದಯ ಗೆದ್ದಿವೆ.
ಆಫ್ ಸ್ಕ್ರೀನ್ ಮನರಂಜನೆ
ಈ ವರ್ಷ ತೆರೆಕಂಡ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಮಾಳವಿಕಾ ಮಾತ್ರ ಆಫ್-ಸ್ಕ್ರೀನ್‌ನಲ್ಲಿ ತಮ್ಮ ಫೋಟೋಗಳ ಮೂಲಕ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡುತ್ತಿದ್ದಾರೆ.
ತಮಿಳಿನಲ್ಲಿ ಸಾಲು ಸಾಲು ಸಿನಿಮಾಗಳು
ಸದ್ಯ ಇವರ ಕೈಯಲ್ಲಿ ತಮಿಳಿನ ಎರಡು ದೊಡ್ಡ ಪ್ರಾಜೆಕ್ಟ್‌ಗಳಿದ್ದು, ಕಾರ್ತಿ ನಟನೆಯ 'ಸದಾರ್ 2' ಮತ್ತು 'ಪಾಕೆಟ್ ನಾವೆಲ್' ಚಿತ್ರಗಳಲ್ಲಿ ಅವರು ಬಿಜಿಯಾಗಿದ್ದಾರೆ.
ಹೆಚ್ಚಿದ ನಿರೀಕ್ಷೆ
ಗ್ಲಾಮರ್ ಹಾಗೂ ನಟನೆಯ ಮೂಲಕ ಗುರುತಿಸಿಕೊಂಡಿರುವ ಮಾಳವಿಕಾ ಅವರ ಮುಂಬರುವ ಈ ಸಿನಿಮಾಗಳ ಮೇಲೆ ಸದ್ಯ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ.
ಫ್ಯಾನ್ಸ್ ಫಿದಾ
ಸದ್ಯ ಜಾಲತಾಣದಲ್ಲಿ ವೈರಲ್ ಆಗಿರುವ ಮಾಳವಿಕಾ ಅವರ ಹಾಟ್ ಫೋಟೋಗಳನ್ನು ನೋಡಿದ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಸೌತ್ ಬ್ಯೂಟಿ ಮೈಮಾಟವನ್ನು ಹೊಗಳಿ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.