ಕಾಕ್ಟೇಲ್ ಕೃತಿಯ ಮಾದಕ ನೋಟ

ರಮೇಶ್​ ಕುಮಾರ್​​ ಬಿ ಎಡಮೋಳೆ

ಕಾಕ್ಟೇಲ್ ಕೃತಿಯ ಮಾದಕ ನೋಟ

ಬಾಲಿವುಡ್‌ನ ಬಹುನಿರೀಕ್ಷಿತ 'ಕಾಕ್ಟೇಲ್ 2' ಚಿತ್ರದ ವರ್ಕಿಂಗ್ ಸ್ಟಿಲ್ಸ್‌ಗಳನ್ನು ನಟಿ ಕೃತಿ ಸನೂನ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಗ್ಲಾಮರಸ್ ಹಾಗೂ ವಿಭಿನ್ನ ಲುಕ್‌ಗಳು ಪ್ರೇಕ್ಷಕರ ಕಣ್ಣು ಕೋರೈಸುವಂತಿದೆ.

ಚಿತ್ರದ ಬಿಡುಗಡೆ ದಿನಾಂಕ

ಬಹುನಿರೀಕ್ಷಿತ 'ಕಾಕ್ಟೇಲ್ 2' ಚಲನಚಿತ್ರವು ಇದೇ ಜೂನ್ 19 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅತ್ಯಂತ ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ.

ದೈತ್ಯ ತಾರಾಗಣ

ಈ ಚಿತ್ರದಲ್ಲಿ ಬಾಲಿವುಡ್ ಚಾಕೊಲೇಟ್ ಬಾಯ್ ಶಾಹಿದ್ ಕಪೂರ್, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಗ್ಲಾಮರ್ ಬ್ಯೂಟಿ ಕೃತಿ ಸನೂನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೃತಿ ಸನೂನ್ ಪಾತ್ರದ ಶೈಲಿ

ಈ ಚಿತ್ರದಲ್ಲಿ ನಟಿ ಕೃತಿ ಸನೂನ್ ಅವರು ಪ್ರೇಕ್ಷಕರು ಮೆಚ್ಚಿಕೊಳ್ಳುವಂತಹ ಒಂದು ವಿಭಿನ್ನ ಹಾಗೂ ಪಕ್ಕಾ ರೋಮ್ಯಾಂಟಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಪಾತ್ರದ ಫೋಟೋ ಶೇರ್​

ಚಿತ್ರದ ಬಿಡುಗಡೆಗೆ ಮುನ್ನವೇ ಕೃತಿ ಸನೂನ್ ಅವರು ಚಿತ್ರದಲ್ಲಿನ ತಮ್ಮ ಪಾತ್ರದ ಹಲವು ಆಕರ್ಷಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿದ ಕುತೂಹಲ

ಕೃತಿ ಅವರು ಶೇರ್ ಮಾಡಿರುವ ಈ ಸುಂದರ ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.

ತ್ರಿಕೋನ ಪ್ರೇಮಕಥೆಯ ಮುನ್ಸೂಚನೆ

ಶಾಹಿದ್ ಕಪೂರ್, ರಶ್ಮಿಕಾ ಮತ್ತು ಕೃತಿ ಸನೂನ್ ಅವರ ಕಾಂಬಿನೇಷನ್ ನೋಡುತ್ತಿದ್ದರೆ, ಈ ಚಿತ್ರವು ಪ್ರೇಕ್ಷಕರಿಗೆ ಒಂದು ಅದ್ಭುತ ಪ್ರೇಮಕಾವ್ಯವನ್ನು ಉಣಬಡಿಸಲಿದೆ ಎಂಬ ಮುನ್ಸೂಚನೆ ಸಿಗುತ್ತಿದೆ.

ಬಿಕಿನಿ ಫೋಟೋಗಳು ವೈರಲ್​

ಕೃತಿ ಸನೂನ್​ ಅವರ ಬಿಕಿನಿ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಬಿಕಿನಿ ಅವತಾರದಲ್ಲಿ ಕೃತಿಯ ಮೈಮಾಟವನ್ನು ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಕಾಮೆಂಟ್​ಗಳ ಸುರಿಮಳೆ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೃತಿ ಅವರ ಮಾದಕ ಫೋಟೋಗಳನ್ನು ಕಣ್ತುಂಬಿಕೊಂಡಿರುವ ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ಕೃತಿಯ ಅಂದವನ್ನು ಹೊಗಳುತ್ತಿದ್ದಾರೆ.