ಬಾಲಿವುಡ್ನಲ್ಲಿ ಸೂಪರ್ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ಕೃತಿ ಸನೋನ್, ಇತ್ತೀಚೆಗೆ ನಡೆದ 'ಪಿಂಕ್ವಿಲ್ಲಾ ಸ್ಕ್ರೀನ್ ಮತ್ತು ಸ್ಟೈಲ್ ಐಕಾನ್ಸ್' ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಅವಾರ್ಡ್ ಗೆದ್ದ ನಟಿ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವಾರು ಅರ್ಹ ಕಲಾವಿದರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ವೇದಿಕೆಯಲ್ಲಿ ಕೃತಿ ಕೂಡ ಮಿಂಚಿದರು.
'ತೇರೆ ಇಷ್ಕ್ ಮೇ' ಚಿತ್ರಕ್ಕೆ
'ತೇರೆ ಇಷ್ಕ್ ಮೇ' ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ ಪರಮ ಸುಂದರಿ. ತಮ್ಮ ಅಭಿಮಾನಿಗಳಿಗೆ ಹಾಗೂ ಚಿತ್ರರಂಗದ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.
ಹಸಿರು ಬಣ್ಣದ ಕಟ್ಔಟ್
ಹಸಿರು ಬಣ್ಣದ ಕಟ್ಔಟ್ ಡ್ರೆಸ್ನಲ್ಲಿ ಮಿರ ಮಿರ ಮಿಂಚಿದ ಕೃತಿ ಸನೋನ್, ಫ್ಯಾನ್ಸ್ ಮಾತ್ರವಲ್ಲದೇ ನೋಡುಗರ ಹುಬ್ಬೇರಿಸಿದ್ದು ವಿಶೇಷ.
ಸಖತ್ ಮಿಂಚಿಂಗ್
ಹಸಿರು ಬಣ್ಣದ ಉಡುಗೆಯಲ್ಲಿ ಮಿಂಚಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಹಂಚಿಕೊಂಡಿದ್ದಾರೆ