ಹಾರ್ಟ್ ಅಟ್ಯಾಕ್ ಅಪಾಯ ತಪ್ಪಿಸಲು ಇಂದೇ ಈ ಬದಲಾವಣೆ ಮಾಡಿಕೊಳ್ಳಿ!
ಭಾನುಪ್ರಿಯ ಡಿ.ಕೆ
ಹಾರ್ಟ್ ಅಟ್ಯಾಕ್ ಅಪಾಯ ತಪ್ಪಿಸಲು ಇಂದೇ ಈ ಬದಲಾವಣೆ ಮಾಡಿಕೊಳ್ಳಿ!
ದಿನನಿತ್ಯ ನಾವು ಅಳವಡಿಸಿಕೊಂಡ ಕೆಟ್ಟ ಅಭ್ಯಾಸಗಳಿಂದ ಹೃದಯದ ಕಾಯಿಲೆಗಳು ಹೆಚ್ಚಾಗುತ್ತಿವೆ. ಆದರಿಂದ ಪ್ರತಿನಿತ್ಯ ಈ ರೀತಿಯ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದರಿಂದ ಹೃದಯದ ಆರೋಗ್ಯವನ್ನು ಬಲಪಡಿಸಿಕೊಳ್ಳಬಹುದು.
30 ನಿಮಿಷಗಳ ಕಾಲ ನಡೆಯಿರಿ
ನಿಮ್ಮ ಹೃದಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ನೀವೇನಾದರೂ ಪ್ರಯತ್ನಿಸುತ್ತಿದ್ದರೆ, ಇಂದಿನಿಂದಲೇ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಪ್ರತಿನಿತ್ಯ 30 ನಿಮಿಷಗಳ ಕಾಲ ನಡೆಯುವುದರಿಂದ ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ಹೃದಯವನ್ನು ಕಾಪಾಡುತ್ತದೆ.
ಪೌಷ್ಟಿಕ ಆಹಾರ ಸೇವಿಸಿ
ಪ್ರತಿನಿತ್ಯ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀಜಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.
ಉಪ್ಪು ಸೇವನೆ ಕಡಿಮೆ ಮಾಡಿ
ಹೆಚ್ಚು ಉಪ್ಪು ಇರುವ ಆಹಾರವನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹೃದಯದ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ಅತಿ ಹೆಚ್ಚು ಉಪ್ಪು ತಿನ್ನುವ ಅಭ್ಯಾಸವನ್ನು ಬಿಡಿ.
ಹೈಡ್ರೇಟೆಡ್ ಆಗಿರಿ
ಪ್ರತಿನಿತ್ಯ ಕನಿಷ್ಟ 3-4 ಲೀಟರ್ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಸರಿಯಾದ ಜಲಸಂಚಯನವು ದೇಹದಲ್ಲಿ ರಕ್ತದ ಪರಿಚಲನೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ದೇಹಕ್ಕೆ ನೀರು ಸಿಗದೇ ಇದ್ದಾಗ ಹೃದಯವು ಹೆಚ್ಚು ಪಂಪ್ ಮಾಡಬೇಕಾಗುತ್ತದೆ.
ಚೆನ್ನಾಗಿ ನಿದ್ರೆ ಮಾಡಿ
ನಿದ್ರೆಯ ಕೊರತೆಯು ಬೊಜ್ಜು, ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿನಿತ್ಯ ಕನಿಷ್ಟ 7-8 ಗಂಟೆಗಳ ವರೆಗೆ ನಿದ್ರೆ ಮಾಡುವ ಅಭ್ಯಾಸವನ್ನು ಮಾಡಿ. ಹೀಗೆ ಮಾಡುವುದರಿಂದ ಹೃದಯದ ಸ್ನಾಯುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.