ವಿಜಯವಾಣಿ ಸುದ್ದಿ ಜಾಲ
ರವಿ ಬೆಳಗೆರೆಯವರು ಬರೆದ ಅತ್ಯಂತ ಜನಪ್ರಿಯ ಕಾದಂಬರಿ ಹೇಳಿ ಹೋಗು ಕಾರಣ ಕಾದಂಬರಿ. ಮನೆ ಬಿಟ್ಟು ಬರುವ ಪ್ರಾರ್ಥನಾಳನ್ನು ಡಾಕ್ಟರ್ ಮಾಡುವ ಕನಸು ಕಂಡ ಹಿಮವಂತ, ಊರ್ಮಿಳಾ, ದೇಬಶಿಶು ಚಂದ್ರನಾಥ ಬಂಡೋಪಾಧ್ಯಾಯ ಸುತ್ತ ಕತೆ ಇದೆ. ನಿಜಕ್ಕೂ ಇದು ನಿಮಗೆ ಮೊಬೈಲ್ ಮುಟ್ಟುವಂತೆ ಪ್ರೇರೇಪಿಸುವುದಿಲ್ಲ.
ನಾಗತಿಹಳ್ಳಿ ಚಂದ್ರ ಶೇಖರ್ ಅವರು ಬರೆದ ಬಾ ನಲ್ಲೆ ಮಧು ಚಂದ್ರಕೆ ಕಾದಂಬರಿ ಸಾಕಷ್ಟು ಬಾರಿ ಓದಿಸಿಕೊಂಡ ಪುಸ್ತಕ. ಹಿಮಾಲಯದಲ್ಲಿ ನಡೆಯುವ ಕೊಲೆ ಪ್ರಕರಣದ ಸುತ್ತ ಕತೆ ಸುತ್ತುತ್ತದೆ. ಇದರೊಂದಿಗೆ ಹೆಚ್ಚು ಭಾವನಾತ್ಮಕವಾಗಿ ಕಾಡುವುದು ಇಬ್ಬರ ಪ್ರೇಮವು.
ವಸುದೇಂದ್ರ ಅವರು ಬರೆದಿರುವ ತೇಜೋ-ತುಂಗಭದ್ರಾ ಕತೆಯು ಪ್ರೇಮದ ಹೊನಲನ್ನು ನೀಡುತ್ತದೆ. ಧಾರ್ಮಿಕ ಹಿಂಸಾಚಾರ ಮತ್ತು ಸಂಪ್ರದಾಯಗಳ ಸುಳಿಗೆ ಸಿಲುಕುವ ಹಂಪಮ್ಮ ಮತ್ತು ಕೇಶವ ಎಂಬ ಯುವ ದಂಪತಿಯ ಸುತ್ತ ಈ ಕತೆಯನ್ನು ಹೆಣೆಯಲಾಗಿದೆ.
ಡಾ. ಕೋಟ ಶಿವರಾಮ ಕಾರಂತರು ರಚಿಸಿದ ಚಿಗುರಿದ ಕನಸು ಸಿನಿಮಾವಾಗಿ ಹೊರ ಹೊಮ್ಮಿತ್ತು. ತಾಯ್ನಾಡಿನ ಮೇಲಿನ ಪ್ರೀತಿ, ಭಾಷೆ ಹಾಗೂ ಪ್ರೀತಿಯ ಸುಳಿಯಲ್ಲಿ ಸಿಲುಕುವ ಹುಡುಗನ ಸುತ್ತ ಕತೆಯನ್ನು ಹೆಣೆಯಲಾಗಿದೆ. ಓದಿಸಿಕೊಂಡು ಹೋಗುವ ಪುಸ್ತಕ ಇದಾಗಿದೆ.
ರವಿ ಬೆಳಗೆರೆಯವರು ಬರೆದ ಅತ್ಯಂತ ಜನಪ್ರಿಯ ಕಾದಂಬರಿ ಮಾಂಡೋವಿ. ಮಾಂಡೋವಿ ಪ್ರೀತಿಸುತ್ತಿದ್ದ ಹುಡುಗನನ್ನು ಬಿಟ್ಟು ಅನಿವಾರ್ಯ ಕಾರಣಗಳಿಂದ ಮತ್ತೊಬ್ಬರನ್ನು ವಿವಾಹವಾಗುತ್ತಾರೆ. ಆದರೆ ಆತ ಮಾತ್ರ ಆಕೆಗೆ 50 ವರ್ಷಗಳ ಕಾಯುವ ಸುತ್ತ ಕತೆ ಕಟ್ಟಲಾಗಿದೆ.
ಮಲೆನಾಡಿನ ಜೀವನ..ಎಂದೋ ಬಿಟ್ಟು ಹೋದ ಮಗನ ಮೇಲಿನ ಪ್ರೀತಿ..ಏಕಾಂತದಲ್ಲಿರುವ ದಂಪತಿಗೆ ಅಚಾನಕ್ಕಾಗಿ ಸಿಗುವ ನಾರಾಯಣ..ಸರಳ ಜೀವನ..ಮಕ್ಕಳ ಮೇಲಿನ ಪ್ರೀತಿಯು ಮಲೆನಾಡಿನಲ್ಲಿ ಕಾಡಿನ ಮಧ್ಯೆ ನೆಲೆಸಿರುವಂತೆ ಭಾಸವಾಗುತ್ತದೆ.