ಗಂಟಲು ಕ್ಯಾನ್ಸರ್ ಅಪಾಯ ತಡೆಯಲು ಇಂದೇ ಈ ಬದಲಾವಣೆ ಮಾಡಿಕೊಳ್ಳಿ!
ಭಾನುಪ್ರಿಯ ಡಿ.ಕೆ
ಗಂಟಲು ಕ್ಯಾನ್ಸರ್ ಅಪಾಯ ತಡೆಯಲು ಇಂದೇ ಈ ಬದಲಾವಣೆ ಮಾಡಿಕೊಳ್ಳಿ!
ಗಂಟಲು ಕ್ಯಾನ್ಸರ್ ಎನ್ನುವುದು ಗಂಟಲು ಅಥವಾ ಧ್ವನಿ ಪೆಟ್ಟಿಗೆಯ ಜೀವಕೋಶಗಳಲ್ಲಿ ಅಸಹಜ ಬೆಳವಣಿಗೆಯಿಂದ ಉಂಟಾಗುವ ಗಂಭೀರ ಸಮಸ್ಯೆಯಾಗಿದೆ.
ತಂಬಾಕು ಮತ್ತು ಧೂಮಪಾನದಿಂದ ದೂರವಿರಿ
ಸಿಗರೇಟ್, ಬೀಡಿ, ಹುಕ್ಕಾ ಧೂಮಪಾನ ಅಥವಾ ಗುಟ್ಕಾ, ಪಾನ್ ಮಸಾಲಾದಂತಹ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ತ್ಯಜಿಸಿ. ಇದು ಗಂಟಲಿನ ಆರೋಗ್ಯಕ್ಕೆ ಹಾನಿಕಾರಕ.
ಮದ್ಯಪಾನದ ಮಿತಿ ಇರಲಿ
ಅತಿಯಾದ ಮದ್ಯಪಾನವು ಗಂಟಲಿನ ಕೋಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಇದರ ಅಭ್ಯಾಸವಿದ್ದರೆ ಅದನ್ನು ಮಿತಿಗೊಳಿಸಿ ಅಥವಾ ಬಿಟ್ಟುಬಿಡುವುದು ಉತ್ತಮ. ತಂಬಾಕು ಮತ್ತು ಮದ್ಯಪಾನ ಎರಡನ್ನೂ ಒಟ್ಟಿಗೆ ಮಾಡುವವರಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇತರರಿಗಿಂತ ಹತ್ತು ಪಟ್ಟು ಹೆಚ್ಚಿರುತ್ತದೆ.
ಆರೋಗ್ಯಕರ ಆಹಾರ ಸೇವನೆ
ಪೌಷ್ಟಿಕಾಂಶಯುಕ್ತ ಆಹಾರವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಪ್ರತಿದಿನ ತಾಜಾ ಹಣ್ಣುಗಳು ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.
ಗಂಟಲಿನ ಸೋಂಕು ಬಗ್ಗೆ ನಿಗಾ ಇರಲಿ
ದೀರ್ಘಕಾಲದ ಗಂಟಲು ನೋವು, ಧ್ವನಿಯಲ್ಲಿ ಬದಲಾವಣೆ, ಆಹಾರ ನುಂಗಲು ತೊಂದರೆ, ಅಥವಾ ಕುತ್ತಿಗೆಯ ಭಾಗದಲ್ಲಿ ಗಡ್ಡೆಗಳಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಬಾಯಿಯ ಸ್ವಚ್ಛತೆ
ಬಾಯಿಯ ಅಸ್ವಚ್ಛತೆಯು ಹ್ಯೂಮನ್ ಪ್ಯಾಪಿಲೋಮಾ ವೈರಸ್ ನಂತಹ ಸೋಂಕುಗಳಿಗೆ ದಾರಿ ಮಾಡಿಕೊಡುತ್ತದೆ, ಇದು ಗಂಟಲು ಕ್ಯಾನ್ಸರ್‌ಗೆ ಕಾರಣವಾಗಬಹುದು. ಹಾಗಾಗಿ ಪ್ರತಿದಿನ ಎರಡು ಬಾರಿ ಹಲ್ಲುಜ್ಜುವುದು ಮತ್ತು ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.