ನೀರು ಹಾಕಲು ಮರೆಯುತ್ತೀರಾ?; ಕಡಿಮೆ ನಿರ್ವಹಣೆಯ ಈ ಗಿಡಗಳು ನಿಮ್ಮ ಮನೆಗೆ ಬೆಸ್ಟ್

ಮಮತಾ

ನೀರು ಹಾಕಲು ಮರೆಯುತ್ತೀರಾ?; ಕಡಿಮೆ ನಿರ್ವಹಣೆಯ ಈ ಗಿಡಗಳು ನಿಮ್ಮ ಮನೆಗೆ ಬೆಸ್ಟ್

ಬ್ಯುಸಿ ಶೆಡ್ಯೂಲ್​ ಮಧ್ಯೆಯೂ ಗಾರ್ಡನಿಂಗ್ ಮಾಡಬೇಕು ಎಂದು ಆಸೆ ಹೊತ್ತವರು..ಕಡಿಮೆ ಸಮಯ ಬೇಡುವ ಗಿಡಗಳನ್ನು ಬೆಳೆಯುವ ಮೂಲಕ ನಿಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಬಹುದಾಗಿದೆ. ಗಿಡಗಳು ಮನೆ ಆವರಣದ ಅಂದವನ್ನು ಹೆಚ್ಚು ಮಾಡುತ್ತದೆ. ಇಷ್ಟೇ ಅಲ್ಲದ ಒತ್ತಡದ ಬದುಕಿಗೆ ವಿರಾಮ ಕೊಟ್ಟು ಹೊಸತಾಗಿ ಚಿಂತಿಸಲು ಸಹಾಯ ಮಾಡುತ್ತದೆ. ಅದರಂತೆ ನಿಮ್ಮ ಮನೆಯ ಆವರಣದಲ್ಲಿ ಈ ಎಂಟು ಗಿಡಗಳನ್ನು ಇಡಿ.

ಲೆಮನ್​​ ಗ್ರಾಸ್​​

ಮನೆ ಸುತ್ತಮುತ್ತಲು ಆವರಿಸಿಕೊಳ್ಳುವ ಕೀಟಗಳಿಂದ ಮುಕ್ತಿ ನೀಡಲು ಲೆಮನ್​​ ಗ್ರಾಸ್​​​ ಅಥವಾ ನಿಂಬೆ ಹುಲ್ಲು ಸಹಾಯ ಮಾಡುತ್ತದೆ. ಇದನ್ನು ಮರಳು ಮಿಶ್ರಿತ ಮಣ್ಣಿನಲ್ಲಿ ಬೆಖೆಯಬಹುದು. ಇದಕ್ಕೆ ಊರ್ಯನ ಬೆಳಕು ಅತ್ಯಗತ್ಯ. ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ತೀವ್ರ ನೀರಿಲ್ಲದೆ ಬರಡಾದಾಗ ಮಾತ್ರ ಬಳಕೆಮಾಡಿ

ಕರಿಬೇವು

ಭಾರತೀಯರ ಅಡುಗೆ ಮನೆಯಲ್ಲಿ ಎಂದೆಂದಿಗೂ ಬೇಕಾಗುವ ಪದಾರ್ಥ ಎಂದರೆ ಅದು ಕರಿಬೇವು. ಬೀಜಗಳಿಗಿಂತ ನರ್ಸರಿಯಲ್ಲಿ ಸಿಗುವ ಕರಿಬೇವಿನ ಗಿಡವನ್ನು ಕೊಂಡುಕೊಳ್ಳಿ. ಒದಕ್ಕೆ ಇದು ವೇಗವಾಗಿ ಬೆಳೆಯುತ್ತದೆ. ದೊಡ್ಡ ಪಾಟ್​ನಲ್ಲಿ ಇದರ ಪೋಷಣೆ ಮಾಡಬೇಕಾಗುತ್ತದೆ. ಪ್ರತಿ ಎರಡು ತಿಂಗಳಿಗೆ ಇದಕ್ಕೆ ಗೊಬ್ಬರ ಹಾಕುವ ಅಗತ್ಯವಿದೆ.

ರೋಸ್ಮರಿ

ರೋಸ್ಮರಿ ಗಿಡವು ನೈಸರ್ಗಿಕ ಸುಗಂಧವನ್ನು ನೀಡುತ್ತದೆ. ಇದರ ವಾಸನೆಯು ಸೊಳ್ಳೆಗಳಿಗೆ ಹಾಗೂ ಹಲ್ಲಿಗೆ ಆಗದು. ಹೀಗಾಗಿ ಇದನ್ನು ಬಾಲ್ಕನಿ ಅಥವಾ ತಾರಸಿಯಲ್ಲಿ ಬೆಳೆಯಬಹುದು. ಮಿತವಾಗಿ ನೀರು ಹಾಕಬೇಕು. ಆಗಾಗಗ್ಗೆ ಟ್ರಿಮ್​ ಮಾಡಿದಷ್ಟು ಇದರ ಬೆಳವಣಿಗೆಗ ಸಹಾಯ ಮಾಡುತ್ತದೆ.

ಅಲೋವೆರಾ

ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುವ ಅಲೋವೆರಾ ಹೆಚ್ಚಾಗಿ ನೀರು ಹಾಗೂ ಪೋಷಣೆಯನ್ನು ಕೇಳೋದಿಲ್ಲ. ಸೂರ್ಯನ ಬೆಳಕು ಹೆಚ್ಚಾಗಿ ಇರಬೇಕು.

ಪುದೀನಾ

ಆರೋಗ್ಯ ಸ್ನೇಹಿಯಾಗಿರುವ ಪುದೀನಾ ಬೆಳೆಯುವುದು ಆಗಾಗ್ಗೆ ಅವುಗಳನ್ನು ಖರೀದಿ ಮಾಡುವ ಸಮಸ್ಯೆಯನ್ನು ತಪ್ಪಿಸುತ್ತದೆ. ಮೊದಲಿಗೆ ಇದನ್ನು ತೇವಾಶವರುವ ಮಣ್ಣು ಅಥವಾ ಕುಂಡದಲ್ಲಿ ನೆಡಬೇಕು. ಇದಕ್ಕೆ ನಾಲ್ಕು ದಿನ ಬಿಸಿಲು ಮತ್ತು ನೀರು ಬಿದ್ದರೆ ಸಾಕು 10ರಿಂದ 15 ದಿನದಲ್ಲಿ ಬೇರು ಚೆನ್ನಾಗಿ ಬೆಳೆದು ಗಿಡ ಹಬ್ಬುತ್ತದೆ