'ನಾಕು ತಂತಿ'ಯಲ್ಲಿ ಖುಷಿ ರವಿ

ವಿಜಯವಾಣಿ ಸುದ್ದಿ ಜಾಲ

ದಿಯಾ ನಟಿ ಖುಷಿ

ದಿಯಾ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ನಟಿ ಖುಷಿ ರವಿ ಕಾಲಿಟ್ಟರು.

ಬ್ಲೂ ಸಿಲ್ಕ್​​ನಲ್ಲಿ ಮಿಂಚಿಂಗ್

ನೀಲಿ ಬಣ್ಣದ ಕ್ರೇಪ್​ ರೇಷ್ಮೆ ಸೀರೆಯುಟ್ಟು ಖುಷಿ ರವಿ ಮಿಂಚಿದ್ದಾರೆ. ಮೂಗಿಗೆ ನತ್ತು, ಸಿಂಪಲ್​ ಮೇಕಪ್​ ಅವರ ಅಂದವನ್ನು ಹೆಚ್ಚಿಸಿದೆ.

ನಾಕು ತಂತಿ ರಿಲೀಸ್​ಗೆ ಸಜ್ಜು

ಖುಷಿ ರವಿ ನಟನೆಯ ನಾಕು ತಂತಿ ಸಿನಿಮಾವು ರಿಲೀಸ್​ಗೆ ಸಜ್ಜಾಗಿದೆ. ಇದ್ರಲ್ಲಿ ನಾಲ್ವರು ನಟಿಯರಿದ್ದಾರೆ. ನಾಲ್ವರು ನಿರ್ದೇಶಕರು ನಿರ್ದೇಶಿಸಿದ ಸಿನಿಮಾ ಇದಾಗಿದೆ.

ಯಾರಿದ್ದಾರೆ ನಾಕುತಂತಿ ಸಿನಿಮಾದಲ್ಲಿ

ಸಂಗೀತಾ ಭಟ್, ಖುಷಿರವಿ, ರೋಷಿನಿ ಪ್ರಕಾಶ್ ಹಾಗೂ ಸಿಂಧು ಶ್ರೀನಿವಾಸ್​​ ಮೂರ್ತಿ ಸಿನಿಮಾದಲ್ಲಿ ನಟಿಸಿದ್ದಾರೆ.

ದೈಜಿ ಸಿನಿಮಾದಲ್ಲಿ ಖುಷಿ

ಆಧ್ಯಾತ್ಮಿಕ ಕತೆಯುಳ್ಳ ದೈಜಿ ಸಿನಿಮಾದಲ್ಲಿ ಖುಷಿ ನಟಿಸಿದ್ದಾರೆ. ಆಕಾಶ್​ ಕಶ್ಯಪ್​ ಈ ಸಿನಿಮಾಕ್ಕೆ ಆಕ್ಷನ್​ ಕಟ್ ಹೇಳಿದ್ದಾರೆ.

ಅಯ್ಯನ ಮನೆ ವೆಬ್​ ಸೀರಿಸ್​ನಲ್ಲಿ ಮಿಂಚು

ಝೀ5ನಲ್ಲಿ ರಿಲೀಸ್​​ ಆಗಿದ್ದ ಅಯ್ಯನ ಮನೆ ಸಿನಿಮಾದಲ್ಲಿ ಖುಷಿ ರವಿ ನಟಿಸಿದ್ದರು. ಇದೊಂದು ಕ್ರೈಂ ಥ್ರಿಲ್ಲರ್​​, ಆಧ್ಯಾತ್ಮದ ಕತೆಯ ಸಿನಿಮಾವಾಗಿದೆ.

ಖುಷಿ ರವಿ ಸಿನಿಮಾಗಳಿವು

ಖುಷಿ ರವಿ ದಿಯಾ ಸಿನಿಮಾ ನಂತರ ಕನ್ನಡ, ತೆಲುಗು ಸಿನಿಮಾದಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಫುಲ್​ ಮೀಲ್ಸ್​ ಇತ್ತೀಚೆಗೆ ರಿಲೀಸ್ ಆದ ಸಿನಿಮಾ. ತೆಲುಗಿನ ಪಿಂಡಂನಲ್ಲಿ ನಟಿಸಿದ್ದಾರೆ.