ಅಮ್ಮನ ಮದುವೆ ಸೀರೆ; ಖುಷಿ ಮೂಡ್ ನಲ್ಲಿ ಕೃಷಿ ತಾಪಂಡ

ಮಮತಾ

ಅಮ್ಮನ ಮದುವೆ ಸೀರೆ; ಖುಷಿ ಮೂಡ್ ನಲ್ಲಿ ಕೃಷಿ ತಾಪಂಡ

ಕೃಷಿ ತಾಪಂಡರ ಗೆಳೆಯ ವೈಶಾಖ್​ ಆತ್ಮಹತ್ಯೆ ಮಾಡಿಕೊಂಡ ನಂತರ ಸಾಕಷ್ಟು ಕುಗ್ಗಿ ಹೋಗಿದ್ದರು. ಅವರ ಬಗ್ಗೆ ಕೇಳಿ ಬರುತ್ತಿದ್ದ ಟೀಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ನೋವಿನ ಮಧ್ಯೆ ಇನ್​ಸ್ಟಾಗ್ರಾಮ್​ನಲ್ಲಿ ನೂತನ ಫೋಟೋ ಶೂಟ್​ನ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ಆ ಒಂದು ದಿನ ಎಂದು ಕ್ಯಾಪ್ಶನ್​

ಆ ಒಂದು ದಿನ ಎಂದು ಕ್ಯಾಪ್ಶನ್​ ಹಾಕಿ. ಅಮ್ಮನ ಮದುವೆಯ ಸೀರೆ ಎಂದು ನೂತನ ಫೋಟೋ ಶೂಟ್ ಮಾಡಿಸಿಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಪಟಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿ ನಗ್ತಿರಿ, ಧೈರ್ಯವಾಗಿರಿ ಎಂದು ಹಾರೈಸಿದ್ದಾರೆ.

ಆ ಮನೆಲಿರೋಕೆ ಆಗೋಲ್ಲ

ಗೆಳೆಯ ಮೃತಪಟ್ಟ ಮನೆಯಲ್ಲಿ ಇರೋಕೆ ಸಾಧ್ಯವಿಲ್ಲ. ಆದರೆ, ಇನ್ನೂಅದರ ಬಾಡಿಗೆ ಕಟ್ತಿದ್ದೇನೆ. ಒಂದೊಂದು ಕಾರ್ನರ್ ಇಷ್ಟಪಟ್ಟು ಖರೀದಿ ಮಾಡಿದ್ದು. ಬಿಟ್ಟಿರೋಕೆ ಮನಸ್ಸಿಲ್ಲ..ಅಲ್ಲಿರೋಕು ಸಾಧ್ಯವಿಲ್ಲ ಎಂದು ಪಾಡ್​ಕಾಸ್ಟ್​ವೊಂದರಲ್ಲಿ ಹೇಳಿಕೊಂಡಿದ್ದರು.

ಶಿವನ ಧ್ಯಾನದಲ್ಲಿ ಕೃಷಿ

ಕೃಷಿ ಅವರು ಇತ್ತೀಚೆಗೆ ಶಿವನ ಲಿಂಗಕ್ಕೆ ಪೂಜೆ ಸಲ್ಲಿಸಿದ ವಿಡಿಯೋವನ್ನು ಹಂಚಿಕೊಂಡಿದ್ದರು. ಕೆಲವೊಮ್ಮೆ ನೋವು ನಿವಾರಣೆಗೆ ದೇವರ ಧ್ಯಾನ ಒಂದು ಥೆರಪಿ ಎಂತಲೇ ಹೇಳಬಹುದು. ಈ ವಿಡಿಯೋಗೂ ಹಲವರು ಅವರಿಗೆ ಧೈರ್ಯ ತುಂಬುವ ಕಾಮೆಂಟ್ ಮಾಡಿದ್ದರು.

ಹೌ ಆರ್​ ಯು ಅಂದ್ರ ಬ್ಲಾಂಕ್​ ಆಗ್ತೇನೆ

ನನ್ನ ಲೈಫ್​ನಲ್ಲಿ ಏನಾಗುತ್ತಿದೆ ಎನ್ನುವ ಅರಿವೇ ಇಲ್ಲ. ಒಂದು ಸಮಸ್ಯೆಯಿಂದ ಮೇಲೆದ್ದು ಬಂದರೆ ಮತ್ತೊಂದು ಹೀಗೆ ಸಮಸ್ಯೆಗಳ ಸಾಲು ಜೀವನದಲ್ಲಿ ಬಿರುಗಾಳಿ ಎಬ್ಬಿಸಿದೆ. ಒಮ್ಮೊಮ್ಮೆ ಹೆಣ್ಣಾಗಿ ಹುಟ್ಟಿದ್ದಾದರೂ ಯಾಕೆ ಎಂದೆನಿಸಿಬಿಡುತ್ತದೆ. ಯಾರಾದರೂ ಕರೆ ಮಾಡಿ ಅಥವಾ ಮುಂದೆ ಬಂದು ಹೌ ಆರ್​ ಯೂ ಎಂದರೆ ಬ್ಲಾಂಕ್​ ಆಗ್ತೇನೆ. ಯಾಕಂದ್ರೆ ನಾನು ಹೇಗಿದ್ದೀನೋ ನನಗೆ ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು ಕೃಷಿ

ವ್ಯಂಗ್ಯ, ಟೀಕೆ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ

ನನ್ನ ಹೃದಯ ಒಡೆದು ಚೂರಾಗಿದ್ರೂ ನಾನು ಕೆಲಸ ಮಾಡ್ಬೇಕು, ನನ್ನ ಮೆಡಿಕಲ್​ ಬಿಲ್​ ನಾನೇ ಕಟ್ಬೇಕು. ಖರ್ಚು ವೆಚ್ಚ ನಾನೆ ನೋಡ್ಕೋಬೇಕು. ಯಾರೇ ನನ್ನ ಬಗ್ಗೆ ನೆಗೆಟಿವ್ ಮಾತನಾಡಿದರೂ ಅವರ್ಯಾರು ಹಣ ಕೊಡೋದಿಲ್ಲ ನನಗಾಗಿ ನಾನೆ ದುಡಿಯಬೇಕು. ಹೀಗಾಗಿ ಇಷ್ಟು ಬೇಗ ಆರಾಮಾದ್ರಾ ಎಂದು ವ್ಯಂಗ್ಯವಾಗಿ ಮಾತನಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಕೃಷಿ ಹೇಳಿದ್ದಾರೆ.

ನೋವಿನ ಜೊತೆ ಬದುಕಲು ಕಲಿಯುತ್ತಿದ್ದೇನೆ

ನೋವಿನ ಜೊತೆಗೆ ಬದುಕೋದನ್ನು ಕಲಿಯುತ್ತಿದ್ದೇನೆ ಎಂದು ಮನೆಯ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಫೋಟೋಗಳನ್ನು ಇತ್ತೀಚೆಗೆ ಕೃಷಿ ತಾಪಂಡ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು.

ಕೃಷಿ ಸಿನಿ ಪಯಣ

ಮಾಡೆಲ್​ ಆಗಿ ವೃತ್ತಿ ಜೀವನ ಆರಂಭಿಸಿದ್ದ ಕೃಷಿ ತಾಪಂಡ, ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾ ಮೂಲಕ ಹೆಚ್ಚು ಇಷ್ಟವಾಗುತ್ತಾರೆ. ಬಿಗ್​ಬಾಸ್​ ಮಾಜಿ ಸ್ಪರ್ಧಿ. ಅಕಿರ, ಇರಾ, ಭರಾಟೆ, ಕಾಳಿದಾಸ ಕನ್ನಡ ಮೇಷ್ಟ್ರು, ಎರಡು ಕನಸು, ಲಂಕೆ, ರೂಪಾಯಿ, ಗಣ ಸಿನಿಮಾದಲ್ಲಿ ನಟಿಸಿದ್ದಾರೆ.